SUDDIKSHANA KANNADA NEWS/ DAVANAGERE/ DATE:14-03-2024
ದಾವಣಗೆರೆ: ಹೋಳಿ ಹಬ್ಬ ಬರುವುದರಿಂದ ಯಾರೂ ಕೂಡ ಒತ್ತಾಯ ಪೂರ್ವಕವಾಗಿ ಸಾರ್ವಜನಿಕರಿಗೆ ಬಣ್ಣ ಹಚ್ಚುವುದು ಹಾಗೂ ಪಿಯುಸಿ ಪರೀಕ್ಷೆಗೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಬಣ್ಣ ಹಾಕುವುದು ಅಥವಾ ಹಾನಿಕಾರಕ ರಾಸಾಯಿನಿಕ ಬಳಸುವುದರಿಂದ ಚರ್ಮ, ಕಣ್ಣುಗಳಿಗೆ ತೊಂದರೆಯಾಗುತ್ತದೆ. ಹಾನಿಕಾರಕ ರಾಸಾಯಿನಿಕ ಬಳಸಬಾರದು ಮತ್ತು ಹೋಳಿಗಾಗಿ ಒತ್ತಾಯವಾಗಿ ಹಣ ವಸೂಲಿ ಮಾಡಬಾರದು ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಅವರು ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗದಲ್ಲಿ ಮುಂಬರುವ ದುರ್ಗಾಂಬ ಜಾತ್ರೆ, ಹೋಳಿ ಹಬ್ಬಗಳ ಹಿನ್ನಲೆಯಲ್ಲಿ ನಡೆಸಲಾದ ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಸಾರ್ವಜನಿಕರ ನೀರಿನ ಮೂಲಗಳ ಅಥವಾ ಸ್ಥಳಗಳಲ್ಲಿ ಬಣ್ಣ ಸೇರ್ಪಡೆ ಮಾಡುವುದು, ಮತ್ತು ಮಹಿಳೆಯರ ನಿಲಯಗಳಿಗೆ ಹೋಗಿ ತೊಂದರೆ ಮಾಡುವುದು, ಅಸಭ್ಯವಾಗಿ ವರ್ತನೆ ಮಾಡುವುದು, ಮದ್ಯಪಾನ ಸೇವಿಸಿ ಚಾಲನೆ ಮಾಡುವುದು, ಇದು ಯಾವುದು ಕೂಡ ನಡೆಯಬಾರದು. ಇಂತಹ ಘಟನೆಗಳು ಕಂಡು ಬಂದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಅಪಾರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ್, ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ ಸಂತೋಷ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಅಭಿಷೇಕ್,
ಜಿಲ್ಲಾ ವಿಶೇಷ ವಿಭಾಗ ಪೊಲೀಸ್ ನಿರೀಕ್ಷಕ ಇಮ್ರಾನ್ ಬೇಗ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ್ಕೆ ವಾಸಂತಿ ಉಪ್ಪಾರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ಇನ್ನಿತರರು ಉಪಸ್ಥಿತರಿದ್ದರು.