ನವದೆಹಲಿ: ಭಾರತೀಯ ರಾಜಕೀಯ ಇತಿಹಾಸವನ್ನು ಹತ್ತಿರದಿಂದ ಕಂಡ ಮುಖಂಡರ ಆತ್ಮಕತೆಗಳು ಮತ್ತು ಕೃತಿಗಳು ದೇಶದ ರಾಜಕೀಯ ಬೆಳವಣಿಗೆಯ ಮೇಲೆ ಹೊಸ ಬೆಳಕು ಚೆಲ್ಲುತ್ತಿವೆ. ದೇಶ ವಿಭಜನೆ, ತುರ್ತು ಪರಿಸ್ಥಿತಿ , ಕಾಶ್ಮೀರ ಸಮಸ್ಯೆ ಹಾಗೂ ಪಕ್ಷಗಳ ಆಂತರಿಕ ರಾಜಕೀಯದ ಕುರಿತು ಭಾರತದ ಪ್ರಮುಖ ರಾಜಕೀಯ ಧುರೀಣರು ಬರೆದಿರುವ 7 ಪ್ರಮುಖ ಪುಸ್ತಕಗಳು ಓದುಗರ ಗಮನ ಸೆಳೆದಿವೆ.
ಇತ್ತೀಚೆಗೆ ಬಿಡುಗಡೆಯಾಗಿರುವ ಸೋನಿಯಾ ಗಾಂಧಿ ಅವರ ‘ಬೆಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಪುಸ್ತಕವು ಎಲ್ಲೆಡೆ ಭಾರಿ ಜನಪ್ರಿಯತೆ ಗಳಿಸಿದ್ದು, ಕೆಲವೇ ದಿನಗಳಲ್ಲಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಖಾಲಿಯಾಗಿದೆ.
ಈ ಕೃತಿಗಳು ಅಧಿಕಾರದ ರಾಜಕಾರಣ, ವೈಯಕ್ತಿಕ ನೋವುಗಳು, ದೇಶದ ಪ್ರಮುಖ ತಿರುವುಗಳು ಮತ್ತು ನಾಯಕರ ದೃಷ್ಟಿಕೋನವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತವೆ. ರಾಜಕೀಯ ಮುಖಂಡರ ಲೇಖನಿಯಿಂದ ಮೂಡಿಬಂದಿರುವ ಈ ಪುಸ್ತಕಗಳು ಭಾರತೀಯ ಗಣರಾಜ್ಯದ ವಿಭಿನ್ನ ಮುಖಗಳನ್ನು ಓದುಗರ ಮುಂದಿಡುತ್ತವೆ.
ಸೋನಿಯಾ ಗಾಂಧಿ ಆತ್ಮಕತೆ: ‘ಬೆಲಾಂಗಿಂಗ್: ಎ ಜರ್ನಿ ಆಫ್ ಲವ್’ ಕೃತಿಯು ಸೋನಿಯಾ ಗಾಂಧಿಯವರ ಇಟಲಿ ಬಾಲ್ಯದಿಂದ ಹಿಡಿದು ರಾಜೀವ್ ಗಾಂಧಿ ಅವರ ಭೇಟಿ, ಇಂದಿರಾ ಗಾಂಧಿ ಅವರೊಂದಿಗಿನ ಒಡನಾಟ ಹಾಗೂ ಭಾರತೀಯ ರಾಜಕೀಯದ ಐದು ದಶಕಗಳ ಪಯಣವನ್ನು ವಿವರಿಸುತ್ತದೆ.
ಎಲ್.ಕೆ. ಅಡ್ವಾಣಿ – ಮೈ ಕಂಟ್ರಿ, ಮೈ ಲೈಫ್: ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಅಡ್ವಾಣಿಯವರ ಈ ಪುಸ್ತಕವು ಸಿಂಧ್‌ನಿಂದ ಅವರ ವಲಸೆ, ತುರ್ತು ಪರಿಸ್ಥಿತಿ ಮತ್ತು ರಾಮ್ ರಥ ಯಾತ್ರೆಯಂತಹ ಐತಿಹಾಸಿಕ ಘಟನೆಗಳನ್ನು ದಾಖಲಿಸಿದೆ.
ಪಿ.ವಿ. ನರಸಿಂಹ ರಾವ್ – ದಿ ಇನ್ಸೈಡರ್: ಮಾಜಿ ಪ್ರಧಾನಿ ನರಸಿಂಹ ರಾವ್ ಅವರ ಈ ರಾಜಕೀಯ ಕಾದಂಬರಿಯು ವ್ಯವಸ್ಥೆಯನ್ನು ಬದಲಾಯಿಸಲು ಹೊರಟ ಯುವಕನೊಬ್ಬನ ರಾಜಕೀಯ ಅನುಭವಗಳು ಮತ್ತು ದೆಹಲಿಯ ಅಧಿಕಾರ ರಾಜಕಾರಣದ ತೆರೆಮರೆಯ ನೈಜತೆಯನ್ನು ಬಿಚ್ಚಿಡುತ್ತದೆ.
ಡಾ. ರಾಜೇಂದ್ರ ಪ್ರಸಾದ್ – ಇಂಡಿಯಾ ಡಿವೈಡೆಡ್: 1946ರಲ್ಲಿ ಜೈಲಿನಲ್ಲಿ ಬರೆಯಲ್ಪಟ್ಟ ಈ ಕೃತಿಯು ದೇಶ ವಿಭಜನೆ, ದ್ವಿ-ರಾಷ್ಟ್ರ ಸಿದ್ಧಾಂತ ಮತ್ತು ಸ್ವಾತಂತ್ರ್ಯ ಹೋರಾಟದ ಸಂದರ್ಭದ ಆತಂಕಗಳನ್ನು ದಾಖಲಿಸಿದೆ.
ಪ್ರಣಬ್ ಮುಖರ್ಜಿ ಅವರ ‘ದಿ ಡ್ರಾಮಾಟಿಕ್ ಡಿಕೇಡ್’, ಜಯಪ್ರಕಾಶ್ ನಾರಾಯಣ್ ಅವರ ‘ಪ್ರಿಸನ್ ಡೈರಿ’ ಮತ್ತು ಜಗಮೋಹನ್ ಅವರ ‘ಮೈ ಫ್ರೋಜನ್ ಟರ್ಬುಲೆನ್ಸ್ ಇನ್ ಕಾಶ್ಮೀರ’ ಕೃತಿಗಳು ಭಾರತದ ರಾಜಕೀಯ ಚರಿತ್ರೆಯ ಪ್ರಮುಖ ದಾಖಲೆಗಳಾಗಿವೆ.





Leave a comment