Home ದಾವಣಗೆರೆ ₹10 ಹರಿದ ನೋಟಿಗೆ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್‌ಗೆ ಥಳಿತ: ವಿಷ ಸೇವಿಸಿ ಯುವಕ ಸಾವು!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

₹10 ಹರಿದ ನೋಟಿಗೆ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್‌ಗೆ ಥಳಿತ: ವಿಷ ಸೇವಿಸಿ ಯುವಕ ಸಾವು!

Share
ಡೆಲಿವರಿ
Share

ನವದೆಹಲಿ: ₹10 ಹರಿದ ನೋಟು ಬದಲಾಯಿಸಲು ಕೇಳಿದ್ದಕ್ಕೆ ಗ್ರಾಹಕನಿಂದ ಭೀಕರವಾಗಿ ಹಲ್ಲೆಗೊಳಗಾಗಿದ್ದ ಫ್ಲಿಪ್‌ಕಾರ್ಟ್ ಮಿನಿಟ್ಸ್  ಡೆಲಿವರಿ ಪಾರ್ಟ್‌ನರ್ ಸಮೀರ್ ಹುಸೇನ್ ಸೈಫಿ (24) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅಕ್ಟೋಬರ್ 4ರಂದು ಕಲ್ಯಾಣಪುರಿಯಲ್ಲಿ ನಡೆದ ಈ ಘಟನೆಯಲ್ಲಿ ಮನನೊಂದಿದ್ದ ಸಮೀರ್, ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ವೀಡಿಯೋ ರೆಕಾರ್ಡ್ ಮಾಡಿ ಕ್ರಿಮಿನಾಶಕ ಸೇವಿಸಿದ್ದರು. 16 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದ ಅವರು ಅಕ್ಟೋಬರ್ 20ರಂದು ಕೊನೆಯುಸಿರೆಳೆದಿದ್ದಾರೆ.

ಅಕ್ಟೋಬರ್ 4ರ ರಾತ್ರಿ ಸುಮಾರು 11.30ಕ್ಕೆ ಆರ್ಡರ್ ತಲುಪಿಸಲು ಹೋಗಿದ್ದ ವೇಳೆ ಗ್ರಾಹಕ ನೀಡಿದ ಹಣದಲ್ಲಿ ₹10 ನೋಟು ಹರಿದಿತ್ತು. ಅದನ್ನು ಬದಲಾಯಿಸಿಕೊಡುವಂತೆ ವಿನಂತಿಸಿದ ಸಮೀರ್‌ಗೆ ಬೆದರಿಕೆ ಹಾಕಿ, ಸಾರ್ವಜನಿಕವಾಗಿ ಮೂರು ಬಾರಿ ಕೆನ್ನೆಗೆ ಹೊಡೆದು ಕಿರುಕುಳ ನೀಡಲಾಗಿತ್ತು. “ನಾನು ಕಷ್ಟಪಟ್ಟು ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ, ಆದರೆ ನನ್ನ ಬಡತನ ಮತ್ತು ಮಧ್ಯಮ ವರ್ಗದ ಹಿನ್ನೆಲೆಯನ್ನು ಹಾಸ್ಯಮಾಡಿ ಹಲ್ಲೆ ನಡೆಸಿದ್ದು ನನ್ನ ಹೃದಯಕ್ಕೆ ತಾಗಿತು” ಎಂದು ಸಮೀರ್ ತಮ್ಮ ಕೊನೆಯ ವೀಡಿಯೋದಲ್ಲಿ ಕಣ್ಣೀರಿಡುತ್ತಾ ನೋವು ತೋಡಿಕೊಂಡಿದ್ದರು.

ಪೊಲೀಸ್ ದೂರಿನ ವಿಳಂಬ: ಹಲ್ಲೆಯ ನಂತರ ಕಲ್ಯಾಣಪುರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ತಕ್ಷಣ ಕ್ರಮ ಕೈಗೊಂಡಿಲ್ಲ ಎಂದು ಸಮೀರ್ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಆರೋಪಿಗಳ ಬಂಧನ: ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಈಸ್ಟ್ ಡೆಲ್ಲಿ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಕುಟುಂಬದ ಬೇಡಿಕೆಗಳು: ಮೃತನ ಕುಟುಂಬವು ವೈದ್ಯಕೀಯ ಮಂಡಳಿಯಿಂದ ಮರಣೋತ್ತರ ಪರೀಕ್ಷೆ ನಡೆಸಬೇಕು, ಐಸಿಯು ಸಿಆರ್‌ಟಿವಿ (CCTV) ದೃಶ್ಯಾವಳಿ ಹಾಗೂ ವೈದ್ಯಕೀಯ ದಾಖಲೆಗಳನ್ನು ಒದಗಿಸಬೇಕೆಂದು ಆಗ್ರಹಿಸಿದೆ.

ಕೇವಲ ₹10 ನೋಟಿನ ವಿವಾದಕ್ಕೆ ಹಾಗೂ ಪೊಲೀಸರ ನಿರ್ಲಕ್ಷ್ಯಕ್ಕೆ ಯುವಕ ಬಲಿಯಾಗಿದ್ದಾನೆ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಅಕ್ಟೋಬರ್ 22ರಂದು ಸಮೀರ್ 25ನೇ ಹುಟ್ಟುಹಬ್ಬವಿತ್ತು. ಆದರೆ ಅದೇ ದಿನ ಕುಟುಂಬಸ್ಥರು ಆತನ ಸಮಾಧಿ ಮುಂದೆ ಶೋಕಸಾಗರದಲ್ಲಿ ಮುಳುಗುವಂತಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles