SUDDIKSHANA KANNADA NEWS/ DAVANAGERE/ DATE:29-09-2023
ದಾವಣಗೆರೆ (Davanagere): ನಗರದ ವಿಜಯಲಕ್ಷ್ಮೀ ರಸ್ತೆಯ ಪವನ್ ಜ್ಯೂಯಲರ್ಸ್ ನಲ್ಲಿ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸಿರುವ ಬಸವನಗರ ಪೊಲೀಸರು, 18 ಲಕ್ಷ ರೂಪಾಯಿ ಮೌಲ್ಯದ 48 ಕೆಜಿ ಬೆಳ್ಳಿ ಗಟ್ಟಿ ವಶಕ್ಕೆ ಪಡೆಯಲಾಗಿದೆ.
READ ALSO THIS STORY:

Davanagere: ಹೈಕಮಾಂಡ್ ಸೂಚನೆ ಮೇರೆಗೆ ದಾವಣಗೆರೆ ಜಿಲ್ಲಾ ಪ್ರವಾಸ: ಲೋಕಸಭೆಗೆ ನನಗೆ ಕಾಂಗ್ರೆಸ್ ಟಿಕೆಟ್ ಸಿಗುವ ವಿಶ್ವಾಸ: ಜಿ. ಬಿ. ವಿನಯ್ ಕುಮಾರ್
ಮೂಲತಃ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯವನಾದ ಕಲಬುರಗಿ ಜಿಲ್ಲೆಯ ಬಬಲಾದ ಗ್ರಾಮದ ಜೀಬನ್ ಸಿಂಗ್ ಅಲಿಯಾಸ್ ಶಂಕರ್ ಸಿಂಗ್ (55) ಬಂಧಿತ ಆರೋಪಿ. ಸೆ. 10ರಂದು ಪವನ್ ಜ್ಯೂಯಲರ್ಸ್ ಮಾಲೀಕ ಕಿಶೋರ್ ಕುಮಾರ್ ಕೆ.ಟಿ ಅವರು ಪೊಲೀಸ್ ಠಾಣೆಗೆ ಹಾಜರಾಗಿ ಸೆ. 9ರ ರಾತ್ರಿ 10 ಗಂಟೆಯಿಂದ ಮಾರನೇ ದಿನದ 10 ಗಂಟೆಯ ಮಧ್ಯದಲ್ಲಿ ಯಾರೋ ಕಳ್ಳರು ಪವನ್ ಜ್ಯೂಯೆಲರ್ಸ್ ಬೆಳ್ಳಿ ಬಂಗಾರದ ಅಂಗಡಿಯ ಶೆಟರ್ಸ್ ಲಾಕ್ ಮುರಿದು ಸುಮಾರು 60 ಕೆ ಜಿ ಬೆಳ್ಳಿ, 10 ಗ್ರಾಂ ಬಂಗಾರ ಮತ್ತು 2500 ರೂಪಾಯಿ ನಗದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಬಸವನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.
ಆರೋಪಿ ಮತ್ತು ಮಾಲು ಪತ್ತೆ ಮಾಡಲು ಎಎಸ್ಪಿ ಆರ್.ಬಿ ಬಸರಗಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಹೆಚ್. ಗುರುಬಸವರಾಜ್ ರ ನೇತೃತ್ವದಲ್ಲಿ ಪಿಎಸ್ ಐ ಜಿ. ನಾಗರಾಜ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಲಾಗಿತ್ತು.
ಪೊಲೀಸ್ ತಂಡವು ಈ ಪ್ರಕರಣದಲ್ಲಿನ ಆರೋಪಿ ಹಾಗೂ ಸ್ವತ್ತು ಪತ್ತೆ ಕಾರ್ಯ ಕೈಗೊಂಡಿದ್ದು, ವಿವಿಧೆಡೆ ಮಾಹಿತಿ ಕಲೆಹಾಕಿ ಮಾಹಿತಿ ಆಧರಿಸಿ ವಿಚಾರಣೆಗೊಳಪಡಿಸಿದಾಗ ಆರೋಪಿತನು ದಾವಣಗೆರೆ ನಗರದಲ್ಲಿನ ಪವನ್ ಜ್ಯೂಯೆಲರ್ಸ್ ಅಂಗಡಿಯಲ್ಲಿ ಬೆಳ್ಳಿ-ಬಂಗಾರದ ಅಂಗಡಿಯ ಶೆಟರ್ಸ್ ಲಾಕ್ ಮುರಿದು ಅಂಗಡಿಯಲ್ಲಿನ ಪೂಜಾ ಸಾಮಾನುಗಳನ್ನು ಕಳ್ಳತನ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.
ಕಳ್ಳತನ ಮಾಡಿದ ಎಲ್ಲಾ ಬೆಳ್ಳಿಯ ವಸ್ತುಗಳನ್ನು ರಾಣೆಬೇನ್ನೂರು ನಗರದ ಎಂ.ಜಿ ರಸ್ತೆಯಲ್ಲಿರುವ ಬೆಳ್ಳಿ-ಬಂಗಾರದ ಅಂಗಡಿಯೊಂದರ ಮಾಲೀಕನಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಾಜು 18 ಲಕ್ಷ ರೂ ಮೌಲ್ಯದ ಒಟ್ಟು 48 ಕೆ.ಜಿ 130 ಗ್ರಾಂ ಕಚ್ಚಾ ಬೆಳ್ಳಿ ಗಟ್ಟಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಹೆಚ್.ಗುರುಬಸವರಾಜ, ಪಿಎಸ್ ಐಗಳಾದ ಜಿ. ನಾಗರಾಜ, ಮಂಜುನಾಥ ಕಲ್ಲೇದೇವರು, ಸಿಬ್ಬಂದಿ ಫಕೃದ್ದೀನ್ ಅಲಿ, ವಿಶಾಲಾಕ್ಷಿ, ಪೂರ್ವಾಚಾರಿ, ಹರೀಶ್, ಸುರೇಶ್ ಟಿ., ಅಮರೇಶ್ ಸಂಗಮ್, ರಾಘವೇಂದ್ರ, ರಾಮಚಂದ್ರ ಜಾಧವ್ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಹಾಗೂ ಎಎಸ್ಪಿ ಆರ್. ಬಿ. ಬಸರಗಿ ಅಭಿನಂದಿಸಿದ್ದಾರೆ.