ಲಕ್ನೋ: ದೆಹಲಿ ವಿಶ್ವವಿದ್ಯಾಲಯದ ಬಿಎ ಆನರ್ಸ್ ವಿದ್ಯಾರ್ಥಿನಿ ಹಾಗೂ ಯುಪಿಎಸ್‌ಸಿ (UPSC) ಪರೀಕ್ಷೆಯ ಆಕಾಂಕ್ಷಿಯಾಗಿದ್ದ ಯುವತಿಯನ್ನು ಅಪಹರಿಸಿ, ಮೂರು ದಿನಗಳ ಕಾಲ ಕೂಡಿಟ್ಟು ಗ್ಯಾಂಗ್‌ರೇಪ್ ಮಾಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಬರೋಬ್ಬರಿ 18 ಸಿಮ್ ಕಾರ್ಡ್‌ಗಳನ್ನು ಬದಲಾಯಿಸುತ್ತಾ ತಲೆಮರೆಸಿಕೊಂಡಿರುವ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಏನಿದು ಘಟನೆ?
ಮೂಲತಃ ಜೌನ್‌ಪುರದ ನಿವಾಸಿಯಾದ 19 ವರ್ಷದ ವಿದ್ಯಾರ್ಥಿನಿ ಮೇ 15 ರಂದು ದೆಹಲಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ತನಗೆ ಪರಿಚಿತನಾಗಿದ್ದ ಶಿವಂ ಯಾದವ್ ಎಂಬಾತನನ್ನು ಸಂಪರ್ಕಿಸಿದ್ದರು. ಆಕೆ ಲಕ್ನೋದ ಚಾರ್‌ಬಾಗ್ ರೈಲ್ವೆ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಶಿವಂ ಯಾದವ್ ಹಾಗೂ ಅವನ ಸ್ನೇಹಿತ ಶನಿ ಯಾದವ್ ಆಕೆಯನ್ನು ಪುಸಲಾಯಿಸಿ ರೈಲಿನಿಂದ ಕೆಳಗಿಳಿಸಿದ್ದಾರೆ. ಅಲ್ಲಿಂದ ಸುಶಾಂತ್ ಗಾಲ್ಫ್ ಸಿಟಿಯಲ್ಲಿರುವ ಕೊಠಡಿಯೊಂದಕ್ಕೆ ಕರೆದೊಯ್ದಿದ್ದಾರೆ.
ಅಲ್ಲಿ ಯುವತಿಯ ಕಾಫಿಗೆ ಅಮಲು ಪದಾರ್ಥ ಬೆರೆಸಿ ಪ್ರಜ್ಞೆ ತಪ್ಪುವಂತೆ ಮಾಡಲಾಗಿದೆ. ನಂತರ ಮೂರು ದಿನಗಳ ಕಾಲ ಆಕೆಯನ್ನು ಒತ್ತೆಯಾಳಾಗಿ ಇಟ್ಟುಕೊಂಡು, ಶಿವಂ, ಶನಿ ಹಾಗೂ ಮತ್ತೊಬ್ಬ ಅಪರಿಚಿತ ವ್ಯಕ್ತಿ ಸೇರಿ ಸರಣಿ ಅತ್ಯಾಚಾರ ಎಸಗಿದ್ದಾರೆ. ಮೇ 18 ರಂದು ಯುವತಿಯ ಆರೋಗ್ಯ ತೀವ್ರವಾಗಿ ಹದಗೆಟ್ಟಾಗ, ಆರೋಪಿಗಳು ಆಕೆಗೆ ರೈಲು ಟಿಕೆಟ್ ಕೊಡಿಸಿ ದೆಹಲಿಗೆ ಕಳುಹಿಸಿ ತಲೆಮರೆಸಿಕೊಂಡಿದ್ದಾರೆ.
18 ಸಿಮ್ ಕಾರ್ಡ್ ಬದಲಾವಣೆ!
ದೆಹಲಿ ತಲುಪಿದ ಸಂತ್ರಸ್ತೆ ರೈಲ್ವೆ ಹೆಲ್ಪ್‌ಲೈನ್ ಮೂಲಕ ದೂರು ದಾಖಲಿಸಿದ ನಂತರ ಪ್ರಕರಣ ಲಕ್ನೋ ಪೊಲೀಸರಿಗೆ ವರ್ಗಾವಣೆಯಾಗಿದೆ. ತನಿಖೆ ಆರಂಭಿಸುತ್ತಿದ್ದಂತೆ ಆರೋಪಿಗಳು ಮೊಬೈಲ್ ಲೋಕೇಷನ್ ಪತ್ತೆ ಹಚ್ಚದಂತೆ ತಡೆಯಲು ಸುಮಾರು 18 ಸಿಮ್ ಕಾರ್ಡ್‌ಗಳನ್ನು ಬದಲಾಯಿಸುತ್ತಾ, ಪದೇ ಪದೇ ತಮ್ಮ ಅಡಗುದಾಣಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಕಾರ್ಯಾಚರಣೆ ತೀವ್ರ:
ಪ್ರಕರಣದ ತನಿಖೆಗಾಗಿ ಲಕ್ನೋ ಪೊಲೀಸರು 4 ವಿಶೇಷ ತಂಡಗಳನ್ನು ರಚಿಸಿದ್ದು, ತಲೆಮರೆಸಿಕೊಂಡಿರುವ ಮುಖ್ಯ ಆರೋಪಿ ಶಿವಂ ಯಾದವ್ ಮತ್ತು ಆತನ ಸಹಚರ ಶನಿ ಯಾದವ್ ಬಂಧನಕ್ಕೆ ತಲಾ 25,000 ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಸದ್ಯ ಪೊಲೀಸರು ಒಬ್ಬ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗಾಗಿ ಪ್ರಯಾಗ್‌ರಾಜ್ ಸೇರಿದಂತೆ ಹಲವು ಕಡೆ ದಾಳಿ ನಡೆಸುತ್ತಿದ್ದಾರೆ. ಸಂತ್ರಸ್ತೆ ನ್ಯಾಯಾಲಯದ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಿದ್ದಾರೆ.
- 18 SIM cards swapped
- 18 ಸಿಮ್ ಕಾರ್ಡ್ಗಳು
- Delhi University student
- Lucknow gangrape case
- Lucknow police raid
- Shivam yadav lucknow
- Sushant golf city crime
- UP crime news 2026
- UPSC aspirant rape Lucknow
- ಕ್ರೈಮ್ ನ್ಯೂಸ್
- ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿನಿ
- ಯುಪಿಎಸ್‌ಸಿ ವಿದ್ಯಾರ್ಥಿನಿ ಮೇಲಿನ ದೌರ್ಜನ್ಯ
- ಲಕ್ನೋ ಗ್ಯಾಂಗ್‌ರೇಪ್ ಪ್ರಕರಣ
- ಲಕ್ನೋ ಪೊಲೀಸ್
- ಶಿವಂ ಯಾದವ್
- ಸುಶಾಂತ್ ಗಾಲ್ಫ್ ಸಿಟಿ





Leave a comment