Home ಕ್ರೀಡೆ ದಾವಣಗೆರೆಯ ಹಳೇ ಕುಂದುವಾಡದ ಶ್ರೀ ನೂತನ‌ ವಾರಿಯರ್ಸ್ ಚಾಂಪಿಯನ್
ಕ್ರೀಡೆದಾವಣಗೆರೆಬೆಂಗಳೂರು

ದಾವಣಗೆರೆಯ ಹಳೇ ಕುಂದುವಾಡದ ಶ್ರೀ ನೂತನ‌ ವಾರಿಯರ್ಸ್ ಚಾಂಪಿಯನ್

Share
ದಾವಣಗೆರೆ
Share

ದಾವಣಗೆರೆ: ನಗರದ ಹಳೇ ಕುಂದುವಾಡದಲ್ಲಿ ಯೂಥ್ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ಕುಂದುವಾಡ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಎಸ್ ಬಿ ನಾಗರಾಜ್ ಹಾಗೂ ಸಿ. ಮಾರುತೇಶ್ ನೇತೃತ್ವದ ಶ್ರೀ ನೂತನ ವಾರಿಯರ್ಸ್ ತಂಡ ರಾಮದೂತ ತಂಡವನ್ನ ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಟಾಸ್ ಗೆದ್ದ ರಾಮದೂತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಗೆ ಇಳಿದ ಶ್ರೀ ನೂತನ ತಂಡ ಐದು ಓವರ್ ಗೆ 30ರನ್ ಗಳಿಸಿತು.

31 ರನ್ ಗುರಿ ಬೆನ್ನತ್ತಿದ ರಾಮದೂತ ತಂಡ ಮೊದಲು ಉತ್ತಮ ಪೈಪೋಟಿ ನೀಡಿತು. ಕೊನೆಯಲ್ಲಿ ಪಂದ್ಯ ರೋಚಕ ಘಟ್ಟ ತಲುಪಿತು, ಕೊನೆಯ ಎಸೆತದಲ್ಲಿ ನಾಲ್ಕು ರನ್ ಅವಶ್ಯಕತೆ ಇದ್ದಾಗ ವಿಕೆಟ್ ಕೈ ಚೆಲ್ಲಿ ಮೂರು ರನ್ ನಿಂದ ಸೋಲು‌ ಕಂಡಿತು. ಇದರೊಂದಿಗೆ ಶ್ರೀ ನೂತನ ವಾರಿಯರ್ಸ್ ಪ್ರಥಮ‌ ಸ್ಥಾನ‌ ಗಳಿಸಿತು.

ರನ್ನರ್ ಅಪ್ ಆಗಿ ರಾಮದೂತ, ತೃತೀಯ ಬಹುಮಾನವನ್ನ ಅಪ್ಪು ಪವರ್ ಫೈಟರ್ಸ್ ತಂಡ ಪಡೆಯಿತು. ನಾಲ್ಕನೇ ಸ್ಥಾನ ಆರ್ ಎಕ್ಸ್ ಅವೆಂಜರ್ಸ್ ತಂಡ ಪಡೆಯಿತು.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles