Home ದಾವಣಗೆರೆ ತುಮಕೂರು ಕೋರ್ಟ್ ಉದ್ಯೋಗ ಸುವರ್ಣಾವಕಾಶ: 34,100 ರೂ. ಆರಂಭಿಕ ವೇತನ – ಆನ್‌ಲೈನ್ ಅರ್ಜಿ ಸಲ್ಲಿಸಲು ಆಗಸ್ಟ್ 24 ಕೊನೆಯ ದಿನ
ದಾವಣಗೆರೆಉದ್ಯೋಗ ವಾರ್ತೆಬೆಂಗಳೂರು

ತುಮಕೂರು ಕೋರ್ಟ್ ಉದ್ಯೋಗ ಸುವರ್ಣಾವಕಾಶ: 34,100 ರೂ. ಆರಂಭಿಕ ವೇತನ – ಆನ್‌ಲೈನ್ ಅರ್ಜಿ ಸಲ್ಲಿಸಲು ಆಗಸ್ಟ್ 24 ಕೊನೆಯ ದಿನ

Share
ತುಮಕೂರು
Share

ತುಮಕೂರು: ಕರ್ನಾಟಕ ಸರ್ಕಾರದ ನ್ಯಾಯಾಂಗ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ತುಮಕೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು (District eCourt Tumakuru) ಖಾಲಿ ಇರುವ ಶೀಘ್ರಲಿಪಿಗಾರ (Stenographer Grade-III) ಮತ್ತು ಬೆರಳಚ್ಚುಗಾರ (Typist) ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಸೂಚನೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ ಹಾಗೂ ವೇತನ ಶ್ರೇಣಿ:

  • ಶೀಘ್ರಲಿಪಿಗಾರ ಗ್ರೇಡ್-III (Stenographer Grade-III): 10 ಹುದ್ದೆಗಳು | ವೇತನ: ₹44,425 – ₹83,700 (ಪ್ರತಿ ತಿಂಗಳು)

  • ಬೆರಳಚ್ಚುಗಾರ (Typist): 14 ಹುದ್ದೆಗಳು | ವೇತನ: ₹34,100 – ₹67,600 (ಪ್ರತಿ ತಿಂಗಳು)

  • ಒಟ್ಟು ಖಾಲಿ ಹುದ್ದೆಗಳು: 24

 ಶೈಕ್ಷಣಿಕ ಅರ್ಹತೆ:

  • ಅಭ್ಯರ್ಥಿಗಳು ಅಂಗೀಕೃತ ಮಂಡಳಿಯಿಂದ 12ನೇ ತರಗತಿ / 2nd PUC / ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

  • ಸಂಬಂಧಿತ ಶೀಘ್ರಲಿಪಿ ಹಾಗೂ ಬೆರಳಚ್ಚು (ಕನ್ನಡ ಮತ್ತು ಇಂಗ್ಲಿಷ್) ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ:

  • ಕನಿಷ್ಠ ವಯಸ್ಸು: 18 ವರ್ಷಗಳು

  • ಗರಿಷ್ಠ ವಯಸ್ಸು: 35 ವರ್ಷಗಳು (ಸಾಮಾನ್ಯ ವರ್ಗ).

    (ನಿಯಮಾವಳಿಗಳ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ).

ಅರ್ಜಿ ಶುಲ್ಕ:

  • ಸಾಮಾನ್ಯ ವರ್ಗ, ಪ್ರವರ್ಗ 2A, 2B, 3A, 3B: ₹200

  • SC/ST/ಪ್ರವರ್ಗ-1 ಹಾಗೂ ವಿಕಲಚೇತನ ಅಭ್ಯರ್ಥಿಗಳು: ಉಚಿತ (ಶುಲ್ಕವಿಲ್ಲ)

  • ಪಾವತಿ ವಿಧಾನ: ಆನ್‌ಲೈನ್ (Net Banking / Debit Card / UPI) ಮೂಲಕ ಪಾವತಿಸಬಹುದು.

ಆಯ್ಕೆ ಪ್ರಕ್ರಿಯೆ:

  1. ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್

  2. ಕೌಶಲ್ಯ ಪರೀಕ್ಷೆ (Skill Test)

  3. ನೇರ ಸಂದರ್ಶನ

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25 ಜುಲೈ 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಆಗಸ್ಟ್ 2026

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ತುಮಕೂರು ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ tumakuru.dcourts.gov.in ಗೆ ಭೇಟಿ ನೀಡಿ, ದಿನಾಂಕ 24-08-2026 ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles
ಗಣೇಶ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮಸೀದಿ ಮುಂದೆ ಗಣೇಶ ಮೆರವಣಿಗೆ ನಿರ್ಬಂಧಿಸಿದರೆ ಠಾಣೆಗೆ ನುಗ್ಗುತ್ತೇನೆ: ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ಬೆನ್ನಲ್ಲೇ ರೌಡಿಗೆ ಜೈಲು ಗ್ಯಾರಂಟಿ ಎಂದ್ರು ಪ್ರಿಯಾಂಕ್ ಖರ್ಗೆ! ಬೆಂಗಳೂರು ಮೈಸೂರು:ಗಣೇಶೋತ್ಸವ ಮೆರವಣಿಗೆಯ ವೇಳೆ ಮಸೀದಿ ಮುಂಭಾಗ ಹಾದುಹೋಗುವ ಮಾರ್ಗ ಹಾಗೂ ಧ್ವನಿವರ್ಧಕಗಳ ಬಳಕೆಯ ಕುರಿತು ಟಿ. ನರಸೀಪುರ ಪೊಲೀಸ್ ಇನ್‌ಸ್ಪೆಕ್ಟರ್ ನೀಡಿದ್ದ ಎಚ್ಚರಿಕೆಯ ಹೇಳಿಕೆಗೆ ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಟಿ. ನರಸೀಪುರ ಪೊಲೀಸ್ ಇನ್ಸ್‌ಪೆಕ್ಟರ್ ಸಾರ್ವಜನಿಕ ಸಭೆಯಲ್ಲಿ ಬ್ರಿಟಿಷರ ಕಾಲದ ದರ್ಪ ಪ್ರದರ್ಶಿಸಿದ್ದಾರೆ. ಕಾನೂನು ಸುವ್ಯವಸ್ಥೆ ಹೆಸರಿನಲ್ಲಿ ಯುವಕರು ಮತ್ತು ಸಾರ್ವಜನಿಕರನ್ನು ಬೆದರಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಮಸೀದಿ ಮುಂದೆ ಯುವಕರು ನೃತ್ಯ ಮಾಡಿದರೆ ಅಥವಾ ಮೆರವಣಿಗೆ ಸಾಗಿದರೆ ತಪ್ಪೇನು?” ಎಂದು ಪ್ರಶ್ನಿಸಿದರು. ಮುಂದುವರಿದು ಮಾತನಾಡಿದ ಅವರು, “ಪುಂಡಾಟಿಕೆ ಮಾಡುವುದು ಮತ್ತು ಕಲ್ಲು ತೂರುವ ಕೆಲಸಗಳನ್ನು ಯಾರು ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ, ಹಿಂದೂಗಳು ಎಂದಿಗೂ ಈ ರೀತಿಯ ಕೆಲಸಗಳನ್ನು ಮಾಡಿಲ್ಲ. ಮಸೀದಿಗಳಿಂದ ದಿನಕ್ಕೆ ಐದು ಬಾರಿ ಬರುವ ಧ್ವನಿವರ್ಧಕಗಳ ಕೂಗು ಹಿಂದೂಗಳ ಮನೆಗೆ ಕೇಳಿಸದಂತೆ ಮಾಡುವ ಧೈರ್ಯ ಪೊಲೀಸರಿಗಿದೆಯೇ? ಅದನ್ನು ಬಿಟ್ಟು ಹಬ್ಬ ಆಚರಿಸುವ ಹಿಂದೂ ಯುವಕರಿಗೆ ಧಮ್ಕಿ ಹಾಕುವುದು ಸರಿಯಲ್ಲ. ಟಿ. ನರಸೀಪುರ ಇನ್ಸ್‌ಪೆಕ್ಟರ್ ಇನ್ನೊಮ್ಮೆ ಈ ರೀತಿ ಬಾಲ ಅಲ್ಲಾಡಿಸಿದರೆ ಅಥವಾ ಬೆದರಿಕೆ ಹಾಕಿದರೆ ನಾನೇ ನೇರವಾಗಿ ಠಾಣೆಗೆ ನುಗ್ಗುತ್ತೇನೆ” ಎಂದು ಖಡಕ್ ಸವಾಲು ಹಾಕಿದರು. ಇತ್ತೀಚಿನ ಗಣೇಶ ವಿಸರ್ಜನೆ ಮೆರವಣಿಗೆಯ ಸಿದ್ಧತೆಗಳ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಈ ನಡುವೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮೈಸೂರಿನಲ್ಲೊಬ್ಬ ರೌಡಿ ಇದ್ದಾನೆ. ಆತನಿಗೆ ಪರಪ್ಪನ ಆಗ್ರಹಾರಕ್ಕೆ ನುಗ್ಗಿಸುತ್ತೇವೆ. ಕಾನೂನು ಕೈಗೆತ್ತಿಕೊಂಡರೆ ಸುಮ್ಮನಿರಲ್ಲ ಎಂದಿದ್ದಾರೆ. ಇದು ಪ್ರತಾಪ್ ಸಿಂಹ ಮತ್ತು ಪ್ರಿಯಾಂಕ್ ಖರ್ಗೆ ನಡುವೆ ಸಮರಕ್ಕೆ ಕಾರಣವಾಗಿದೆ.