SUDDIKSHANA KANNADA NEWS/ DAVANAGERE/ DATE:08-02-2025
ದಾವಣಗೆರೆ: ಪ್ರಸಕ್ತ ಸಾಲಿನ ಬೇಸಿಗೆ ಹಂಗಾಮಿಗೆ ಕಾಲುವೆಯಲ್ಲಿ ನೀರು ಹರಿಸಲಾಗುತ್ತಿದ್ದು, ಕಾಲುವೆಗೆ ಅಳವಡಿಸಿರುವ ಅನಧಿಕೃತ ಪಂಪ್‍ಸೆಟ್‍ಗಳನ್ನು ಫೆಬ್ರವರಿ 7 ರಿಂದ ತೆರವುಗೊಳಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಈ ವಿಭಾಗ ವ್ಯಾಪ್ತಿಯಲ್ಲಿ ಬರುವ ದಾವಣಗೆರೆ ಶಾಖಾ ಕಾಲುವೆ ಹಾಗೂ ಹರಿಹರ ಶಾಲಾ ಕಾಲುವೆಯಲ್ಲಿನ ಮಲೇಬೆನ್ನೂರು ವಿಭಾಗ ವ್ಯಾಪ್ತಿಯಲ್ಲಿನ ಮಲೆಬೆನ್ನೂರು ಶಾಖಾ ಕಾಲುವೆಯಲ್ಲಿ ಅನಧಿಕೃತವಾಗಿ ಕಾಲುವೆ ನೀರನ್ನು ಎತ್ತಿಕೊಳ್ಳಲು ಅಳವಡಿಸಲಾಗಿರುವ ಪಂಪ್‍ಸೆಟ್‍ಗಳನ್ನು ತಕ್ಷಣ ತೆರವುಗೊಳಿಸಬೇಕು.
ತಪ್ಪಿದ್ದಲ್ಲಿ ಕರ್ನಾಟಕ ನೀರಾವರಿ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭದ್ರಾ ನಾಲಾ ವಿಭಾಗದ ಇಂಜಿನಿಯರ್ ತಿಳಿಸಿದ್ದಾರೆ.