ಇಸ್ಲಾಮಾಬಾದ್ / ನವದೆಹಲಿ: ಪಾಕಿಸ್ತಾನದ ಮಾಜಿ ಗೃಹ ಸಚಿವ ಮತ್ತು ಅವಾಮಿ ಮುಸ್ಲಿಂ ಲೀಗ್ (AML) ನಾಯಕ ಶೇಖ್ ರಶೀದ್ ಅಹಮದ್, ನಿಷೇಧಿತ ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಯ ಉನ್ನತ ಕಮಾಂಡರ್‌ಗಳೊಂದಿಗೆ ವೇದಿಕೆ ಹಂಚಿಕೊಳ್ಳುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.
ಇದೇ ವೇಳೆ ಭಾರತದ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ ಅವರು, ಭಾರತವು ಪಾಕಿಸ್ತಾನದತ್ತ ಕಣ್ಣೆತ್ತಿ ನೋಡಿದರೆ ಅಲ್ಲಾಹು ಭಾರತವನ್ನು ನಾಶಮಾಡುತ್ತಾನೆ ಹಾಗೂ ಭಾರತದಲ್ಲಿ ದೇವಾಲಯದ ಗಂಟೆಗಳಾಗಲಿ ಅಥವಾ ಪಕ್ಷಿಗಳ ಕೂಗಾಗಲಿ ಕೇಳಿಸುವುದಿಲ್ಲ ಎಂದು ಭಾರತಕ್ಕೆ ನೇರ ಬೆದರಿಕೆ ಒಡ್ಡಿದ್ದಾರೆ. ಇಮ್ರಾನ್ ಖಾನ್ ಸರ್ಕಾರದಲ್ಲಿ (2020-2022) ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದ ಶೇಖ್ ರಶೀದ್ ಅವರ ಈ ಉಗ್ರ ಪರ ನಿಲುವು ಮತ್ತು ಬೆದರಿಕೆ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.





Leave a comment