SUDDIKSHANA KANNADA NEWS/ DAVANAGERE/ DATE:28-03-2025
ಬೆಂಗಳೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಹೈಕಮಾಂಡ್ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಇನ್ನು ಅಪ್ಪ ಮಗ ಯಾವೆಲ್ಲಾ ನಾಯಕರನ್ನು ರಾಜಕೀಯವಾಗಿ ಮುಗಿಸಿದರು ಎಂಬ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದಾರೆ.
ಮಾತ್ರವಲ್ಲ, ಅವರದ್ದೇ ಆದ ವ್ಯಾಖ್ಯಾತ ರೀತಿಯಲ್ಲಿಯೂ ವಿಮರ್ಶೆ ಮಾಡಿದ್ದಾರೆ. ಯತ್ನಾಳ್ ಉಚ್ಚಾಟನೆ ಆಗುತ್ತಿದ್ದಂತೆ ಉತ್ತರ ಕರ್ನಾಟಕ ಭಾಗದ ಯತ್ನಾಳ್ ಹಿಂಬಾಲಕರು ನಾವು ಬಿಜೆಪಿ ಬೆಂಬಲಿಸುವುದಿಲ್ಲ ಎಂದು ಬಹಿರಂಗವಾಗಿಯೇ
ಅಸಮಾಧಾನ ಹೊರ ಹಾಕಿದ್ದರು. ಆದ್ರೆ, ಈಗ ದಿನ ಕಳೆದಂತೆ ಒಂದೊಂದೇ ಪೋಸ್ಟ್ ಗಳು ಬರುತ್ತಿವೆ.
ಅಪ್ಪ-ಮಗ ಸೇರಿ ಮುಗಿಸಿದ ಹಿಂದೂಗಳ ಪರ ಹೋರಾಟ ಮಾಡುತ್ತಿದ್ದ ನಾಯಕರು ರಾಜಕೀಯ ಮುಗಿಸಿದರು. ಇಂಥವರಿಂದ ಬಿಜೆಪಿ ಬಲಿಷ್ಠಗೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದ್ದಾರೆ.
ಅನಂತಕುಮಾರ ಅವರು ಕೊನೆಯವರೆಗೂ ಅಧಿಕಾರದಲ್ಲಿದ್ದರೂ ಕರ್ನಾಟಕದಲ್ಲಿ ಏನು ಮಾಡಲು ಆಗುತ್ತಿರಲಿಲ್ಲ. ಇಲ್ಲಿ ಯಡಿಯೂರಪ್ಪರದ್ದೇ ಪಾರುಪತ್ಯ ಇತ್ತು.
ಕೆ. ಎಸ್. ಈಶ್ವರಪ್ಪ ಖತಂ
ಹೇಳಿಕೊಟ್ಟ ಮಾತು ಕಟ್ಟಿಕೊಟ್ಟ ಬುತ್ತಿ ಜಾಸ್ತಿ ಹೊತ್ತು ಇರಲ್ಲ ಎಂಬುದಕ್ಕೆ ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಸಾಕ್ಷಿ. ಸುಖಾಸುಮ್ಮನೆ ಬಿಎಸ್ ಯಡಿಯೂರಪ್ಪರ ವಿರುದ್ಧ ಟೀಕಾಪ್ರಹಾರ ಮಾಡಿ ತಮ್ಮ ರಾಜಕೀಯ ಜೀವನಕ್ಕೆ ತಡೆ ತಂದುಕೊಂಡರು. ಹೈಕಮಾಂಡ್ ಸಹ ಇವರನ್ನು ಗಣನೆಗೆ ತೆಗೆದುಕೊಳ್ಳದೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಸೂಚಿಸಿತು.
ಅನಂತಕುಮಾರ ಹೆಗಡೆ:
ಒಳ್ಳೆಯ ನಾಯಕ. ಆದರೆ ಸಂವಿಧಾನ ಬದಲಾಯಿಸಲು ಬಂದಿದ್ದೇವೆ ಎಂಬ ಮಾತು ಬಿಜೆಪಿ ಹೈಕಮಾಂಡ್ ಗೆ ರುಚಿಸಲಿಲ್ಲ. ಮಾತ್ರವಲ್ಲ, ಕರ್ನಾಟಕದಲ್ಲಿ ಹಿಂದೂ ಫೈರ್ ಬ್ರಾಂಡ್ ಆಗಿದ್ದರು. ಬಹಿರಂಗವಾಗಿಯೇ ಏನೇ ಇದ್ದರೂ ಮಾತನಾಡುತ್ತಿದ್ದರು.
ನಳೀನ್ ಕುಮಾರ್ ಕಟೀಲು:
ಸಂಘಟನೆ ನಾಯಕ, ಆದರೆ ಪಕ್ಷ ಕಟ್ಟುವುದರಲ್ಲಿ ಪಳಗಿರಲಿಲ್ಲ. ಸಂಘಟನೆ ಬೇರೆ, ಪಕ್ಷ ಮುನ್ನಡೆಸುವುದು ಬೇರೆ. ಅಲ್ಲದೇ ಸ್ಥಳೀಯ ಕಾರಣಗಳಿಂದ ಅವರಿಗೆ ಹಿನ್ನಡೆ ಆಯ್ತು. ಜೊತೆಗೆ ಆರ್ ಎಸ್ ಎಸ್ ನಲ್ಲಿ ಗುರುತಿಸಿಕೊಂಡು ಪ್ರಭಾವಿ ನಾಯಕರಾಗಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಪರ್ಧಿಸಲು ನಳೀನ್ ಕುಮಾರ್ ಕಟೀಲ್ ಗೆ ಟಿಕೆಟ್ ನಿರಾಕರಿಸಲಾಯಿತು.
ಸಿಟಿ ರವಿ:
ಬಿ. ಎಸ್. ಯಡಿಯೂರಪ್ಪರ ಅಡುಗೆ ಮನೆಯಲ್ಲಿ ವಿಧಾನಸಭೆ ಟೀಕೆಟ್ ಫೈನಲ್ ಆಗಲ್ಲ ಎಂಬ ಮಾತು ಇವರು ಶಾಸಕರಾಗಿ ಮತ್ತೆ ಆಯ್ಕೆ ಆಗುವುದಕ್ಕೆ ಅಡ್ಡಿಯಾಯಿತು. ಚಿಕ್ಕಮಗಳೂರಿನಲ್ಲಿಯೋ ಸೋತರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗೂ ಕುತ್ತು ಬಂತು. ಮಾತ್ರವಲ್ಲ, ಪರೋಕ್ಷವಾಗಿ ಯಡಿಯೂರಪ್ಪ ಮತ್ತು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಲೇ ಇದ್ದರು.
ಸೇಡಂಜಿ:
ಪ್ರಸ್ತುತ ರಾಜ್ಯಸಭಾ ಸದಸ್ಯರು..ಈಗಾಗಲೇ ೮೦ ವರ್ಷ ವಯಸ್ಸಿನ ಅಸುಪಾಸಿನಲ್ಲಿದ್ದಾರೆ.
ಡಿ. ವಿ. ಸದಾನಂದಗೌಡ:
ಕೇವಲ ಒಂದು kMF ಅಧ್ಯಕ್ಷ ಸ್ಥಾನ ಸಿಕ್ಕರೆ ಸಾಕು ಎಂದು ಗೋಗರೆಯುತ್ತಿದ್ದವರಿಗೆ ಕರೆದು ಸಿಎಂ ಸೀಟ್ ನಲ್ಲಿ ಕೂರಿಸಿದ್ದೇ ಬಿ. ಎಸ್. ಯಡಿಯೂರಪ್ಪ. ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡರು ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡಿದ್ದರು. ಆನಂತರ ನಿಧಾನವಾಗಿ ಯಡಿಯೂರಪ್ಪರಿಂದ ದೂರ ಉಳಿದಿದ್ದಾರೆ.
ಪ್ರತಾಪ್ ಸಿಂಹ:
ಯುವನಾಯಕ, ಆದರೆ ಬಿಜೆಪಿ ಹೈಕಮಾಂಡ್ ಏನೇನೋ ಸಬೂಬು ಹೇಳಿ ಲೋಕಸಭಾ ಟಿಕೆಟ್ ಕೊಡಲಿಲ್ಲ. ಅಂದಹಾಗೇ ಎಂಪಿ ಟಿಕೆಟ್ ಫೈನಲ್ ಮಾಡುವುದಕ್ಕೆ ಒಂದು ಕೋರ್ ಕಮಿಟಿ ಇರುತ್ತದೆ. ಅದರಲ್ಲಿ ಬಿಎಸ್ವೈ ಅವರು ಒಬ್ಬರು ಇದ್ದರು. ಬೆಳೆಯುವ ನಾಯಕನಿಗೆ ಹೆಚ್ಚಿನ ಮನ್ನಣೆ ನೀಡಲಿಲ್ಲ.
ಜಗದೀಶ್ ಶೆಟ್ಟರ್:
ಶೆಟ್ಟರ್ ಅವರನ್ನು ಸ್ಪೀಕರ್, ಮಂತ್ರಿ, ನಂತರ ಸಿಎಂ ಆಗಲು ಬಿ. ಎಸ್. ಯಡಿಯೂರಪ್ಪರ ಕೃಪಾಕಟಾಕ್ಷ ಇದ್ದೇ ಇತ್ತು. ಎರಡನೇಯ ಬಾರಿಗೆ ಬೊಮ್ಮಾಯಿ ಬದಲು ಶೆಟ್ಟರ್ ಸಿಎಂ ಆಗಲು ಬಿಎಸ್ವೈ ಒಪ್ಪಲಿಲ್ಲ. ಕೊನೆಗೆ ಬಿಜೆಪಿ ಹೈಕಮಾಂಡ್ ಶೆಟ್ಟರ್ ಅವರನ್ನು ಮೂಲೆಗೆ ತಳ್ಳಿತ್ತು. ಆದರೆ ಅವರು ಮತ್ತೆ ಎದ್ದು ನಿಂತರು. ಮತ್ತೊಂದು ಸ್ವಾರಸ್ಯಕರ ವಿಚಾರ ಎಂದರೆ ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಅನ್ನೇ ಕೊಡಲಿಲ್ಲ. ಕಾಂಗ್ರೆಸ್ ಸೇರಿ ಸೋತು ಮತ್ತೆ ಬಿಜೆಪಿ ಸೇರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾದರು.
ಬಿ. ಎಲ್. ಸಂತೋಷ್ :
ಬಿ. ಎಲ್. ಸಂತೋಷ್ ಆರ್ ಎಸ್ ಎಸ್ ಕಟ್ಟಾಳು. ಆದ್ರೆ, ಯಡಿಯೂರಪ್ಪ ಮತ್ತು ಅವರ ಮಕ್ಕಳಿಗಿಂತ ಬಿಜೆಪಿ ಹೈಕಮಾಂಡ್ ಜೊತೆ ಆತ್ಮೀಯತೆ ಹೊಂದಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಸಂತೋಷ್ ರ ಲೆಕ್ಕಾಚಾರ ಉಲ್ಟಾ ಆಯ್ತು. ಇದು ಯಡಿಯೂರಪ್ಪರಿಗೆ ಪ್ಲಸ್ ಆಯ್ತು. ರಾಜಕೀಯ ಜೀವನ ಖತಂ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಸೋ ಇನ್ನೂ ರಾಜಕೀಯದಲ್ಲಿದ್ದಾರೆ..
ಪ್ರಹ್ಲಾದ್ ಜೋಶಿ:
ಬೊಮ್ಮಾಯಿ ಬದಲಿಗೆ ಸಿಎಂ ಆಗಲು ಹವಣಿಸಿದರು ಇದೇ ಪ್ರಹ್ಲಾದ್ ಜೋಷಿ. ಆದ್ರೆ, ಬಿಎಸ್ವೈ ಒಪ್ಪಲಿಲ್ಲ.. ಯಾಕೆಂದರೆ ಬಿಎಸ್ವೈ ಸಿಎಂ ಸ್ಥಾನದಿಂದ ಇಳಿಯಲು ಇವರ ಕೊಡುಗೆ ಸಾಕಷ್ಟು ಇತ್ತು ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.
ಶ್ರೀರಾಮುಲು, ಸೋಮಣ್ಣ:
ಜನಾರ್ದನ ರೆಡ್ಡಿಯ ಜೊತೆ ಮಾತು ಬಿಟ್ಟಿದ್ದು ಮತ್ತು ಬಳ್ಳಾರಿಯ ರಣ ಭಯಂಕರ ರಾಜಕೀಯ ಇವರಿಗೆ ಹಿನ್ನಡೆಯುಂಟು ಮಾಡಿತು. ವಿಧಾನಸಭೆ ಉಪಚುನಾವಣೆಗೆ ಟಿಕೆಟ್ ಕೇಳಿದರು ಕೊಡಲಿಲ್ಲ. ಅ ಮುನಿಸು ಬಿಎಸ್ವೈ ಮೇಲೆ ಇವರಿಗಿದೆ.
ಜೆಡಿಎಸ್ ನಿಂದ ಕರೆದು ಕೊಂಡು ಬಂದು ಕೈ ಹಿಡಿದು ಬೆಳಸಿ ಮಂತ್ರಿ ಮಾಡಿದ ಬಿಎಸ್ವೈ ವಿರುದ್ದವೇ ಮಸಲತ್ತು ಮಾಡಲು ಹೋದರೇ ಸುಮ್ಮನಿದ್ದರಿರುತ್ತಾರೆಯೇ? ವಿಧಾನಸಭೆಯಲ್ಲಿ ಸೋತರು, ಎಂಪಿ ಚುನಾವಣೆಯಲ್ಲಿ ಬಿಎಸ್ವೈ ಆಶೀರ್ವಾದ
ಪಡೆದುಕೊಂಡು ಬಚವಾದರು.
ಯಾತ್ನಾಳ್ ಖತಂ:
ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎಂಬ ಗಾದೆ ಮಾತಿನಂತೆ ತಮ್ಮ ಮಾತಿನಿಂದ ತಾವೇ ತಮ್ಮ ರಾಜಕೀಯ ಜೀವನಕ್ಕೆ ಹಿನ್ನಡೆ ತಂದುಕೊಂಡರು ಬಸನಗೌಡ ಪಾಟೀಲ್ ಯತ್ನಾಳ್. ಬಿಎಸ್ವೈ ಅಧಿಕಾರದಲ್ಲಿ ಇದ್ದ ಕಾಲದಿಂದಲೂ ಹೀನಮಾನ ಅವರನ್ನು ಟೀಕಿಸುತ್ತಿದ್ದರು. ಅವರಿಗೆ ಬಿಜೆಪಿಯಿಂದ ವಿರಾಮ ಸಿಕ್ಕಿದೆ.
ಆರ್ ಎಸ್ ಎಸ್, ವಿಹೆಚ್ ಪಿ, ಶ್ರೀರಾಮಸೇನೆ, ಬಜರಂಗದಳ:
ಈ ಸಂಘಟನೆ ಗಳನ್ನು ಬಿಎಸ್ವೈ ಆಗಲಿ ಯಾರಿಂದಲೂ ಮುಗಿಸಲು ಆಗುವುದಿಲ್ಲ. ಯಾಕೆಂದರೆ ಈ ಸಂಘಟನೆಗಳು ಜಾತಿಯಿಂದ ಒಗ್ಗೂಡುವುದಿಲ್ಲ. ನಾಯಕರ ಜಾತಿಯ ಬಲ ಬಲಾದಿಂದ ಸ್ಥಾನ ಪಡೆಯುವುದಿಲ್ಲ. ಹಾಗಾಗಿ, ಯಾರೂ ಏನು ಮಾಡಲಾಗಲ್ಲ. ಇದೇ ರೀತಿಯಲ್ಲಿ ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ಅವರು ಮತ್ತು ಅವರ ಮಗ ಸೇರಿಕೊಂಡು ಒಳ್ಳೆಯ ನಾಯಕರು ಪ್ರಭಾವಿಯಾಗಲು ಬಿಡಲಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚಿಸಲಾಗುತ್ತಿದೆ.