ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಬಿಪಿಒ ಘಟಕದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳ ಮತ್ತು ಮತಾಂತರ ಯತ್ನ ಪ್ರಕರಣದಲ್ಲಿ ಆಘಾತಕಾರಿ ಸಂಗತಿಗಳು ಹೊರಬಂದಿವೆ.
11 ವರ್ಷಗಳಿಂದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಮಹಿಳಾ ಉದ್ಯೋಗಿಯೊಬ್ಬರು ತನ್ನ ಮೇಲಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಫೆಬ್ರವರಿ 2026ರಲ್ಲಿ ಸಂತ್ರಸ್ತೆಯು ಅನಾರೋಗ್ಯದ ಕಾರಣ ಕೇಳಿದಾಗ, ತಾನು ಗರ್ಭಪಾತದಿಂದ ಬಳಲುತ್ತಿರುವುದಾಗಿ ತಿಳಿಸಿದ್ದರು. ಈ ವೇಳೆ ಆರೋಪಿ ತೌಸಿಫ್ ಅತ್ತಾರ್, ಆಕೆಗೆ ಅಜ್ಮೀರ್‌ನ ಮೌಲ್ವಿಯೊಬ್ಬರ ಸಂಪರ್ಕ ಸಂಖ್ಯೆ ನೀಡಿ, ಅಲ್ಲಿಗೆ ಹೋಗಿ ಬಂದರೆ ಮಗು ಜನಿಸುತ್ತದೆ ಎಂದು ಹೇಳುವ ಮೂಲಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಅಲ್ಲದೆ, ಇನ್ನೊಬ್ಬ ಆರೋಪಿ ಶಾಫಿ ಶೇಖ್ ಸಭೆಗಳ ಸಮಯದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಸಂತ್ರಸ್ತೆ ದೂರಿದ್ದಾರೆ. ಎಚ್‌ಆರ್ ವಿಭಾಗವು ದೂರುಗಳನ್ನು ನಿರ್ಲಕ್ಷಿಸಿ ಕೇವಲ ವರ್ಗಾವಣೆ ಮಾಡುವ ಮೂಲಕ ಪ್ರಕರಣ ಮುಚ್ಚಿಹಾಕಲು ಯತ್ನಿಸಿದೆ ಎಂಬ ಆರೋಪ ಕೇಳಿಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 9 ಎಫ್‌ಐಆರ್ ದಾಖಲಾಗಿದ್ದು, ವಿಶೇಷ ತನಿಖಾ ತಂಡ (SIT) ತನಿಖೆ ನಡೆಸುತ್ತಿದೆ.
- forced conversion allegations
- Nashik BPO scandal
- POSH compliance failure
- sexual harassment at workplace
- SIT Investigation
- Tausif Attar
- TCS Nashik Case
- TCS Nashik news
- workplace safety
- ಎಫ್‌ಐಆರ್
- ಎಸ್ಐಟಿ ತನಿಖೆ
- ಟಿಸಿಎಸ್ ನಾಸಿಕ್ ಪ್ರಕರಣ
- ಟಿಸಿಎಸ್ ಬಿಪಿಒ ಹಗರಣ
- ತೌಸಿಫ್ ಅತ್ತಾರ್
- ನಾಸಿಕ್ ಕ್ರೈಂ ನ್ಯೂಸ್
- ಮತಾಂತರ ಯತ್ನ
- ಮಹಿಳಾ ಸುರಕ್ಷತೆ
- ಲೈಂಗಿಕ ಕಿರುಕುಳ






Leave a comment