ಅಮ್ರೇಲಿ (ಗುಜರಾತ್): ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿರುವ ಅಂಬರ್ಡಿ ಸಫಾರಿ ಪಾರ್ಕ್‌ನಲ್ಲಿ ಮೋಟಾರ್‌ಸೈಕಲ್‌ನಲ್ಲಿ ಸಿಂಹವೊಂದನ್ನು ಬೆನ್ನಟ್ಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪವೆಸಗಿದ ಮೂವರು ಹೊರಗುತ್ತಿಗೆ ಅರಣ್ಯ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಫಾರಿ ಪಾರ್ಕ್‌ನಲ್ಲಿ ಸಿಂಹವನ್ನು ಅದರ ‘ಕ್ರాల్’ (ಬೇಲಿ ಹಾಕಿದ ಆವರಣ) ಕಡೆಗೆ ತಿರುಗಿಸಲು ಜೀಪ್ ಬದಲಿಗೆ ಮೋಟಾರ್‌ಸೈಕಲ್‌ಗಳನ್ನು ಬಳಸಿರುವುದು ತನಿಖೆಯಿಂದ ತಿಳಿದುಬಂದಿದೆ.
ವಿಡಿಯೋ ವೀಕ್ಷಿಸಿ:
A viral video from Gujarat's Amreli district has raised questions about the treatment of lions at Ambardi Safari Park after forest staff were seen chasing a lion on motorcycles.
The footage, which surfaced on social media, purportedly shows three men pursuing the animal and… pic.twitter.com/sSKighDGN8
— NDTV (@ndtv) November 16, 2026
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರವಾಸಿಗರ ಭರಾಟೆ ಹೆಚ್ಚಿದ್ದ ಕಾರಣ ಸಂಜೆ ವೇಳೆ ಸಿಂಹವನ್ನು ಆವರಣಕ್ಕೆ ಕಳುಹಿಸುವ ನಿತ್ಯದ ಪ್ರಕ್ರಿಯೆಯ ಭಾಗವಾಗಿ ಬೈಕ್‌ನಲ್ಲಿ ಸಿಂಹವನ್ನು ಓಡಿಸಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಿಲೇಶ್ ವಾನಿಯಾ ಸ್ಪಷ್ಟಪಡಿಸಿದ್ದಾರೆ. ಪ್ರಾಣಿಯನ್ನು ಕಿರುಕುಳ ನೀಡುವ ಯಾವುದೇ ಉದ್ದೇಶವಿರಲಿಲ್ಲ ಎಂದು ಸಮರ್ಥಿಸಿಕೊಂಡರೂ, ಕರ್ತವ್ಯದ ವೇಳೆ ನಿಯಮಮೀರಿ ಬೈಕ್ ಬಳಸಿದ್ದರಿಂದ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ವಿಡಿಯೋ ವೈರಲ್ ಹಾಗೂ ಕ್ರಮ: ಬೈಕ್‌ಗಳ ಮೂಲಕ ಸಿಂಹವನ್ನು ಬೆನ್ನಟ್ಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ಮೂವರು ಹೊರಗುತ್ತಿಗೆ ಸಿಬ್ಬಂದಿಯನ್ನು ವಜಾಗೊಳಿಸಿದ್ದಾರೆ.
ಅಧಿಕಾರಿಗಳ ಸ್ಪಷ್ಟನೆ: ಸಫಾರಿ ಪಾರ್ಕ್‌ನಲ್ಲಿ ಸಂಜೆ 5 ಗಂಟೆಯ ವೇಳೆಗೆ ಸಿಂಹಗಳಿಗೆ ಆಹಾರ ನೀಡುವ ನಿಮಿತ್ತ ಅವುಗಳನ್ನು ಆವರಣಕ್ಕೆ (Kraal) ತಳ್ಳುವ ಸಾಮಾನ್ಯ ಪ್ರಕ್ರಿಯೆ ಇದಾಗಿದ್ದು, ಸಿಂಹಕ್ಕೆ ಯಾವುದೇ ಕಿರುಕುಳ ನೀಡಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಪ್ರವಾಸಿಗರ ದಟ್ಟಣೆ: ದೀಪಾವಳಿ ರಜೆಯ ಅವಧಿಯಲ್ಲಿ ಪಾರ್ಕ್‌ನಲ್ಲಿ ಭಾರೀ ಪ್ರವಾಸಿಗರ ದಟ್ಟಣೆ ಇದ್ದ ಕಾರಣ ಸಿಬ್ಬಂದಿ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ವರದಿಯಾಗಿದೆ.





Leave a comment