Home ಕ್ರೈಂ ನ್ಯೂಸ್ ಬೇರೆ ಜಾತಿಯ ಯುವತಿ ಮದುವೆ ವಿಚಾರಕ್ಕೆ ಮಗನ ಹತ್ಯೆಗೈದ ತಾಯಿ ಬಂಧನ: ಕೊಲೆಗೈದು ಗೊತ್ತಿಲ್ಲವೆಂದು ನಾಟಕವಾಡಿದ್ದ ಮಹಾತಾಯಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಬೇರೆ ಜಾತಿಯ ಯುವತಿ ಮದುವೆ ವಿಚಾರಕ್ಕೆ ಮಗನ ಹತ್ಯೆಗೈದ ತಾಯಿ ಬಂಧನ: ಕೊಲೆಗೈದು ಗೊತ್ತಿಲ್ಲವೆಂದು ನಾಟಕವಾಡಿದ್ದ ಮಹಾತಾಯಿ!

Share
ತಾಯಿ
Share

ತುಮಕೂರು:  ತುಮಕೂರು ಜಿಲ್ಲೆಯ ಜಕ್ಕೇನಹಳ್ಳಿ ಗ್ರಾಮದಲ್ಲಿ ಅಂತರಜಾತಿ ವಿವಾಹದ ವಿರೋಧದಿಂದಾಗಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬೇರೆ ಜಾತಿಯ ಯುವತಿಯನ್ನು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದ 35 ವರ್ಷದ ಮುತ್ತುರಾಜ್ ಎಂಬಾತನನ್ನು, ಆತನ 55 ವರ್ಷದ ತಾಯಿ ಶಿವಮ್ಮ ಮಲಗಿದ್ದಾಗ ಮರದ ದಿಮ್ಮಿಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸರು ಆರೋಪಿ ತಾಯಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮುತ್ತುರಾಜ್, ವಾರಾಂತ್ಯದಲ್ಲಿ ತನ್ನ ಸ್ವಗ್ರಾಮಕ್ಕೆ ಬರುತ್ತಿದ್ದರು. ಬೇರೆ ಜಾತಿಯ ಯುವತಿಯ ಜತೆಗಿನ ಪ್ರೇಮ ಹಾಗೂ ಮದುವೆ ವಿಚಾರವಾಗಿ ತಾಯಿ ಮತ್ತು ಮಗನ ನಡುವೆ ನಿತ್ಯವೂ ಗಲಾಟೆ ನಡೆಯುತ್ತಿತ್ತು.

ಕೊಲೆ ನಡೆದ ಹಿಂದಿನ ರಾತ್ರಿಯೂ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಮಗ ಗಾಢ ನಿದ್ರೆಯಲ್ಲಿದ್ದಾಗ ಕೋಪಗೊಂಡ ತಾಯಿ ಶಿವಮ್ಮ, ಮನೆಯ ವರಾಂಡದಲ್ಲಿ ಮಲಗಿದ್ದ ಮುತ್ತುರಾಜ್ ತಲೆಗೆ ಮರದ ದಿಮ್ಮಿಯಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ.

ಘಟನೆಯ ಹಿನ್ನೆಲೆ: ಅಂತರ್ಜಾತಿ ವಿವಾಹಕ್ಕೆ ತಾಯಿ ಶಿವಮ್ಮ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ, ಮಗನ ಜತೆಗೆ ಆಗಾಗ್ಗೆ ಮಾತಿನ ಚಕಮಕಿ ಮತ್ತು ಜಗಳ ನಡೆಯುತ್ತಿತ್ತು.

ಪೊಲೀಸರನ್ನು ದಾರಿ ತಪ್ಪಿಸಲು ಯತ್ನ: ಮಗನ ಕೊಲೆಯ ಬಳಿಕ ಯಾರೋ ಅಪರಿಚಿತರು ಬಂದು ಹತ್ಯೆಗೈದಿದ್ದಾರೆ ಎಂದು ನಾಟಕವಾಡಿದ ತಾಯಿ, ಕಣ್ಣೀರುಹಾಕಿ ಜನರನ್ನು ಹಾಗೂ ಪೊಲೀಸರನ್ನು ದಾರಿ ತಪ್ಪಿಸಲು ಯತ್ನಿಸಿದ್ದರು.

ಸಿಸಿಟಿವಿ ಹಾಗೂ ಸಾಕ್ಷ್ಯಗಳ ಪತ್ತೆ: ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಪೊಲೀಸರು, ತಾಯಿಯೇ ಈ ಕೃತ್ಯ ಎಸಗಿರುವುದನ್ನು ಪತ್ತೆ ಹಚ್ಚಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Share

Recent Posts

Recent Comments

No comments to show.
Related Articles