SUDDIKSHANA KANNADA NEWS/ DAVANAGERE/ DATE:13-12-2024
ದಾವಣಗೆರೆ: ದೆಹಲಿ ರಾಜೀವ್ ಗಾಂಧಿ ಯೂನಿವರ್ಸಿಟಿ ಹೆಲ್ತ್ ಸೈನ್ಸ್ ಪ್ರೊಫೆಸರ್ ವಿಭಾಗದ ಕ್ಷೇತ್ರದಿಂದ ದಾವಣಗೆರೆ ಬಾಪೂಜಿ ಆಸ್ಪತ್ರೆ ಪ್ರೊಫೆಸರ್ ಶ್ರೀನಿವಾಸ್ ಎಲ್. ಡಿ. ಸೆನೆಟ್ ಸದಸ್ಯರಾಗಿ ಚುನಾಯಿತರಾದರು.
ಕಳೆದ ಡಿಸೆಂಬರ್ 10 ರಂದು ರಾಜೀವ್ ಗಾಂಧಿ ವಿ ವಿ ಸೆನೆಟ್ ಗೆ ಚುನಾವಣೆ ನಡೆದಿದೆ. ದಾವಣಗೆರೆಯ ಡಾ. ಶ್ರೀನಿವಾಸ್ ಎಲ್. ಡಿ. ಸ್ಪರ್ಧಿಸಿದ 17 ಜನರಲ್ಲಿ 875 ಅತ್ಯಧಿಕ ಮತಗಳಿಂದ ಆಯ್ಕೆಯಾಗುವ ಮೂಲಕ ಭಾರೀ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಶ್ರೀನಿವಾಸ್ ಅವರ ಆಯ್ಕೆಗೆ ಬಾಪೂಜಿ ವಿದ್ಯಾ ಸಂಸ್ಥೆಯ ಎಲ್ಲಾ ಪ್ರೊಫೆಸರ್, ವೈದ್ಯರು, ಆರೋಗ್ಯ ವಿಭಾಗದ ಎಲ್ಲಾ ಸಿಬ್ಬಂದಿ ವರ್ಗ ಅಭಿನಂದಿಸಿದೆ.