Home ಕ್ರೈಂ ನ್ಯೂಸ್ ಉಧಂಪುರದಲ್ಲಿ ಭದ್ರತಾ ಪಡೆಗಳ ಬಿರುಸಿನ ಕಾರ್ಯಾಚರಣೆ: ಇಬ್ಬರು ಭಯೋತ್ಪಾದಕರು ಖತಂ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಉಧಂಪುರದಲ್ಲಿ ಭದ್ರತಾ ಪಡೆಗಳ ಬಿರುಸಿನ ಕಾರ್ಯಾಚರಣೆ: ಇಬ್ಬರು ಭಯೋತ್ಪಾದಕರು ಖತಂ

Share
ಉಧಂಪುರ
Share

ಉಧಂಪುರ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ತಡರಾತ್ರಿಯ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಪ್ರಮುಖ ಉಗ್ರರನ್ನು ಹೊಡೆದುರುಳಿಸಲಾಗಿದೆ.

ಮಿಂಚಿನ ಕಾರ್ಯಾಚರಣೆ ಹೇಗೆ ನಡೆಯಿತು?

ಉಧಂಪುರ ಜಿಲ್ಲೆಯ ಸೋಹನ್ ಹಾಗೂ ಮಜಾಲ್ತಾ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಶಂಕಿತ ಭಯೋತ್ಪಾದಕರ ನುಸುಳುವಿಕೆ ಮತ್ತು ಅನುಮಾನಾಸ್ಪದ ಚಲನವಲನಗಳ ಕುರಿತು ಜಾಗರೂಕತಾ ಪಡೆಯ  ಖಚಿತ ಮಾಹಿತಿ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಭಾರತೀಯ ಸೇನೆ, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ  ಮತ್ತು ಜಮ್ಮು ಅಂಡ್ ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (SOG) ಜಂಟಿಯಾಗಿ ಪ್ರದೇಶವನ್ನು ಸುತ್ತುವರೆದು ಬೃಹತ್ ಶೋಧ ಕಾರ್ಯಾಚರಣೆ  ಆರಂಭಿಸಿದವು.

ಶೋಧ ಕಾರ್ಯಾಚರಣೆ ವೇಳೆ ಅಡಗಿಕೊಂಡಿದ್ದ ಉಗ್ರರು ಭದ್ರತಾ ಸಿಬ್ಬಂದಿಯ ಮೇಲೆ ದಿಢೀರ್ ಗುಂಡಿನ ದಾಳಿ ನಡೆಸಿದರು. ತಕ್ಷಣವೇ ಚುರುಕುಗೊಂಡ ಯೋಧರು ಪ್ರತಿಧಾಳಿ ನಡೆಸಿದಾಗ ಭಾರಿ ಪ್ರಮಾಣದ ಗುಂಡಿನ ಚಕಮಕಿ ಸಂಭವಿಸಿತು. ಯೋಧರ ಪ್ರತಿರೋಧಕ್ಕೆ ತಡೆಯಿಲ್ಲದೆ ಕೊನೆಗೆ ಇಬ್ಬರು ಭಯೋತ್ಪಾದಕರು ಸ್ಥಳದಲ್ಲೇ ಹತರಾದರು.

ಹತರಾದ ಉಗ್ರರ ಗುರುತು ಪತ್ತೆ ಬಾಕಿ:

ಕಾರ್ಯಾಚರಣೆ ಮುಕ್ತಾಯಗೊಂಡ ನಂತರ ಇಬ್ಬರು ಉಗ್ರರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಜಪ್ತಿ ಮಾಡಲಾಗಿದೆ. ಹತರಾದ ಭಯೋತ್ಪಾದಕರ ಹೆಸರೇನು ಹಾಗೂ ಅವರು ಯಾವ ಉಗ್ರ ಸಂಘಟನೆಗೆ ಸೇರಿದವರು ಎಂಬ ಮಾಹಿತಿಯನ್ನು ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ.

ಇತ್ತೀಚಿನ ಸರಣಿ ಕಾರ್ಯಾಚರಣೆಗಳು:

ಕಳೆದ ಸೆಪ್ಟೆಂಬರ್ 5 ರಂದು ಮಧ್ಯ ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಯೂಸ್ ಮರ್ಗ್ ಅರಣ್ಯ ಪ್ರದೇಶದಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಕಮಾಂಡರ್ ‘ಯಾಸಿರ್’ ಎಂಬಾತನನ್ನು ಯೋಧರು ಶೂಟ್ ಮಾಡಿ ಕೊಂದಿದ್ದರು. ಆ ಘಟನೆಯ ಬೆನ್ನಲ್ಲೇ ಇದೀಗ ಉಧಂಪುರದಲ್ಲೂ ಇಬ್ಬರು ಉಗ್ರರು ಖತಂ ಆಗಿರುವುದು ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಜಾಲವನ್ನು ಮತ್ತಷ್ಟು ಬಲಪಡಿಸಿದೆ.

ಸದ್ಯ ಸೋಹನ್ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಇನ್ನು ಯಾರಾದರೂ ಉಗ್ರರು ಅಡಗಿದ್ದಾರೆಯೇ ಎಂಬ ಅನುಮಾನದಿಂದ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿವೆ.

Share

Leave a comment

Leave a Reply

Your email address will not be published. Required fields are marked *

Related Articles