Home ಕ್ರೈಂ ನ್ಯೂಸ್ ಆಸ್ತಿ ಪಾಲು ವಿಭಾಗದ ಗಲಾಟೆ: ಹರಿಹರದಲ್ಲಿ ಸಹೋದರನ ಕೊಲೆ ಮಾಡಿದ್ದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಆಸ್ತಿ ಪಾಲು ವಿಭಾಗದ ಗಲಾಟೆ: ಹರಿಹರದಲ್ಲಿ ಸಹೋದರನ ಕೊಲೆ ಮಾಡಿದ್ದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ!

Share
ಹರಿಹರ
Share

ದಾವಣಗೆರೆ: ಆಸ್ತಿ ಪಾಲು ವಿಭಾಗದ ವಿಚಾರವಾಗಿ ಉಂಟಾದ ವೈಮನಸ್ಸಿನಿಂದ ತಮ್ಮ ಸ್ವಂತ ಸಹೋದರನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ದಾವಣಗೆರೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ದಿನಾಂಕ 14/05/2023 ರಂದು ಹರಿಹರ ನಗರ ಠಾಣಾ ವ್ಯಾಪ್ತಿಯಲ್ಲಿ ಈ ದಾರುಣ ಘಟನೆ ನಡೆದಿತ್ತು. ಗುಡ್ಡಪ್ಪನವರ ಮೊದಲನೇ ಪತ್ನಿಯ ಮಗನಾದ ಕುಮಾರ ಕೆ.ಜಿ. ಎಂಬಾತನನ್ನು, 2ನೇ ಪತ್ನಿಯ ಮಕ್ಕಳಾದ ರಾಜು ಮತ್ತು ಮಾರುತಿ ಜಿ.ಕೆ. ಆಸ್ತಿ ವಿಚಾರವಾಗಿ ಮಾತನಾಡಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು.

ಮೃತನ ಪತ್ನಿ ಲಕ್ಷ್ಮಿ ಎಸ್. ಅಲಿಯಾಸ್ ರೇಖಾ ನೀಡಿದ ದೂರಿನ ಮೇರೆಗೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಅಂದಿನ ತನಿಖಾಧಿಕಾರಿ ಎಸ್. ದೇವಾನಂದ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದ ತೀರ್ಪು: ದಾವಣಗೆರೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಲವರ್ ಅವರು ಆರೋಪ ಸಾಬೀತಾಗಿದ್ದರಿಂದ ಎ1-ರಾಜು .ಕೆ ಮತ್ತು ಎ2-ಮಾರುತಿ ಜಿ.ಕೆ. ಅವರಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ತಲಾ ಒಟ್ಟು 25,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ದಂಡದ ಮೊತ್ತ ವಿತರಣೆ: ವಸೂಲು ಮಾಡಿದ ದಂಡದ ಮೊತ್ತದಲ್ಲಿ 15,000 ರೂ.ಗಳನ್ನು ಸಂತ್ರಸ್ತರಿಗೆ ಹಾಗೂ 10,000 ರೂ.ಗಳನ್ನು ಸರ್ಕಾರಕ್ಕೆ ಜಮಾ ಮಾಡಲು ನ್ಯಾಯಾಲಯ ಸೂಚಿಸಿದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ವಕೀಲರಾದ ಕೆ. ಸತೀಶ್ ವಾದ ಮಂಡಿಸಿದ್ದರು.

 ಶ್ಲಾಘನೆ: ಸಮರ್ಪಕ ತನಿಖೆ ನಡೆಸಿ ನ್ಯಾಯಾಲಯಕ್ಕೆ ಸಾಕ್ಷ್ಯ ಒದಗಿಸಿದ ಹರಿಹರ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಎಸ್. ದೇವಾನಂದ್ ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಶೇಖರ್ ಹೆಚ್.ಟಿ. ಅವರು ಪ್ರಶಂಸಿಸಿದ್ದಾರೆ.

Share

Recent Posts

Recent Comments

No comments to show.
Related Articles