ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

EXCLUSIVE: ತೆಲಂಗಾಣದಲ್ಲಿ ಕೈ ಅಧಿಕಾರಕ್ಕೆ ತರಲು ಶ್ರಮಿಸಿದ್ದ ಕಾಂಗ್ರೆಸ್ ಯುವ ನಾಯಕ: ಲೋಕಸಭೆ ಚುನಾವಣೆಗೆ ವಹಿಸಿರುವ ಜವಾಬ್ದಾರಿಯೇನು…? ಕಮಾಲ್ ಮಾಡ್ಲಿಕ್ಕೆ ಮಾಡಿರುವ ತಂತ್ರಗಾರಿಕೆ ಏನು…?

On: March 9, 2024 10:13 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:10-03-2024

ದಾವಣಗೆರೆ (Davanagere): ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕೆ ಸಿ ಆರ್ ಪಕ್ಷದ ಅಬ್ಬರದ ನಡುವೆಯೂ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. ಇದರಲ್ಲಿ ಸಿಎಂ ರೇವಂತ್ ರೆಡ್ಡಿ ಅವರ ಪಾದಯಾತ್ರೆ, ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರಾಗಿ ಹಗಲುರಾತ್ರಿ ದುಡಿದವರು. ಇವರಿಗೆ ಹೆಗಲಿಗೆ ಹೆಗಲು ಕೊಟ್ಟು ದಾವಣಗೆರೆಯ ಕಾಂಗ್ರೆಸ್ ಯುವ ನಾಯಕ ಸಾಥ್ ಕೊಟ್ಟಿದ್ದರು. ಅಧಿಕಾರಕ್ಕೆ ಬರುವ ಮುನ್ನ ಹಾಗೂ ಅಧಿಕಾರಕ್ಕೆ ಬಂದ ಬಳಿಕ ಈ ರಾಜ್ಯ ಮಾತ್ರವಲ್ಲ, ಕರ್ನಾಟಕ, ಎಐಸಿಸಿ ವರಿಷ್ಠರ ಗಮನ ಸೆಳೆದಿದ್ದಾರೆ.

ಅಂದ ಹಾಗೆ ಕಾಂಗ್ರೆಸ್ ನಲ್ಲಿ ತನಗೆ ವಹಿಸಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿ ಎಲ್ಲರ ಮನಸ್ಸು ಗೆದ್ದಿರುವ ಯುವ ನಾಯಕ ಸೈಯದ್ ಖಾಲಿದ್ ಅಹ್ಮದ್. ದಾವಣಗೆರೆಯ ಕಾಂಗ್ರೆಸ್ ಹಿರಿಯ ನಾಯಕ ಸೈಯದ್ ಸೈಫುಲ್ಲಾ ಅವರ ಪುತ್ರ. ತಂದೆಯಂತೆ ರಾಜಕೀಯದಲ್ಲಿ ಮೊದಲು ಪಕ್ಷಕ್ಕೆ ದುಡಿಯಬೇಕು, ಆಮೇಲೆ ಸ್ಥಾನಮಾನ ಕೇಳಬೇಕು ಎಂಬುದು ಇವರ ತತ್ವ.

Read Also This Story: ಡಾ. ರಾಜಕುಮಾರ್ ಪುತ್ರಿ ಪೂರ್ಣಿಮಾ, ಮೊಮ್ಮಗಳು ಧನ್ಯಾ ರಾಮ್ ಕುಮಾರ್ ರನ್ನ ಮನೆ ಕೆಲಸದವರಿಗೆ ಪರಿಚಯಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್

ಹಾಗಾಗಿ, ಕಳೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ತನಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಮಾತ್ರವಲ್ಲ, ಎಲ್ಲಾ ನಾಯಕರ ಮನಗೆಲ್ಲುವ ಜೊತೆಗೆ ಬೆಳೆಯುತ್ತಿರುವ ಯುವ ನಾಯಕ.

ಕಾಂಗ್ರೆಸ್ ನ ಕೇಂದ್ರ ವರಿಷ್ಠರು, ತೆಲಂಗಾಣದ ಪ್ರಮುಖ ಕಾಂಗ್ರೆಸ್ ನಾಯಕರು ಸೈಯದ್ ಖಾಲಿದ್ ಅಹ್ಮದ್ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂಥ ಯುವ ನಾಯಕರು ಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ. ಸೈಯದ್ ಖಾಲಿದ್ ಅಹ್ಮದ್ ಅವರು ಪ್ರಚಾರ ನಡೆಸಿದ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ ಎಂಬುದು ವಿಶೇಷ. ಅಲ್ಲದೇ, ಖಾಲಿದ್ ಅಹ್ಮದ್ ಎಂದರೆ ಕಾಂಗ್ರೆಸ್ ನಾಯಕರಿಗೆ ಎಲ್ಲಿಲ್ಲದ ಗೌರವ, ಅಭಿಮಾನ ಮತ್ತು ಪ್ರೀತಿ.

ದಾವಣಗೆರೆಯಿಂದ ತೆಲಂಗಾಣಕ್ಕೆ ತೆರಳಿ ಅಲ್ಲಿಯೇ ಇದ್ದು, ಹಗಲು ರಾತ್ರಿ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿಯೂ ಶಾಮನೂರು ಶಿವಶಂಕರಪ್ಪರು ಸ್ಪರ್ಧೆ ಮಾಡಿದಾಗ ಕಾರ್ಯ ನಿರ್ವಹಿಸಿದ್ದರು. ಇದರಲ್ಲಿ ಅಂಥಾ ವಿಶೇಷತೆ ಇಲ್ಲ ಎಂದರೂ ತೆಲಂಗಾಣಕ್ಕೆ ಹೋಗಿ ಅಲ್ಲಿ ಉತ್ತಮ ಕೆಲಸ, ಪಕ್ಷ ಸಂಘಟನೆ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

ರಾಷ್ಟ್ರೀಯ ಕಾರ್ಯದರ್ಶಿ:

ಭಾರತೀಯ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೈಯ್ಯದ್ ಖಾಲಿದ್ ಅಹ್ಮದ್ ಅವರನ್ನು ನೇಮಕ ಮಾಡಲಾಗಿದೆ. ಆದ್ರೆ, ಇದರ ಹಿಂದೆ ಖಾಲಿದ್ ಅಹ್ಮದ್ ಅವರ ಕಾರ್ಯ, ಪರಿಶ್ರಮ, ಪಕ್ಷಕ್ಕಾಗಿ ಸಲ್ಲಿಸಿದ ಸೇವೆ ಅನನ್ಯ. ಆ ಬಳಿಕ ತೆಲಂಗಾಣ ರಾಜ್ಯದ ಉಸ್ತುವಾರಿಯನ್ನಾಗಿ ನೇಮಕ ಮಾಡಲು ಕಾರಣವಾಯಿತು. ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿಯವರೊಂದಿಗೆ ಹೆಜ್ಜೆ ಹಾಕಿದರಲ್ಲದೇ, ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದರು.

ಲೋಕಸಭೆಗೆ ವಹಿಸಿರುವ ಜವಾಬ್ದಾರಿ ಏನು..?

ಸದ್ಯ ಭಾರತೀಯ ಯುವ ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಸೈಯದ್ ಖಾಲಿದ್ ಅಹ್ಮದ್ ಅವರು, ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ನಿರ್ವಹಿಸಿದ ಕಾರ್ಯವೈಖರಿ, ಹಗಲಿರುಳು ಶ್ರಮಿಸಿದ ಪರಿ, ಜನರೊಂದಿಗೆ ಬೆರೆತ ರೀತಿ, ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ್ದಕ್ಕಾಗಿ ಮತ್ತೊಂದು ಜವಾಬ್ದಾರಿ ವಹಿಸಲಾಗಿದೆ.

ತೆಲಂಗಾಣ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. 17 ಲೋಕಸಭೆ ಕ್ಷೇತ್ರಗಳಿದ್ದು, ಇಲ್ಲಿ ಕನಿಷ್ಛ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಬೇಕೆಂಬ ಗುರಿ ಹೊಂದಿದೆ. ಸದ್ಯಕ್ಕೆ ಮಾಹಿತಿ ಸಿಕ್ಕಿರುವ ಪ್ರಕಾರ 10-12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಹೇಳಲಾಗುತ್ತಿದೆ. ಹೈದರಾಬಾದ್, ಅದಿಲಾಬಾದ್, ಕರೀಂನಗರ, ಮೆಹಬೂಬಾಬಾದ್, ಮಲ್ಕಜ್ ಗಿರಿ, ನಲ್ಗೊಂಡ, ನಿಜಮಾಬಾದ್, ಸಿಕದಂರಬಾದ್, ವರಂಗಲ್, ಜಹಿರಾಬಾದ್ ಸೇರಿದಂತೆ ಒಟ್ಟು 17 ಕ್ಷೇತ್ರಗಳಿದ್ದು, ಈ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ಸೈಯದ್ ಖಾಲಿದ್ ಅಹ್ಮದ್ ಅವರು ವಿಧಾನಸಭಾ ಚುನಾವಣೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಕಾರಣಕ್ಕೆ ತೆಲಂಗಾಣ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ದಾವಣಗೆರೆಯ ಕಾಂಗ್ರೆಸ್ ಯುವ ನಾಯಕನೊಬ್ಬ ಬೇರೆ ರಾಜ್ಯದಲ್ಲಿ ಇಂಥ ಉನ್ನತ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಸೈಯದ್ ಖಾಲಿದ್ ಅಹ್ಮದ್ ಏನಂತಾರೆ…?

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೈಯದ್ ಖಾಲಿದ್ ಅಹ್ಮದ್ ಅವರು, ತಂದೆ ಸೈಯದ್ ಸೈಫುಲ್ಲಾ ಅವರು ಕಾಂಗ್ರೆಸ್ ಪಕ್ಷಕ್ಕೆ ಹಲವು ದಶಕಗಳಿಂದ ದುಡಿಯುತ್ತಿದ್ದಾರೆ. ಪಕ್ಷಕ್ಕಾಗಿ ಕೆಲಸ ನಿರ್ವಹಿಸಿದ್ದಾರೆ. ನಾನು ಸಹ ಕಾಂಗ್ರೆಸ್ ಪಕ್ಷದ ಸಂಘಟನೆ, ಅಭ್ಯರ್ಥಿಗಳ ಪರ, ಕಾರ್ಯಕರ್ತರು, ಮುಖಂಡರ ಜೊತೆ ಉತ್ತಮ ಒಡನಾಟ ಹೊಂದುತ್ತಿದ್ದೇನೆ. ತೆಲಂಗಾಣದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ವಹಿಸಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ್ದೇನೆ ಎಂಬ ತೃಪ್ತಿ ಇದೆ. ಪಕ್ಷದ ನಾಯಕರು ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಸಹ ಅಭಿನಂದನೆ ಸಲ್ಲಿಸುವ ಜೊತೆಗೆ ಕಾರ್ಯ ಗುರುತಿಸಿದರು. ರಣದೀಪ್ ಸುರ್ಜೆವಾಲಾ, ತೆಲಂಗಾಣ ಸಚಿವರು, ಕರ್ನಾಟಕದ ಸಚಿವರು ಸಹ ನನಗೆ ಅಭಿನಂದನೆ ಸಲ್ಲಿಸಿದ್ದು ಖುಷಿ ತಂದಿದೆ ಎನ್ನುತ್ತಾರೆ.

ಸದ್ಯಕ್ಕೆ ತೆಲಂಗಾಣ ಲೋಕಸಭೆ ಚುನಾವಣೆಗೆ ಜವಾಬ್ದಾರಿ ವಹಿಸಿದ್ದಾರೆ. ಅದನ್ನು ನಿಭಾಯಿಸುತ್ತಿದ್ದೇನೆ. ಈಗ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಸೇರಿದಂತೆ ಬೇರೆ ಜಿಲ್ಲೆಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತೇನೆ. ಒಟ್ಟಿನಲ್ಲಿ ಪಕ್ಷ ವಹಿಸಿದ ಕೆಲಸವನ್ನು ಪ್ರಾಮಾಣಿಕತೆ, ನಿಷ್ಠೆಯಿಂದ ಮಾಡುತ್ತೇನೆ. ಇದು ನನ್ನ ಕಮಿಟ್ ಮೆಂಟ್ ಎನ್ನುತ್ತಾರೆ ಸೈಯದ್ ಖಾಲಿದ್ ಅಹ್ಮದ್.

ತೆಲಂಗಾಣ ಯುವ ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಮ್ತು ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಿರುವ ಸೈಯದ್ ಖಾಲಿದ್ ಅಹ್ಮದ್ ಅವರು, ಎಐಸಿಸಿ ಉಸ್ತುವಾರಿ ದೀಪಾ ದಾಸ್ ಮುನ್ಶಿ, ಸಿಡಬ್ಬ್ಯೂಸಿ ಸದಸ್ಯ ಡಾ. ನಾಸೀರ್ ಹುಸೇನ್ ಅವರ ಜೊತೆಯೂ ಸಮಾಲೋಚನೆ ನಡೆಸಿದ್ದರು.

ಮನೆ ಮನೆ ಪ್ರಚಾರ ಅಭಿಯಾನ:

ಇನ್ನು ಸಿಎಂ ರೇವಂತ್ ರೆಡ್ಡಿ ಅವರ ಜೊತೆ ಮನೆ ಮನೆ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡುವ ವೇಳೆ ಸೈಯದ್ ಖಾಲಿದ್ ಅಹ್ಮದ್ ಅವರೂ ಇದ್ದರು. ಸಿಎಂ ರೇವಂತ್ ರೆಡ್ಡಿ ಅವರ ನಿವಾಸದಲ್ಲಿ ಈ ಅಭಿಯಾನಕ್ಕೆ ಚಾಲನೆ ಕೊಡಲಾಗಿತ್ತು. ಇನ್ನು ತೆಲಂಗಾಣದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಮುಖ್ಯ, ಪ್ರಮುಖ ಹಾಗೂ ಯಾವುದೇ ಸಭೆಗಳಿದ್ದರೂ ಸೈಯದ್ ಖಾಲಿದ್ ಅಹ್ಮದ್ ಅವರು ಪಾಲ್ಗೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ದಾವಣಗೆರೆಯ ಕಾಂಗ್ರೆಸ್ ಯುವ ನಾಯಕ ತೆಲಂಗಾಣದಲ್ಲಿ ಜನಪ್ರಿಯರಾಗುತ್ತಿರುವುದಷ್ಟೇ ಅಲ್ಲದೇ, ಎಐಸಿಸಿ ವರಿಷ್ಠರನ್ನು ಗಮನ ಸೆಳೆಯುತ್ತಿರುವುದು ಸಂತಸದ ವಿಚಾರ ಎನ್ನುತ್ತಾರೆ ದಾವಣಗೆರೆ ಕಾಂಗ್ರೆಸ್ ನ ಯುವ ನಾಯಕರು ಹಾಗೂ ಕಾರ್ಯಕರ್ತರು.

ಮುಂಬರುವ ದಿನಗಳಲ್ಲಿ ಸೈಯದ್ ಖಾಲಿದ್ ಅಹ್ಮದ್ ಅವರಿಗೆ ಉನ್ನತ ಸ್ಥಾನಗಳು ಅರಸಿ ಬರಲಿ. ಸಂಘಟನೆ, ಪಕ್ಷಕ್ಕಾಗಿ ಸಲ್ಲಿಸಿದ ಸೇವೆ ಗುರುತಿಸಿ ಕಾಂಗ್ರೆಸ್ ಹೈಕಮಾಂಡ್ ಉತ್ತಮ ಸ್ಥಾನ ನೀಡುತ್ತದೆ ಎಂಬ ನಂಬಿಕೆ ಇದೆ. ದಾವಣಗೆರೆಯವರಾದರೂ ತೆಲಂಗಾಣದಲ್ಲಿ ಕೆಲಸ ನಿರ್ವಹಿಸುತ್ತಿರುವುದು ನಮಗೆಲ್ಲರಿಗೂ ಮಾದರಿ. ಕುಟುಂಬ ಬಿಟ್ಟು ಪಕ್ಷಕ್ಕಾಗಿ ಕೆಲಸ ನಿರ್ವಹಿಸುತ್ತಿರುವ ಖಾಲಿದ್ ಅಹ್ಮದ್ ಅವರಂಥ ನಾಯಕರು ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೇಕು ಎಂದೂ ಸಹ ಹೇಳುತ್ತಿದ್ದಾರೆ. ಸೈಯದ್ ಖಾಲಿದ್ ಅಹ್ಮದ್ ಅವರು ಅಂದುಕೊಂಡದ್ದು ಎಲ್ಲವೂ ಈಡೇರಲಿ ಎಂಬುದು ನಮ್ಮ ಪ್ರಾರ್ಥನೆ ಎನ್ನುತ್ತಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment