Home ರಸ್ತೆಯ ಮಧ್ಯೆ ನಮಾಜ್ ಮಾಡಿದ ವ್ಯಕ್ತಿ: ಮಾನಸಿಕ ಅಸ್ವಸ್ಥನೆಂದು ಕುಟುಂಬಸ್ಥರ ವಾದ: ಆದ್ರೂ ಪೊಲೀಸರ ಕೈಗೊಂಡ ಕ್ರಮ ಇಂಟ್ರೆಸ್ಟಿಂಗ್!
Homeಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ರಸ್ತೆಯ ಮಧ್ಯೆ ನಮಾಜ್ ಮಾಡಿದ ವ್ಯಕ್ತಿ: ಮಾನಸಿಕ ಅಸ್ವಸ್ಥನೆಂದು ಕುಟುಂಬಸ್ಥರ ವಾದ: ಆದ್ರೂ ಪೊಲೀಸರ ಕೈಗೊಂಡ ಕ್ರಮ ಇಂಟ್ರೆಸ್ಟಿಂಗ್!

Share
ನಮಾಜ್
Share

ರಾಂಪುರ: ಉತ್ತರ ಪ್ರದೇಶದ ರಾಂಪುರದ ಜನನಿಬಿಡ ರಸ್ತೆಯ ಮಧ್ಯೆ ನಮಾಜ್ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಸಿವಿಲ್ ಲೈನ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ಶಾಹಬಾದ್ ಗೇಟ್ ಎಂಬಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಸಾರ್ವಜನಿಕ ಸ್ಥಳದಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಬಂಧಿತ ವ್ಯಕ್ತಿಯು ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ ಎಂದು ಆತನ ಕುಟುಂಬಸ್ಥರು ಹೇಳಿಕೊಂಡಿದ್ದಾರೆ.

ಈ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿರುವುದಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಸಿಂಗ್ ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಅನುಮತಿಯಿಲ್ಲದೆ ಧಾರ್ಮಿಕ ಪ್ರಾರ್ಥನೆ ಮಾಡುವುದನ್ನು ನಿಷೇಧಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles