SUDDIKSHANA KANNADA NEWS/ DAVANAGERE/ DATE:13-02-2025
ದಾವಣಗೆರೆ: ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಕೆಟಿಜೆ ಪೊಲೀಸರು ಸ್ವತ್ತು ವಶಪಡಿಸಿಕೊಂಡಿದ್ದಾರೆ.
2024ರ ಡಿಸೆಂಬರ್ 30ರಂದು ಜಿ. ಎಸ್. ಪರಮೇಶ್ವರಪ್ಪ ಅವರು ತಮ್ಮ ಮನೆಯನ್ನು ಬೀಗ ಹಾಕಿಕೊಂಡು ಹೋದ ಸಮಯದಲ್ಲಿ ಬೈಕ್ ಬ್ಯಾಗಿನಲ್ಲಿ ಇಟ್ಟಿದ್ದ ಮನೆಯ ಬೀಗವನ್ನು ತೆಗೆದುಕೊಂಡು ರೂಮ್ ಬೀರುವಿನ ಲಾಕರ್ ನಲ್ಲಿ ಇಟ್ಟಿದ್ದ 24 ಗ್ರಾಂ ಬಂಗಾರದ ಶಾರ್ಟ್ ನಕ್ಲೇಸ್ ಅನ್ನು ಕಳ್ಳರು ಕದ್ದೊಯ್ದಿದ್ದರು. ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಗಳೂರು ತಾಲೂಕಿನ ಬಸಾಪುರ ಗ್ರಾಮದ ಸಿ. ಸಿದ್ದೇಶ (19) ಬಂಧಿತ ಆರೋಪಿ.
ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಹೆಚ್. ಎಸ್. ಸುನೀಲ್ ಕುಮಾರ್ ನೇತೃತ್ವದಲ್ಲಿ ಪಿಎಸ್ಐ ಆರ್. ಲತಾ, ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಗಿರೀಶ್ ಗೌಡ, ಸಿದ್ದಪ್ಪ, ಮಂಜಪ್ಪ, ನಾಗರಾಜ. ಡಿ.ಬಿ., ಗೌರಮ್ಮ, ಗೀತಾ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಪೊಲೀಸ್ ನಿರೀಕ್ಷಕ ಬಿ.ಇಸ್ಮಾಯಿಲ್, ಪೊಲೀಸ್ ಉಪನಿರೀಕ್ಷಕ ಮಂಜುನಾಥ್, ಸಿಬ್ಬಂದಿಯವರಾದ ರಾಘವೇಂದ್ರ, ರಮೇಶ, ಶಿವಕುಮಾರ್ ಬಿ.ಕೆ. ವಿರೇಶ್. ನಾಗರಾಜ್, ಅಖ್ತರ್ ಮತ್ತು ರಾಜು ಅವರನ್ನೊಳಗೊಂಡ ತಂಡದವು ಆರೋಪಿಯನ್ನು ಬಂಧಿಸಿದೆ.
ಕೆ.ಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಪ್ರಕರಣದಲ್ಲಿ ಅಂದಾಜು 1,45000 ಬೆಲೆಯ 24 ಗ್ರಾಂ. ತೂಕದ ಬಂಗಾರದ ಶಾರ್ಟ್ ನಕ್ಲೇಸ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಹಿನ್ನೆಲೆ:
ಆರೋಪಿತ ಸಿದ್ದೇಶ್ ಈತನ ಮೇಲೆ ಜಗಳೂರು ಠಾಣೆಯ 259/2024, ವಿದ್ಯಾನಗರ ಠಾಣೆಯ 125/2023 ರಲ್ಲಿ ದಾಖಲಾಗಿದ್ದ ಮನೆಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ
ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾಪ್ರಶಾಂತ್ ಐಪಿಎಸ್ ರವರು ಶ್ಲಾಘಿಸಿದ್ದಾರೆ.