SUDDIKSHANA KANNADA NEWS/ DAVANAGERE/ DATE: 08-09-2023
– ಗಿರೀಶ್ ಕೆ ಎಂ
ಮುಂಬೈ ಷೇರು ಪೇಟೆ (Stock market)ಯಲ್ಲಿ ಗೂಳಿಯ ನಾಗಾಲೋಟ ಇಂದು ಸಹಾ ಮುಂದುವರೆದಿದೆ. ಆರಂಭದಲ್ಲೇ ಜಿಗಿತ ಕಂಡ ಮಾರುಕಟ್ಟೆ, ಮಿಡ್-ಕ್ಯಾಪ್ ಮತ್ತು ಸ್ಮಾಲ್-ಕ್ಯಾಪ್ ಕಂಪನಿಗಳ ಷೇರುಗಳಲ್ಲಿ ಖರೀದಿ ಜೋರಾಗಿದ್ದ ಕಾರಣ ಹಂತ ಹಂತವಾಗಿ ಏರಿಕೆ ಕಂಡು ದಿನದ ಅಂತ್ಯಕ್ಕೆ ಮಾರುಕಟ್ಟೆ ಗರಿಷ್ಠ ಮಟ್ಟ ತಲುಪಿತು.
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 92.91 (0.47%) ಅಂಕ ಏರಿಕೆ ಕಂಡು 19,819.95 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 333.35 (0.50%) ಅಂಕ ಏರಿಕೆ ಕಂಡು 66,598.91 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಈ ಸುದ್ದಿಯನ್ನೂ ಓದಿ:
ಕುಸಿಯುತ್ತಿದ್ದ ಅಡಿಕೆ (Areca nut) ಧಾರಣೆ ಏರಿಕೆ: 51 ಸಾವಿರ ಗಡಿ ದಾಟಿದ ಕ್ವಿಂಟಾಲ್ ಅಡಿಕೆ…!
ಇಂದು ನಿಫ್ಟಿಯಲ್ಲಿ ರಿಯಾಲಿಟಿ, ಫೈನಾನ್ಸ್, ಕನ್ಸೂಮರ್, ಆಯಿಲ್ ಮತ್ತು ಗ್ಯಾಸ್ ,ಬ್ಯಾಂಕ್ ವಲಯದ ಷೇರುಗಳು ಅಧಿಕ ಪ್ರಮಾಣದಲ್ಲಿ ಏರಿಕೆ ಕಂಡವು. ಮಾಧ್ಯಮ ವಲಯ, ಫಾರ್ಮ ಮತ್ತು ಹೆಲ್ತ್ ಕೇರ್ ವಲಯದ ಷೇರುಗಳು ಇಳಿಕೆ ಯೊಂದಿಗೆ ಕೊನೆಗೊಂಡವು.
ಏರಿಕೆ ಕಂಡ ಷೇರುಗಳು:
ಇಂದು NTPC, COALINDIA, BPCL, TATAMOTORS, LT ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
UPL, EICHERMOT, APOLLOHOSP, ULTRACEMCO, SBILIFE ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು:
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 27 ಪೈಸೆ ಏರಿಕೆಯಾಗಿ 82.94 ಕ್ಕೆ ಭಾರತೀಯ ರೂಪಾಯಿ ತನ್ನ ವಹಿವಾಟು ಕೊನೆಗೊಳಿಸಿದೆ.
FII ಮತ್ತು DII ನಗದು ವಹಿವಾಟು ವಿವರ:
ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ -224.22 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ. +1,150.15 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.