Home ದಾವಣಗೆರೆ ತಾಲಿಬಾನ್‌ನ ಹೆಣ್ಣುಮಕ್ಕಳ ಶಿಕ್ಷಣ ನಿಷೇಧ ಸಮರ್ಥಿಸಿದ ಜಾಕಿರ್ ನಾಯ್ಕ್: ಭಾರತ, ಪಾಕ್, ಅಫ್ಘಾನ್‌ನಲ್ಲಿ ಭುಗಿಲೆದ್ದ ಆಕ್ರೋಶ
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ತಾಲಿಬಾನ್‌ನ ಹೆಣ್ಣುಮಕ್ಕಳ ಶಿಕ್ಷಣ ನಿಷೇಧ ಸಮರ್ಥಿಸಿದ ಜಾಕಿರ್ ನಾಯ್ಕ್: ಭಾರತ, ಪಾಕ್, ಅಫ್ಘಾನ್‌ನಲ್ಲಿ ಭುಗಿಲೆದ್ದ ಆಕ್ರೋಶ

Share
ತಾಲಿಬಾನ್‌
Share

ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು ಹೆಣ್ಣುಮಕ್ಕಳ ಉನ್ನತ ಶಿಕ್ಷಣದ ಮೇಲೆ ಹೇರಿರುವ ನಿಷೇಧವನ್ನು ವಿವಾದಿತ ಇಸ್ಲಾಮಿಕ್ ಪ್ರಚಾರಕ ಜಾಕಿರ್ ನಾಯ್ಕ್ ಸಮರ್ಥಿಸಿಕೊಂಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಈ ಹೇಳಿಕೆಯ ಮೂಲಕ ಅವರು ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಾಗರಿಕರು ಹಾಗೂ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಭಾರತದಿಂದ ಪರಾರಿಯಾಗಿ ಮಲೇಷ್ಯಾದಲ್ಲಿ ತಲೆಮರೆಸಿಕೊಂಡಿರುವ ಜಾಕಿರ್ ನಾಯ್ಕ್, ಭದ್ರತಾ ಕಾರಣಗಳು ಮತ್ತು ಮಹಿಳಾ ಶಿಕ್ಷಕರ ಕೊರತೆಯಿಂದಾಗಿ ತಾಲಿಬಾನ್ ಸರ್ಕಾರವು ಹೆಣ್ಣುಮಕ್ಕಳ ಶಿಕ್ಷಣವನ್ನು ತಾತ್ಕಾಲಿಕವಾಗಿ ವಿಳಂಬಗೊಳಿಸಿದೆ ಎಂದು ವಿವರಿಸಲು ಯತ್ನಿಸಿದ್ದರು. ನಾಯ್ಕ್ ಅವರ ಈ ನಡೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ನಾಯ್ಕಗೆ ಆಶ್ರಯ ನೀಡಿರುವುದನ್ನು ಹಲವರು ಪ್ರಶ್ನಿಸಿದ್ದಾರೆ.

ವಿವಾದಾತ್ಮಕ ಸಮರ್ಥನೆ: ತಾಲಿಬಾನ್‌ನೊಂದಿಗೆ ತಾನು ವೈಯಕ್ತಿಕವಾಗಿ ಚರ್ಚಿಸಿರುವುದಾಗಿ ಹೇಳಿಕೊಂಡಿರುವ ಜಾಕಿರ್ ನಾಯ್ಕ್, ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣವನ್ನು ಸಂಪೂರ್ಣವಾಗಿ ನಿಷೇಧಿಸಿಲ್ಲ ಬದಲಿಗೆ ಭದ್ರತೆ ಮತ್ತು ಮಹಿಳಾ ಶಿಕ್ಷಕರ ಲಭ್ಯತೆವರೆಗೂ ಮುಂದೂಡಲಾಗಿದೆ ಎಂದು ವಿಚಿತ್ರ ಸಮರ್ಥನೆ ನೀಡಿದ್ದಾರೆ.

ಯುನೆನ್ಸಿಫ್ (UNICEF) ವರದಿ ಖಂಡನೆ: ನಾಯ್ಕ್ ಅವರ ವಾದವನ್ನು ತಳ್ಳಿಹಾಕಿರುವ ಯುನಿಸೆಫ್, 2021 ರಿಂದ ಅಫ್ಘಾನಿಸ್ತಾನದಲ್ಲಿ ಸುಮಾರು 2.6 ಮಿಲಿಯನ್‌ಗೂ ಅಧಿಕ ಹೆಣ್ಣುಮಕ್ಕಳು ಮಾಧ್ಯಮಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಪ್ರೌಢಶಾಲಾ ಶಿಕ್ಷಣ ನಿಷೇಧಿಸಲ್ಪಟ್ಟಿರುವಾಗ ಮುಂದಿನ ಪೀಳಿಗೆಗೆ ಮಹಿಳಾ ಶಿಕ್ಷಕರು ಎಲ್ಲಿಂದ ಬರಬೇಕು ಎಂದು ವಿದ್ವಾಂಸರು ಪ್ರಶ್ನಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶ: ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಿ ಯೂಸುಫ್‌ಜಾಯ್ ಅವರ ತಂದೆ ಜಿಯಾವುದ್ದೀನ್ ಯೂಸುಫ್‌ಜಾಯ್, ಅಫ್ಘನ್ ಸಂಸದರಾದ ಮರಿಯಮ್ ಸೊಲೈಮನ್‌ಖಿಲ್ ಸೇರಿದಂತೆ ಭಾರತ, ಪಾಕ್ ಹಾಗೂ ಅಫ್ಘಾನ್‌ನ ಪ್ರಮುಖ ಚಿಂತಕರು ನಾಯ್ಕ್ ಹೇಳಿಕೆಯನ್ನು ಖಂಡಿಸಿದ್ದು, ಮಲೇಷ್ಯಾ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles