SUDDIKSHANA KANNADA NEWS/ DAVANAGERE/ DATE:30-01-2025
ದಾವಣಗೆರೆ: ನಗರದ ಮಂಡಿಪೇಟೆಯಲ್ಲಿರುವ ಚಿನ್ನ, ಬೆಳ್ಳಿ ಅಂಗಡಿಯ ಷಟರ್ಸ್ ಮುರಿದು ಒಳ ಪ್ರವೇಶಿಸಿರುವ ಕಳ್ಳರು ಅಂಗಡಿಯಲ್ಲಿ ಇದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ.
ನಗರದ ಮಂಡಿಪೇಟೆಯಲ್ಲಿನ ಎನ್.ಆರ್.ರಸ್ತೆಯಲ್ಲಿ ಬರುವ ಹೆಚ್.ಕೆ.ಎ. ಜ್ಯುವೆಲರ್ಸ್ ನಲ್ಲಿ ಕಳ್ಳತನವಾಗಿದ್ದು, ವಿಷಯ ತಿಳಿದು ಮಾಲೀಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಸವನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನದ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಚಿನ್ನಾಭರಣ ಅಂಗಡಿಯಿಂದ ಎಷ್ಟು ಕಳ್ಳತನವಾಗಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.