Home ದಾವಣಗೆರೆ ಮಲೆನಾಡಿನಲ್ಲಿ ಕಡಿಮೆಯಾದ ಮಳೆ, ಒಳಹರಿವಿನಲ್ಲಿ ಭಾರೀ ಕುಸಿತ: ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ: 172.1 ಅಡಿ!
ದಾವಣಗೆರೆಬೆಂಗಳೂರು

ಮಲೆನಾಡಿನಲ್ಲಿ ಕಡಿಮೆಯಾದ ಮಳೆ, ಒಳಹರಿವಿನಲ್ಲಿ ಭಾರೀ ಕುಸಿತ: ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ: 172.1 ಅಡಿ!

Share
ಭದ್ರಾ ಜಲಾಶಯ
Share

ಶಿವಮೊಗ್ /ದಾವಣಗೆರೆ: ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಜಲಾಶಯದ ನೀರಿನ ಮಟ್ಟದಲ್ಲಿ ಸ್ಥಿರ ಏರಿಕೆ ಕಂಡುಬರುತ್ತಿದ್ದು, ಆಗಸ್ಟ್ 13ರ ಬೆಳಗಿನ 6 ಗಂಟೆಯ ವರದಿಯಂತೆ ಡ್ಯಾಂ ನೀರಿನ ಮಟ್ಟ 172 ಅಡಿ 1 ಇಂಚಿಗೆ ತಲುಪಿದೆ.

186 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಭದ್ರಾ ಜಲಾಶಯದಲ್ಲಿ ಪ್ರಸ್ತುತ 55.139 TMC ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 4,403 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ವಿವಿಧ ನಾಲೆ ಹಾಗೂ ನದಿ ಮೂಲಕ 201 ಕ್ಯೂಸೆಕ್ ಹೊರಹರಿವು ಹೊರಗೆ ಹರಿಯುತ್ತಿದೆ.

ಇಂದಿನ ನೀರಿನ ವಿವರ (13-08-2026):

ಗರಿಷ್ಠ ಮಟ್ಟ: 186 ಅಡಿ (71.535 TMC)

ಇಂದಿನ ನೀರಿನ ಮಟ್ಟ: 172 ಅಡಿ 1 ಇಂಚು (55.139 TMC)

ಒಳಹರಿವು: 4,403 ಕ್ಯೂಸೆಕ್

ಹೊರಹರಿವು: 201 ಕ್ಯೂಸೆಕ್ (ರಿವರ್ ಸ್ಲೂಯಿಸ್: 100, ಆವಿ ಪ್ರಮಾಣ: 101 ಕ್ಯೂಸೆಕ್)

ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ:

ಕಳೆದ ವರ್ಷ ಇದೇ ದಿನ (13-08-2025) ಜಲಾಶಯದ ನೀರಿನ ಮಟ್ಟ 184 ಅಡಿ 3 ಇಂಚು ತಲುಪಿ ಭರ್ತಿಯಾಗುವ ಹಂತದಲ್ಲಿತ್ತು ಹಾಗೂ 69.346 TMC ನೀರು ಸಂಗ್ರಹವಿತ್ತು. ಅಲ್ಲದೆ ಜಲಾಶಯಕ್ಕೆ 11,007 ಕ್ಯೂಸೆಕ್ ಒಳಹರಿವು ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಳಹರಿವಿನಲ್ಲಿ ಕೊಂಚ ಇಳಿಮುಖ ಕಂಡುಬಂದಿದ್ದರೂ, ಪ್ರಸ್ತುತ ನೀರು ಸಂಗ್ರಹವು ಕುಡಿಯುವ ನೀರು ಹಾಗೂ ಕೃಷಿ ಅಗತ್ಯಗಳಿಗೆ ಆಸರೆಯಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles