SUDDIKSHANA KANNADA NEWS/ DAVANAGERE/ DATE:27-06-2024
ದಾವಣಗೆರೆ: ವಿದ್ಯಾರ್ಥಿಗಳು, ಯುವಕರು ಇದರಲ್ಲಿ ಒಂದು ಬಾರಿ ಹೋದರೆ ಆರೋಗ್ಯ ಹಾಳಾಗಲಿದ್ದು, ಎಜುಕೇಷನ್ ಸಹಾ ಹಾಳಾಗಲಿದೆ ಆದ್ದರಿಂದ ಎಲ್ಲರೂ Say No to Drugs ಎನ್ನಬೇಕು. ಯಾರು ಸಹಾ ಡ್ರಗ್ಸ್ ವ್ಯಾಪ್ತಿಗೆ ಹೋಗಬಾರದು, ಮಾದಕ ವಸ್ತುಗಳ ಮಾರಾಟ ಮಾಡುವವರು ನಿಮ್ಮ ಸುತ್ತಮುತ್ತ ಕಂಡು ಬಂದರೆ ಹಾಗೂ ನಿಮ್ಮ ಗಮನಕ್ಕೆ ಯಾರಾದರೂ ಮಾರುವವರಿದ್ಗದರೆ ನಮ್ಮ ಗಮನಕ್ಕೆ ತರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ವಿದ್ಯಾರ್ಥಿಗಳಿಗೆ ಡ್ರಗ್ಸ್ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು. ಈಗಾಗಲೇ ನಮ್ಮ ಅಧಿಕಾರಿಗಳು ಕಳೆದ ವಾರದಿಂದ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚಾಗಿದೆ ಎಂದು ಅನುಮಾನಸ್ಪದವಾಗಿ ಕಂಡು ಬರುವ ವಿದ್ಯಾರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ವೈಧ್ಯಕೀಯ ವರದಿಗಳ ಮೇಲೆ ವಿದ್ಯಾರ್ಥಿಗಳ ಮೇಲೂ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಇದರ ಉದ್ದೇಶ ಪ್ರಕರಣ ದಾಖಲಿಸುವುದು ಅಲ್ಲ, ಯುವ ಜನತೆ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದಾಗಿದೆ ಎಂದು ಹೇಳಿದರು.
ನಿಮ್ಮ ಗುರಿ ಒಳ್ಳೆಯ ಶಿಕ್ಷಣ ಪಡೆದು ಉತ್ತಮ ಹುದ್ದೆ ಪಡೆದುಕೊಳ್ಳುವುದು, ಉತ್ತಮ ನಾಯಕರಾಗುವುದು, ಒಳ್ಳೆಯ ನಾಗರಿಕರಾಗುವುದಾಗಿರಬೇಕು. ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಕ್ಕೆ ಧನ್ಯವಾದಗಳು ಎಂದರು.
ಸಾಮಾಜಿಕ ಪಿಡುಗಾದ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ಮಾಡುವವರ ಮೇಲೆ ಜಿಲ್ಲಾ ಪೊಲೀಸ್ ವಿಶೇಷ ಕಾರ್ಯಾಚರಣೆ ಕೈಗೊಂಡು ಹಲವು ಪ್ರಕರಣಗಳನ್ನು ದಾಖಲಿಸಿ ಆರೋಪಿತರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೋಳ್ಳಲಾಗಿದೆ. ಜನವರಿ 2024 ರಿಂದ ಇಲ್ಲಿಯವರೆಗೆ 70 ಕ್ಕೂ ಹೆಚ್ಚು NDPS ಆಕ್ಟ್ ಪ್ರಕರಣಗಳನ್ನು ದಾಖಲಿಸಿದ್ದು, ಈ ಪ್ರಕರಣಗಳ ಅಡಿಯಲ್ಲಿ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಸಾಮಾಜಿಕ ಪಿಡುಗಾದ ಮಾದಕ ವಸ್ತುಗಳ ವ್ಯಸನದ ವಿರುದ್ಧ ನಿರಂತರ ಕಾರ್ಯಾಚರಣೆ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ತಮ್ಮ ತಮ್ಮ ಠಾಣಾ ಮಟ್ಟದಲ್ಲಿ ಶಾಲಾ ಕಾಲೇಜುಗಳಿಗೆ, ವಿದ್ಯಾರ್ಥಿ ವಸತಿ ಗೃಹಗಳಿಗೆ, ಸಂಘ ಸಂಸ್ಥೆಗಳಿಗೆ ಭೇಟಿ ನೀಡಿ ಕಾನೂನು ಬಾಹಿರವಾಗಿ ಮಾದಕ ವಸ್ತುಗಳ ಸೇವೆನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಅವುಗಳನ್ನು ಮಾರಾಟ ಮಾಡಿದರೆ ಕೈಗೊಳ್ಳುವ ಕಾನೂನು ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಸಾಮಾಜಿಕ ಪಿಡುಗಾದ ಮಾದಕ ವಸ್ತುಗಳ ಸೇವೆನೆ ಹಾಗೂ ಮಾರಾಟ ಮಾಡುವವರ ವಿರುದ್ದ ಪೊಲೀಸರ ನಿರಂತರ ಕಾರ್ಯಾಚರಣೆಯಲ್ಲಿ ಸಾರ್ವಜನಿಕರು ಕೈಜೋಡಿಸಬೇಕಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವೆನೆ ಮಾಡಬಾರದು, ತಮ್ಮ ನೆರೆಹೊರೆ, ತಮ್ಮ ಸುತ್ತಮುತ್ತ ಮಾದಕ ವಸ್ತುಗಳ ಸೇವನೆ ಮಾಡುವವರು ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಕಂಡು ಬಂದರೆ ಸ್ಥಳೀಯ ಪೊಲೀಸರ ಗಮನಕ್ಕೆ, ತುರ್ತು ಸಹಾಯವಾಣಿ 112 ಕರೆ ಮಾಡಿ ಮಾಹಿತಿ ನೀಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದವಿಜಯಕುಮಾರ ಎಂ ಸಂತೋಷ, ಜಿ, ಮಂಜುನಾಥ, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ ಬಿ ಎಸ್., ಪೊಲೀಸ್ ನಿರೀಕ್ಷಕಿ ಮಲ್ಲಮ್ಮ ಚೌಬೆ, ಪ್ರಭಾವತಿ ಶೇತಸನದಿ, ಪ್ರಸಾದ್, ಇಮ್ರಾನ್ ಬೇಗ್, ತೇಜಾವತಿ, ಪಿಎಸ್ ಐ ರವೀಂದ್ರ ಕಾಳ ಬೈರವ, ಮಾಳವ್ವ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.