SUDDIKSHANA KANNADA NEWS/ DAVANAGERE/ DATE:30-11-2024
ಬಳ್ಳಾರಿ: ಪ್ರಸ್ತಕ ಸಾಲಿನ 122ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ಹಿಂಗಾರು ಹಂಗಾಮಿಗೆ ಜಲಾಶಯದಲ್ಲಿ ಲಭ್ಯವಾಗುವ ನೀರಿನ ಪ್ರಮಾಣವನ್ನು ಅಂದಾಜಿಸಿ ಈ ಕೆಳಗಿನಂತೆ ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಆದ ಶಿವರಾಜ ಎಸ್.ತಂಗಡಗಿ ಅವರು ತಿಳಿಸಿದ್ದಾರೆ.
ವೇಳಾಪಟ್ಟಿ:
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ:
ಡಿ.01 ರಿಂದ 15 ರವರೆಗೆ 1500 ಕ್ಯೂಸೆಕ್ಸ್ನಂತೆ, ಡಿ.16 ರಿಂದ 31 ರವರೆಗೆ 2000 ಕ್ಯೂಸೆಕ್ಸ್ನಂತೆ, 2025ರ ಜ.01 ರಿಂದ 31 ರವರೆಗೆ 3800 ಕ್ಯೂಸೆಕ್ಸ್ನಂತೆ, ಫೆ.01 ರಿಂದ 28 ರವರೆಗೆ 3800 ಕ್ಯೂಸೆಕ್ಸ್ನಂತೆ, ಮಾ.01 ರಿಂದ 31 ರವರೆಗೆ 3800 ಕ್ಯೂಸೆಕ್ಸ್ನಂತೆ ಮತ್ತು ಕುಡಿಯುವ ನೀರಿಗಾಗಿ ಏ.01 ರಿಂದ 10 ರವರೆಗೆ 1650 ಕ್ಯೂಸೆಕ್ಸ್ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
ಎಡದಂಡೆ ವಿಜಯನಗರ ಕಾಲುವೆ:
2025ರ ಏ.11 ರಿಂದ ಮೇ.10 ರವರೆಗೆ 150 ಕ್ಯೂಸೆಕ್ಸ್ನಂತೆ ವಿತರಣಾ ಕಾಲುವೆ 1 ರಿಂದ 11ಎ ವರೆಗೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ:
ಡಿ.01 ರಿಂದ 10 ರವರೆಗೆ ನೀರು ನಿಲುಗಡೆ, ಡಿ.11 ರಿಂದ 31 ರವರೆಗೆ 800 ಕ್ಯೂಸೆಕ್ಸ್ನಂತೆ, 2025ರ ಜ.01 ರಿಂದ 10 ರವರೆಗೆ ನೀರು ನಿಲುಗಡೆ ಮತ್ತು ಜ.11 ರಿಂದ 31 ರವರೆಗೆ 800 ಕ್ಯೂಸೆಕ್ಸ್ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ:
ಡಿ.01 ರಿಂದ 15 ರವರೆಗೆ 400 ಕ್ಯೂಸೆಕ್ಸ್ನಂತೆ, ಡಿ.16 ರಿಂದ 31 ರವರೆಗೆ 600 ಕ್ಯೂಸೆಕ್ಸ್ನಂತೆ, 2025ರ ಜ.01 ರಿಂದ 31 ರವರೆಗೆ 650 ಕ್ಯೂಸೆಕ್ಸ್ನಂತೆ, ಫೆ.01 ರಿಂದ 28 ರವರೆಗೆ 650 ಕ್ಯೂಸೆಕ್ಸ್ನಂತೆ ಮತ್ತು ಮಾ.01 ರಿಂದ 31 ರವರೆಗೆ 700 ಕ್ಯೂಸೆಕ್ಸ್ನಂತೆ ಮತ್ತು ಕುಡಿಯುವ ನೀರಿಗಾಗಿ ಏ.01 ರಿಂದ ಮೇ.31 ರವರೆಗೆ 100 ಕ್ಯೂಸೆಕ್ಸ್ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
ರಾಯ ಬಸವಣ್ಣ ಕಾಲುವೆ:
ಡಿ.10 ರಿಂದ 2025ರ ಜ.10 ರವರೆಗೆ ನೀರು ನಿಲುಗಡೆ ಮತ್ತು 2025ರ ಜ.11 ರಿಂದ ಮೇ 31 ರವರೆಗೆ 250 ಕ್ಯೂಸೆಕ್ಸ್ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ:
ಡಿ.01 ರಿಂದ 25 ಕ್ಯೂಸೆಕ್ಸ್ನಂತೆ ಅಥವಾ ಜಲಾಶಯದ ನೀರಿನ ಮಟ್ಟ 1585 ಅಡಿಗಳವರೆಗೆ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
ರೈತರಲ್ಲಿ ಮನವಿ:
ತುಂಗಭದ್ರಾ ಜಲಾಶಯದಲ್ಲಿ ಹಿಂಗಾರು ಹಂಗಾಮಿಗೆ ಲಭ್ಯವಿರುವ ನೀರನ್ನು ಮಿತವ್ಯಯವಾಗಿ ಬಳಸಿ ಅಧಿಕೃತ ಅಚ್ಚುಕಟ್ಟು ಪ್ರದೇಶದಲ್ಲಿ ನಿಗಧಿತ ಬೆಳೆಗಳನ್ನು ಮಾತ್ರ ಬೆಳೆಯಲು ಹಾಗೂ ಸಮರ್ಪಕ ನೀರು ನಿರ್ವಹಣೆಗೆ ಇಲಾಖೆಯೊಡನೆ ಸಹಕರಿಸಬೇಕು. ರೈತರು ಅನಧೀಕೃತವಾಗಿ ನೀರು ಪಡೆದು ಭತ್ತ ಹಾಗೂ ಇತರೆ ಬೆಳೆಗಳನ್ನು ಬೆಳೆದಲ್ಲಿ ನೀರಾವರಿ ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸಲಾಗುವುದು, ರೈತರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಮುನಿರಾಬಾದ್ ತುಂಗಭದ್ರಾ ಯೋಜನಾ ವೃತ್ತದ ಕನೀನಿನಿ ಅಧೀಕ್ಷಕ ಅಭಿಯಂತರರಾದ ಎಲ್.ಬಸವರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.