Home ಕ್ರೈಂ ನ್ಯೂಸ್ “ಹುಡುಗಿಯನ್ನೇ ಬಂಧಿಸಿ, ಮಗನ ರಕ್ಷಿಸಿ”, “ನನ್ನ ಮಗ ಹೀರೋ”: ಜಮುಯಿ ಲೈಂಗಿಕ ದೌರ್ಜನ್ಯ ಆರೋಪಿ ನಂದನ್ ತಾಯಿ ಹೇಳಿಕೆ ವಿರುದ್ಧ ಜನಕ್ರೋಶ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

“ಹುಡುಗಿಯನ್ನೇ ಬಂಧಿಸಿ, ಮಗನ ರಕ್ಷಿಸಿ”, “ನನ್ನ ಮಗ ಹೀರೋ”: ಜಮುಯಿ ಲೈಂಗಿಕ ದೌರ್ಜನ್ಯ ಆರೋಪಿ ನಂದನ್ ತಾಯಿ ಹೇಳಿಕೆ ವಿರುದ್ಧ ಜನಕ್ರೋಶ!

Share
ಆರೋಪಿ
Share

ಜಮುಯಿ (ಬಿಹಾರ): ಬಿಹಾರದ ಜಮುಯಿ ಜಿಲ್ಲೆಯಲ್ಲಿ 10ನೇ ತರಗತಿಯ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ನಂದನ್ ಯಾದವ್‌ನನ್ನು ಪೊಲೀಸರು ಎನ್‌ಕೌಂಟರ್ ಮಾಡಿ ಬಂಧಿಸಿದ್ದಾರೆ. ಈ ಘಟನೆಯ ಬೆನ್ನಲ್ಲೇ ಆರೋಪಿಯ ತಾಯಿ ನೀಡಿದ ಹೇಳಿಕೆಗಳು ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.

ತಾಯಿಯ ವಿವಾದಾತ್ಮಕ ಹೇಳಿಕೆಗಳು:

ಸಂತ್ರಸ್ತೆಯ ಮೇಲೆಯೇ ಆಪಾದನೆ: “ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ರಾತ್ರಿಯ ವೇಳೆ ಆ ಹುಡುಗಿ ಹುಡುಗನ ಜೊತೆ ಹೊರಗೆ ಯಾಕೆ ಬಂದಳು?” ಎಂದು ಸಂತ್ರಸ್ತ ಬಾಲಕಿಯ ಮೇಲೆಯೇ ನೇರ ಆಪಾದನೆ ಹೊರಿಸಿದ್ದಾರೆ.

ಕೃತ್ಯದ ಸಮರ್ಥನೆ: “ವೈರಲ್ ವಿಡಿಯೋದಲ್ಲಿ ನನ್ನ ಮಗ ಆ ಹುಡುಗಿಯನ್ನು ರಕ್ಷಿಸಲು ಯತ್ನಿಸುತ್ತಿದ್ದಾನೆ, ಆತ ಒಬ್ಬ ಹೀರೋ” ಎಂದು ಮಗನ ಹೇಯ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಬಂಧನಕ್ಕೆ ಆಗ್ರಹ: “ಆ ಹುಡುಗಿಯಿಂದಾಗಿಯೇ ನನ್ನ ಮಗ ಇಂದು ಜೈಲು ಪಾಲಾಗಿದ್ದಾನೆ. ಪೊಲೀಸರು ಮೊದಲು ಆ ಬಾಲಕಿಯನ್ನೇ ಬಂಧಿಸಬೇಕು” ಎಂದು ಆಗ್ರಹಿಸಿದ್ದಾರೆ.

ರಾಜಕೀಯ ನಾಯಕರಿಗೆ ಮನವಿ: “ಲಾಲೂ ಪ್ರಸಾದ್ ಯಾದವ್ ಅವರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ನನ್ನ ಮಗನನ್ನು ರಕ್ಷಿಸಬೇಕು” ಎಂದು ವಿನಂತಿಸಿದ್ದಾರೆ.

ಅಪ್ರಾಪ್ತ ಬಾಲಕಿಯ ಮೇಲಿನ ಕೃತ್ಯವನ್ನು ಸಮರ್ಥಿಸಿಕೊಂಡ ತಾಯಿಯ ‘ವೈಕ್ಟಿಮ್ ಬ್ಲೇಮಿಂಗ್’ ವರ್ತನೆಗೆ ಮಹಿಳಾ ಸಂಘಟನೆಗಳು ಹಾಗೂ ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles