Home ಕ್ರೈಂ ನ್ಯೂಸ್ ಪತ್ನಿಗೆ ನಿಂದನೆ ಪ್ರಶ್ನಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತ ಅರೂಪ್ ಸಾಹಾ ಹತ್ಯೆ: ಪಕ್ಷದ ಒಳಗೇ ಭುಗಿಲೆದ್ದ ಆಂತರಿಕ ಕಲಹ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪತ್ನಿಗೆ ನಿಂದನೆ ಪ್ರಶ್ನಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತ ಅರೂಪ್ ಸಾಹಾ ಹತ್ಯೆ: ಪಕ್ಷದ ಒಳಗೇ ಭುಗಿಲೆದ್ದ ಆಂತರಿಕ ಕಲಹ!

Share
ಬಿಜೆಪಿ
Share

ಪಾನಿಹಾಟಿ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾನಿಹಾಟಿ ಪ್ರದೇಶದಲ್ಲಿ, ಸ್ವಪಕ್ಷೀಯರೇ ನಡೆಸಿದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಿಜೆಪಿ ಕಾರ್ಯಕರ್ತ ಅರೂಪ್ ಸಾಹಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.

ಸ್ಥಳೀಯ ಉದ್ಯಮಿಯೊಬ್ಬರ ಮೇಲೆ ನಡೆದ ಹಲ್ಲೆಯನ್ನು ವಿರೋಧಿಸಿದ ಮಹಿಳಾ ಪದಾಧಿಕಾರಿಯೊಬ್ಬರ ಮೇಲೆ ಪಕ್ಷದ ಕೆಲ ಕಾರ್ಯಕರ್ತರು ನಿಂದನೆ ನಡೆಸಿದ್ದು, ಇದನ್ನು ಪ್ರಶ್ನಿಸಲು ಹೋದ ಪತಿಯನ್ನೇ ದುಷ್ಕರ್ಮಿಗಳು ಅಟ್ಟಾಡಿಸಿ ಕೊಲೆಗೈದಿದ್ದಾರೆ.

ಘಟನೆಯ ವಿವರದಂತೆ, ಪಾನಿಹಾಟಿ ಮಂಡಲ-1ರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಸ್ಥಳೀಯ ಉದ್ಯಮಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅದೇ ಮಂಡಲದ ಬಿಜೆಪಿ ಕಾರ್ಯದರ್ಶಿಯಾಗಿರುವ ರೂಮಾ ಸಾಹಾ (ಅರೂಪ್ ಸಾಹಾ ಅವರ ಪತ್ನಿ) ಈ ಕೃತ್ಯವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಇದರಿಂದ ಕೆರಳಿದ ಕೆಲ ಪಕ್ಷದ ಕಾರ್ಯಕರ್ತರು ರೂಮಾ ಸಾಹಾ ಅವರಿಗೆ ಅಸಭ್ಯವಾಗಿ ಬೈದು ನಿಂದಿಸಿದ್ದಾರೆ.

ತನ್ನ ಪತ್ನಿಗೆ ಅವಮಾನ ಮಾಡುವುದನ್ನು ತಡೆಯಲು ಬಂದ ಅರೂಪ್ ಸಾಹಾ ಅವರ ಮೇಲೆ ಗುಂಪೊಂದು ಏಕಾಏಕಿ ಹಲ್ಲೆ ನಡೆಸಿದೆ. ತೀವ್ರವಾಗಿ ಗಾಯಗೊಂಡಿದ್ದ ಅರೂಪ್ ಸಾಹ ಅವರನ್ನು ತಕ್ಷಣವೇ ಸಾಗರ್ ದತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಅವರು ಸಾವನ್ನಪ್ಪಿದ್ದಾರೆ.

ಟಿಎಂಸಿಯಿಂದ ಬಂದವರಿಂದಲೇ ಗಲಾಟೆ ಆರೋಪ: ಬಿಜೆಪಿ ಸೇರ್ಪಡೆಗೊಂಡಿರುವ ಮಾಜಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರ ಗುಂಪೇ ಈ ಕೃತ್ಯದ ಹಿಂದೆ ಇದೆ ಎಂದು ಮೃತ ಅರೂಪ್ ಸಾಹಾ ಅವರ ಪತ್ನಿ ರೂಮಾ ಸಾಹಾ ಗಂಭೀರ ಆರೋಪ ಮಾಡಿದ್ದು, ಇವರು ಪಕ್ಷದೊಳಗೆ ನಿರಂತರವಾಗಿ ಗೊಂದಲ ಹಾಗೂ ಅಶಾಂತಿ ಸೃಷ್ಟಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಬಿಜೆಪಿ ಶಾಸಕಿ ಖಂಡನೆ: ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸ್ಥಳೀಯ ಬಿಜೆಪಿ ಶಾಸಕಿ ರತ್ನ ದೆಬ್ನಾತ್, ಟಿಎಂಸಿಯಿಂದ ಬಿಜೆಪಿಗೆ ಬಂದವರಿಂದಲೇ ಈ ಅಶಾಂತಿ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಹಿಂಸಾಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಪೊಲೀಸರ ತನಿಖೆ ಚುರುಕು: ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ಪತ್ನಿಯ ದೂರು ಆಧರಿಸಿ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles