SUDDIKSHANA KANNADA NEWS/ DAVANAGERE/ DATE:17-06-2024
ದಾವಣಗೆರೆ: ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ 94ನೇ ಜನುಮದಿನಾಚರಣೆಯನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸಿದರು. ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅರ್ಥಪೂರ್ಣವಾಗಿ ಜನುಮದಿನ ಸೆಲೆಬ್ರೆಟ್ ಮಾಡಿದರು. ಗಿಡ ನೆಡುವುದು, ಬಾಸ್ಕೆಟ್ ಬಾಲ್ ಪಂದ್ಯಾವಳಿ, ಚಿತ್ರಕಲಾ ಸ್ಪರ್ಧೆ, ರಕ್ತದಾನ ಶಿಬಿರ ಮತ್ತು ಶಾಮನೂರು ಶಿವಶಂಕರಪ್ಪರ ಜೀವನಾಗಾಥೆ ಕುರಿತ ಚಿತ್ರ ಬಿಡಿಸುವ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.
ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್, ಡಾ. ಪ್ರಭಾ ಮಲ್ಲಿಕಾರ್ಜುನ್ ಅಭಿಮಾನಿ ಬಳಗ, ಗಡಿಗುಡಾಳ್ ಮಂಜುನಾಥ್ ಸ್ನೇಹ ಬಳಗದ ಆಶ್ರಯದಲ್ಲಿ ಈ ಕಾರ್ಯಕ್ರಮಗಳು ಜರುಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ಆಶ್ರಯದಲ್ಲಿ ಶಾಮನೂರು ಶಿವಶಂಕರಪ್ಪ ಅವರ 94ನೇ ಹುಟ್ಟು ಹಬ್ಬದ ಪ್ರಯುಕ್ತ ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. 13 ಮತ್ತು 16 ವರ್ಷದ ಬಾಲಕರು ಹಾಗೂ ಪುರುಷರ ಬಾಸ್ಕೆಟ್ ಬಾಲ್ ಪಂದ್ಯಾವಳಿಯು ಯಶಸ್ವಿಯಾಗಿ ನೆರವೇರಿತು.
13 ವಯಸ್ಸಿನ ಬಾಲಕರ ವಿಭಾಗದಲ್ಲಿ 15-10 ಅಂಕಗಳಿಂದ ಟೀಮ್ ವಾರಿಯರ್ಸ್ ಪ್ರಥಮ ಸ್ಥಾನ , ದ್ವಿತೀಯ ಸ್ಥಾನ ಡಿಫೆಂಡರ್ಸ್ ಮತ್ತು ತೃತೀಯ ಸ್ಥಾನ ಟೈಗರ್ ಬುಲ್ಸ್ ಪಡೆದುಕೊಂಡಿತು. 16 ವಯಸ್ಸಿನ ಬಾಲಕರ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ನ ಗೋಲ್ಡನ್ ವಾರಿಯರ್ಸ್ 20-16 ಅಂಕಗಳಿಂದ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಲೇಕರ್ಸ್, ತೃತೀಯ ಸ್ಥಾನ ದಾವನ್ಸ್ ಬ್ಯಾಸ್ಕೆಟ್ಬಾಲ್ ಕ್ಲಬ್ ಪಡೆದುಕೊಂಡಿತು.
ಇನ್ನು ಪುರುಷರ ವಿಭಾಗದಲ್ಲಿ 40-37 ಅಂಕಗಳಿಂದ ಪ್ರಥಮ ಸ್ಥಾನ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ಪಡೆದಿದ್ದು ದ್ವಿತೀಯ ಸ್ಥಾನ ಎಸ್ ಎಸ್ ಐ ಎಂ ಎಸ್ ಮೆಡಿಕಲ್ ಕಾಲೇಜ್ ಗೆದ್ದುಕೊಂಡಿತು. ಬಹುಮಾನ ಕಾರ್ಯಕ್ರಮಕ್ಕೆ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ಬಿನ ಗೌರವಾಧ್ಯಕ್ಷ ರಾಮ್ ಮೂರ್ತಿ ಸಿ, ಅಧ್ಯಕ್ಷ ಕಿರಣ್ ಕುಮಾರ್ ಆರ್, ಉಪಾಧ್ಯಕ್ಷ ಗಡಿಗುಡಾಳ್ ಮಂಜುನಾಥ್, ಉಪಾಧ್ಯಕ್ಷ ವಿಜಯಕುಮಾರ್, ಖಜಾಂಚಿ ಪ್ರಸನ್ನ ,ತರಬೇತರಾದ ದರ್ಶನ್ ಆರ್. ಹಾಗೂ ಸಚಿನ್ ಘಾಟ್ಗೆ ಹಾಗೂ ಕ್ಲಬ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ರಕ್ತದಾನ ಶಿಬಿರ:
ಎಂಸಿಸಿ ಬಿ ಬ್ಲಾಕ್ ನ ಐಎಂಎ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು ಚಿತ್ರಕಲಾ ಸ್ಪರ್ಧೆ ಹಾಗೂ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಇದಕ್ಕೂ ಮುನ್ನ ಎಸ್. ಎಸ್. ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು.
ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್, ಡಾ. ಪ್ರಭಾ ಮಲ್ಲಿಕಾರ್ಜುನ್ ಅಭಿಮಾನಿ ಬಳಗ, ಗಡಿಗುಡಾಳ್ ಮಂಜುನಾಥ್ ಸ್ನೇಹ ಬಳಗದ ಆಶ್ರಯದಲ್ಲಿ ಈ ಕಾರ್ಯಕ್ರಮ ಜರುಗಿತು. ಆರ್ಟ್ಸ್ ಕಾಲೇಜಿನ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಶಾಮನೂರು ಶಿವಶಂಕರಪ್ಪರ ಜೀವನಾಗಾಥೆ ಕುರಿತ ಚಿತ್ರಗಳನ್ನು ಬಿಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಡಿಗುಡಾಳ್ ಮಂಜುನಾಥ್ ಅವರು, ದಾವಣಗೆರೆಯನ್ನು ಇಡೀ ಭಾರತವೇ ತಿರುಗಿ ನೋಡುವಂತೆ ಮಾಡಿದವರು ಶಾಮನೂರು ಶಿವಶಂಕರಪ್ಪ ಅವರು. ಕಾಂಗ್ರೆಸ್ ನ ಹಿರಿಯ ಶಾಸಕರು. ಇಷ್ಟು ವರ್ಷದ ಶಾಸಕರು ದೇಶದಲ್ಲಿಯೇ ಇಲ್ಲ. ಅವರ ಜನುಮದಿನದ ಪ್ರಯುಕ್ತ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ರಕ್ತದಾನ ಶ್ರೇಷ್ಠವಾದದ್ದು. ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕೆಂದು ಸಲಹೆ ನೀಡಿದರು.
ಶಾಮನೂರು ಶಿವಶಂಕರಪ್ಪ ಅವರ ಜನುಮದಿನದ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ, ಸಸಿಗಳನ್ನು ನೆಡುವ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಖುಷಿ ಕೊಟ್ಟಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಕೆ. ಚಮನ್ ಸಾಬ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ರಾಮಮೂರ್ತಿ, ಕಿರಣ್, ಪರಶುರಾಮಪ್ಪ, ರಾಜು, ಪ್ರಮೋದ್, ಸರ್ವಮಂಗಳಮ್ಮ, ಮೊಯಿನುದ್ದೀನ್, ಭರತ್, ವಿಜಿ ಗೌಡ, ಗುರು, ನಿಖಿಲ್, ನೀಲಕಂಠಪ್ಪ, ಸಿದ್ದು, ಸಂಕೇತ್, ಉದಯ್, ಪ್ರಶಾಂತ್, ಬಸಣ್ಣ, ಬಾಸ್ಕೆಟ್ ಬಾಲ್ ಕ್ಲಬ್ ನ ಸದಸ್ಯರು, ವಾರ್ಡ್ ನ ಹಿರಿಯರು, ಪ್ರಮುಖರು ಹಾಜರಿದ್ದರು.
ಗಿಡ ನೆಟ್ಟು ಸಂಭ್ರಮ:
ಬಾಸ್ಕೆಟ್ ಬಾಲ್ ಕ್ಲಬ್, ಡಾ. ಪ್ರಭಾ ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗ, ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಸ್ನೇಹ ಬಳಗದ ಆಶ್ರಯದಲ್ಲಿ ಮನೆಗೆರಡು ಮರ- ದಾವಣಗೆರೆಗೆ ವರ ಕಾರ್ಯಕ್ರಮ ಹಾಗೂ ಚಿತ್ರಕಲಾ ಸ್ಪರ್ಧೆ ನಡೆಸಲಾಯಿತು.
ಮಕ್ಕಳಲ್ಲಿ ಪರಿಸರ ಪ್ರೇಮ ಮೂಡಿಸುವ ಸಲುವಾಗಿ ಮಹಾನಗರ ಪಾಲಿಕೆ ಸದಸ್ಯ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಮತ್ತು ಸ್ನೇಹಿತರ ಬಳಗ ಚಿತ್ರಕಲಾ ಸ್ಪರ್ಧೆಯಲ್ಲಿ ಬಾಪೂಜಿ, ಗುಂಡಿ ಮಹದೇವಪ್ಪ, ಶಾಮನೂರು ಸರ್ಕಾರಿ ಪ್ರೌಢಶಾಲೆ, ಸೀತಮ್ಮ ವಸತಿಯುತ ಶಾಲೆ, ಬಕ್ಕೇಶ್ವರ , ಜಗದ್ಗುರು ಮುರುಗರಾಜೇಂದ್ರ ಪ್ರೌಢಶಾಲೆ, ವಿಶ್ವಭಾರತಿ ಮುಂತಾದ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಥಳದಲ್ಲಿ ಪರಿಸರ ಕುರಿತ ಚಿತ್ರಗಳನ್ನು ರಚಿಸಿ ಗಮನ ಸೆಳೆದರು.
ಪರಿಸರ ದಿನಾಚರಣೆ ಮತ್ತು ಶಾಮನೂರು ಶಿವಶಂಕರಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ಎಂಸಿ.ಸಿ ಬಿ ಬ್ಲಾಕ್ನಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎಂ.ಸಿ.ಸಿ. ಬಿ ಬ್ಲಾಕ್ನ ಕಾರ್ಪೋರೇಟರ್ ಗಡಿಗುಡಾಳ್ ಮಂಜುನಾಥ್, ವಾರ್ಡ್ ನ ಪ್ರಮುಖರಾದ ಗುರುಮೂರ್ತಿ, ಮಂಜುಳಾ ಬಸವಲಿಂಗಪ್ಪ, ಆರ್ಟಿಒ ರಾಜು, ಹೆಲ್ತ್ ಇನ್ಸ್ ಪೆಕ್ಟರ್ ಪ್ರಕಾಶ್, ಹೆಲ್ತ್ ದಫೇದಾರ್ ರಮೇಶ್, ಭದ್ರಾ ಕಾಲೇಜಿನ ಸಂಕೇತ್, ಎಂ. ವಿಜಯಗೌಡರು, ರಾಮಮೂರ್ತಿ, ಸಪ್ತಗಿರಿ, ಭರತ್, ಪ್ರಮೋದ್, ಪ್ರವೀಣ ಕಂಬಳಿ, ಗುರು, ಬಸವರಾಜ್, ನೀಲಕಂಠಪ್ಪ, ನಿಖಿಲ್ ಮತ್ತು ಪಾಲಿಕೆಯ ನೌಕರರು ಮತ್ತಿತರರು ಹಾಜರಿದ್ದರು.