SUDDIKSHANA KANNADA NEWS/ DAVANAGERE/ DATE:26-10-2024
ದಾವಣಗೆರೆ: ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಶ್ರೀ ಹಾಲಸ್ವಾಮೀಜಿ ಬೃಹನ್ಮಠದ ಸ್ಥಿರ ಚರ ಪಟ್ಟಾಧ್ಯಕ್ಷ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಶಿವಾಚಾರ್ಯ ಮಹಾಲಿಂಗ ಹಾಲಸ್ವಾಮೀಜಿ ಲೋಕಕಲ್ಯಾಣಾರ್ಥವಾಗಿ ನವೆಂಬರ್ 1 ರ ಶುಕ್ರವಾರದಿಂದ ನವೆಂಬರ್ 23 ರ ಶನಿವಾರದವರೆಗೆ 21 ದಿನ ಕಾಲ ಜಪ ತಪದ ಜೊತೆಗೆ ಮಹಾ ಪೂಜಾ ಮೌನಾನುಷ್ಠಾನವನ್ನು ಕೈಗೊಳ್ಳಲಿದ್ದಾರೆಂದು ಶ್ರೀ ಹಾಲಸ್ವಾಮಿ ಸೇವಾ ಸಮಿತಿಯ ಗೌರವಾಧ್ಯಕ್ಷ ಎಚ್. ಫಾಲಾಕ್ಷಪ್ಪಗೌಡ ತಿಳಿಸಿದರು.
ಅವರು ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಶ್ರೀ ಹಾಲಸ್ವಾಮೀಜಿ ಬೃಹನ್ಮಠದ ಅವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಶ್ರೀಮಠದ ಹಿಂದಿನ ಗುರುಗಳು ಮೌನಾನುಷ್ಠಾನ ಪೂಜಾವನ್ನು ಕೈಗೊಳ್ಳುವ ಮೂಲಕ ಬಂದ ಭಕ್ತರ ಕಷ್ಟ ಕಾರ್ಪಣ್ಯಗಳಿಗೆ ಆಶೀರ್ವಾದ ಮಾಡುತ್ತಿದ್ದರು ಅದರಂತೆ ಪ್ರಸ್ತುತ ಸ್ವಾಮೀಜಿಯವರು ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಮೂಲಕ 21 ದಿನಗಳ ಕಾಲ ಶ್ರೀಮಠದಲ್ಲಿ ನವೆಂಬರ್ 1 ರ ಶುಕ್ರವಾರ ಹೊನ್ನಾಳಿ ಚನ್ನಪ್ಪಸ್ವಾಮೀಜಿ ಹಿರೇಕಲ್ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಜಪ ತಪದ ಜೊತೆಗೆ ಮಹಾ ಪೂಜಾ ಮೌನಾನುಷ್ಠಾನವನ್ನು ಪ್ರಾರಂಭಿಸಲಿದ್ದಾರೆ ಎಂದು ಹೇಳಿದರು.
ಸಭೆಯ ಸಾನಿಧ್ಯ ವಹಿಸಿದ್ದ ಶ್ರೀ ಹಾಲಸ್ವಾಮೀಜಿ ಬೃಹನ್ಮಠದ ಸ್ಥಿರ ಚರ ಪಟ್ಟಾಧ್ಯಕ್ಷ ಷ ಬ್ರ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಶಿವಾಚಾರ್ಯ ಮಹಾಲಿಂಗ ಹಾಲಸ್ವಾಮೀಜಿ ಮಾತನಾಡಿ ಸ್ಥಿರ ಚರ ಪಟ್ಟಾಧಿಕಾರವಾಗಿ ವರ್ಷ ಪೂರೈಸುವುದರೊಳಗೆ, ಚನ್ನಪ್ಪಸ್ವಾಮೀಜಿ ಹಿರೇಕಲ್ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ , ವೀರಾಪುರ ಹಿರೇಮಠದ ಪಂಡಿತರಾದ್ಯ ಶಿವಾಚಾರ್ಯ ಸ್ವಾಮೀಜಿ ,ಕಡೇನಂದಿಹಳ್ಳಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಸೂಚನೆಯಂತೆ ಲೋಕಕಲ್ಯಾಣಾರ್ಥವಾಗಿ ಹಾಗೂ ಭಕ್ತರ ಹಿತಕೋಸ್ಕರ ಸಮೃದ್ದ ರಾಷ್ಟ್ರ ನಿರ್ಮಾಣವಾಗಲಿ ಎಂಬ ಸಂಕಲ್ಪದೊಂದಿಗೆ 21 ದಿನ ಕಾಲ ಜಪ ತಪದ ಜೊತೆಗೆ ಮಹಾ ಪೂಜಾ ಮೌನಾನುಷ್ಠಾನವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಬೇಡಜಂಗಮ ಜಂಗಮ ಸೇವಾ ಸಮಿತಿಯ ಹೊನ್ನಾಳಿ ತಾಲೂಕು ಅಧ್ಯಕ್ಷ ಬೈರನಹಳ್ಳಿ ಎಂ.ಪಂಚಾಕ್ಷರಯ್ಯ ಮಾತನಾಡಿ ಹಾಲಸ್ವಾಮೀಜಿ ಮೌನಾನುಷ್ಠಾನದ ಶುಭಸಂಧರ್ಭದಲ್ಲಿ ಬೇಡಜಂಗಮ ವಟುಗಳ ಹಾಗೂ ಅಸಕ್ತಿಯುಳ್ಳ
ಭಕ್ತರಿಗೆ ನವೆಂಬರ್ 14 ರ ಗುರುವಾರ ಶಿವದೀಕ್ಷಾ ಕಾರ್ಯಕ್ರಮವನ್ನು ನವೆಂಬರ್ 22 ರ ಶುಕ್ರವಾರ ಲೋಕ ಕಲ್ಯಾಣಾರ್ಥವಾಗಿ ಶಾಂತಿ ಹೋಮ , ಹವನಾದಿ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳ ಮೂಲಕ ಮೌನಾನುಷ್ಠಾನದ
ಮಂಗಲ ನಡೆಯಲಿದ್ದು ನವೆಂಬರ್ 23 ರ ಶನಿವಾರ ಬೆಳಿಗ್ಗೆ ನಾಡಿನ ವಿವಿಧ ಮಠಾದೀಶರಗಳ ನೇತೃತ್ವದಲ್ಲಿ ಸರ್ವಧರ್ಮ ಸಮಾರಂಭ ನಡೆಯಲಿದ್ದು ಭಕ್ತರು ತನು , ಮನ , ಧನದ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಪೂರ್ವಭಾವಿ ಸಭೆಯಲ್ಲಿ ಶ್ರೀ ಹಾಲಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಎಸ್. ಇ. ರಮೇಶ್, ಕಾರ್ಯದರ್ಶಿ ವಿ.ಎಚ್.ರುದ್ರೇಶ್, ಪದಾಧಿಕಾರಿಗಳಾದ ಗಂಗಾಧರಪ್ಪ, ಬಿ.ರಾಜಪ್ಪ, ಸತೀಶ್, ಶಿವಮೂರ್ತಿಪ್ಪ, ಮಧು, ವೀರೇಂದ್ರಸ್ವಾಮಿ, ವಿಶ್ವನಾಥ್, ಚನ್ನೇಶಯ್ಯ, ಪರ್ತಕರ್ತರಾದ ಸದಾಶಿವಯ್ಯ ಹಿರೇಮಠ್ , ಡಿ.ಎಂ.ಹಾಲಾರಾಧ್ಯ , ಎಂ. ಎಸ್. ಶಾಸ್ತ್ರಿ ಹೊಳೆಮಠ್, ಬೇಡಜಂಗಮ ಸಮಾಜ ಸೇವಾ ಸಮಿತಿಯ ತಾಲೂಕು ಪ್ರಧಾನ ಕಾರ್ಯದರ್ಶಿ ಕುಳಗಟ್ಟೆ ರುದ್ರಸ್ವಾಮಿ, ಬೆನಕನಹಳ್ಳಿ ಬಸವರಾಜಯ್ಯ, ಕ್ಯಾಸಿನಕೆರೆ ರುದ್ರೇಶ್, ಬೇಡಜಂಗಮ ಸಮಾಜ ನ್ಯಾಮತಿ ತಾಲೂಕು ಅಧ್ಯಕ್ಷ ಚಟ್ನಹಳ್ಳಿ ರೇವಣಸಿದ್ದಯ್ಯ ಸೇರಿದಂತೆ ಹಲವಾರು ಗ್ರಾಮದ ಮುಖಂಡರು ಹಾಜರಿದ್ದರು.