Home ದಾವಣಗೆರೆ ರೈಲಿನಲ್ಲಿ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀಗೆ ಕಿರಿಕಿರಿ: “ದೇವರೇ ಈ ದೇಶವನ್ನು ಕಾಪಾಡಲಿ” ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ!
ದಾವಣಗೆರೆಬೆಂಗಳೂರು

ರೈಲಿನಲ್ಲಿ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀಗೆ ಕಿರಿಕಿರಿ: “ದೇವರೇ ಈ ದೇಶವನ್ನು ಕಾಪಾಡಲಿ” ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ!

Share
ಶಿವಶ್ರೀ
Share

ಬೆಂಗಳೂರು: ಖ್ಯಾತ ಕರ್ನಾಟಕ ಸಂಗೀತ ಗಾಯಕಿ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಅವರು ರೈಲು ಪ್ರಯಾಣದ ವೇಳೆ ತಮಗಾದ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕ ಪ್ರಜ್ಞೆ  ಮತ್ತು ಸಹಪ್ರಯಾಣಿಕರ ನೆಮ್ಮದಿಯ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

೫ ಗಂಟೆಗಳ ಕಾಲ ನಿರಂತರ ಗದ್ದಲ:

ಶಿವಶ್ರೀ ಅವರ ಹೇಳಿಕೆಯ ಪ್ರಕಾರ, 56 ಆಸನಗಳಿದ್ದ ಬೋಗಿಯಲ್ಲಿ ಸುಮಾರು 40 ಮಂದಿ ಮಧ್ಯವಯಸ್ಕ ಪುರುಷರ ಗುಂಪೊಂದು ಇಡೀ ಜಾಗವನ್ನು ಆಕ್ರಮಿಸಿಕೊಂಡಿತ್ತು. ಸುಮಾರು ಐದು ಗಂಟೆಗಳ ಕಾಲ ಜೋರಾಗಿ ಮಾತನಾಡುವುದು, ಕಿರುಚುವುದು ಹಾಗೂ ಅಟ್ಟಹಾಸದಿಂದ ನಗುವ ಮೂಲಕ ಇತರ ಪ್ರಯಾಣಿಕರ ಶಾಂತಿಗೆ ಭಂಗ ತಂದಿದ್ದರು ಎಂದು ಅವರು ತಿಳಿಸಿದ್ದಾರೆ.

UNO ಆಟ ಹಾಗೂ ಬಾಲಿವುಡ್ ಹಾಡುಗಳ ರಂಪಾಟ:

ಗದ್ದಲದಿಂದ ಬೇಸತ್ತ ಶಿವಶ್ರೀ ಅವರು ಟಿಟಿಇ (TTE) ಬಳಿ ಮನವಿ ಮಾಡಿ ಬೇರೆ ಬೋಗಿಯಲ್ಲಿ ಆಸನ ನೀಡುವಂತೆ ವಿನಂತಿಸಿದ್ದರು. ಆದರೆ ರೈಲು ಭರ್ತಿಯಾಗಿದ್ದ ಕಾರಣ ಅದು ಸಾಧ್ಯವಾಗಲಿಲ್ಲ. ಬಳಿಕ ಆ ಗುಂಪು ‘UNO’ ಕಾರ್ಡ್ ಆಟವಾಡಲು ಶುರುಮಾಡಿದಾಗ ಮತ್ತೆ ದೂರು ನೀಡಲಾಯಿತು. ಟಿಟಿಇ ಸೂಚನೆ ನೀಡಿದರೂ, ನಂತರ ಆ ಗುಂಪು ಉದ್ದೇಶಪೂರ್ವಕವಾಗಿ ಜೋರಾಗಿ ಬಾಲಿವುಡ್ ಹಾಡುಗಳನ್ನು ಹಾಡುತ್ತಾ ರಂಪಾಟ ಮುಂದುವರಿಸಿತು ಎಂದು ಶಿವಶ್ರೀ ಆರೋಪಿಸಿದ್ದಾರೆ.

“ದೇವರೇ ಈ ದೇಶವನ್ನು ಕಾಪಾಡಬೇಕು”:

ಸಾರ್ವಜನಿಕ ಸ್ಥಳಗಳಲ್ಲಿ ಜನರ ಇಂತಹ ಬೇಜವಾಬ್ದಾರಿ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, “ನಾವು ಸಾರ್ವಜನಿಕ ಸ್ಥಳಗಳಲ್ಲಿ ಇತರರ ವೈಯಕ್ತಿಕ ಜಾಗ ಹಾಗೂ ನೆಮ್ಮದಿಯನ್ನು ಗೌರವಿಸುವುದನ್ನು ಕಲಿಯಬೇಕಿದೆ. ನಾಗರಿಕ ಪ್ರಜ್ಞೆಯ ವಿಷಯದಲ್ಲಿ ನಾವೆಲ್ಲರೂ ಸೋತಿದ್ದೇವೆ” ಎಂದು ಬೇಸರದಿಂದ “ದೇವರೇ ಈ ದೇಶವನ್ನು ಕಾಪಾಡಬೇಕು” ಎಂದು ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles