ದಾವಣಗೆರೆ: “ಭಾರತದ ಮಣ್ಣು, ಜಲ ನಮ್ಮದು. ಇಲ್ಲಿನ ಎಲ್ಲಾ ಧರ್ಮದವರು ನಮ್ಮ ಅಣ್ಣತಮ್ಮಂದಿರಿದ್ದಂತೆ. ಪರಸ್ಪರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಹಾಗೂ ಕೋಮು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಮುಂಬರುವ ಬಕ್ರೀದ್ ಹಬ್ಬ ಸೇರಿದಂತೆ ಇತರೆ ದಿನಗಳಲ್ಲಿ ಗೋಹತ್ಯೆ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು”. ‘ಗೋವು ರಾಷ್ಟ್ರೀಯ ಪಶು ಆಗಲಿ’ ಎಂದು ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಸುಭಾನ್ ಖಾನ್ ಹೇಳಿದ್ದಾರೆ.
ಈ ಕುರಿತು ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಹಾಗೂ ಕರ್ನಾಟಕ ಸರ್ಕಾರಕ್ಕೆ ಪತ್ರಕರ್ತರ ಮೂಲಕ ಮನವಿ ಸಲ್ಲಿಸಿರುವ ಅವರು, ಗೋಹತ್ಯೆ ಹಾಗೂ ಗೋ ಸಾಗಾಟದ ಹಿನ್ನೆಲೆಯಲ್ಲಿ ದೇಶದ ಹಲವೆಡೆ ನಡೆಯುತ್ತಿರುವ ಹಿಂಸಾಚಾರಗಳ ಬಗ್ಗೆ ಅವರು ಪತ್ರಿಕಾಗೋಷ್ಠಿಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದರು.
ಹಿಂಸಾಚಾರಕ್ಕೆ ಮುಕ್ತಿ ಸಿಗಲಿ:
“ಗೋ ಸಾಗಾಟದ ನೆಪದಲ್ಲಿ ನಡೆಯುವ ಹಲ್ಲೆಗಳು, ಕಾನೂನು ಪ್ರಕರಣಗಳಿಂದಾಗಿ ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ. ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದು, ಮಕ್ಕಳು ಅನಾಥರಾಗಿದ್ದಾರೆ. ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಘಟನೆಗಳನ್ನು ಗಮನಿಸಿರುವ ಮುಸ್ಲಿಂ ಮೌಲ್ವಿಗಳು ಈಗಾಗಲೇ ಗೋಹತ್ಯೆ ನಿಲ್ಲಿಸುವಂತೆ ಕರೆ ನೀಡಿದ್ದಾರೆ. ನಾವು ದೇಶದ ನೆಲದ ಕಾನೂನಿಗೆ ತಲೆಬಾಗಬೇಕಿದೆ” ಎಂದು ಸುಭಾನ್ ಖಾನ್ ತಿಳಿಸಿದ್ದಾರೆ.
ಅಕ್ರಮ ಮಾಂಸದ ಅಂಗಡಿ ಬಂದ್ ಮಾಡಲು ಆಗ್ರಹ:
ದಾವಣಗೆರೆ ನಗರದಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ತೆರೆದಿರುವ ಕಾನೂನುಬಾಹಿರ ಗೋಮಾಂಸದ ಅಂಗಡಿಗಳನ್ನು ಜಿಲ್ಲಾಡಳಿತ ತಕ್ಷಣವೇ ಬಂದ್ ಮಾಡಿಸಬೇಕು ಎಂದು ಪರಿಷತ್ ಒತ್ತಾಯಿಸಿದೆ.
‘ಗೋವು ರಾಷ್ಟ್ರೀಯ ಪಶು ಆಗಲಿ’:
ಹಿಂದೂ ಬಾಂಧವರ ಭಾವನೆಗಳನ್ನು ಗೌರವಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ಗೋವನ್ನು ‘ರಾಷ್ಟ್ರೀಯ ಪಶು’ ಎಂದು ಘೋಷಿಸಬೇಕು ಎಂದು ವಿಶ್ವ ಮುಸ್ಲಿಂ ಪರಿಷತ್ ಪ್ರಮುಖವಾಗಿ ಆಗ್ರಹಿಸಿದೆ. ಸಮಾಜದಲ್ಲಿ ಶಾಂತಿ, ಸಾಮರಸ್ಯ ನೆಲೆಸಲು ಕರ್ನಾಟಕ ಹಾಗೂ ದೇಶದ ಎಲ್ಲಾ ಮುಸ್ಲಿಂ ಬಾಂಧವರು ಈ ಮನವಿಗೆ ಸ್ಪಂದಿಸಬೇಕಾಗಿ ಪದಾಧಿಕಾರಿಗಳು ವಿನಂತಿಸಿದ್ದಾರೆ.
- Bakrid festival
- communal harmony
- cow as national animal
- Davanagere DC
- DAVANAGERE NEWS
- illegal beef stall closure
- Karnataka Muslim leaders
- stop cow slaughter appeal
- Subhan Khan
- Vishwa Muslim Parishat
- ಅಕ್ರಮ ಗೋಮಾಂಸ ಅಂಗಡಿ ಬಂದ್
- ಕರ್ನಾಟಕ ಮುಸ್ಲಿಂ ಒಕ್ಕೂಟ
- ಕೋಮು ಸೌಹಾರ್ದತೆ
- ಗೋಹತ್ಯೆ ನಿಷೇಧ ಮನವಿ
- ದಾವಣಗೆರೆ ಜಿಲ್ಲಾಧಿಕಾರಿ.
- ದಾವಣಗೆರೆ ಸುದ್ದಿ
- ಬಕ್ರೀದ್ ಹಬ್ಬ
- ರಾಷ್ಟ್ರೀಯ ಪಶು ಗೋವು
- ವಿಶ್ವ ಮುಸ್ಲಿಂ ಪರಿಷತ್
- ಸುಭಾನ್ ಖಾನ್





Leave a comment