Home ಕ್ರೀಡೆ ಕ್ಷಣ ಕ್ಷಣಕ್ಕೂ ರೋಮಾಂಚನ.. ಎದೆಬಡಿತ ಢವಢವ… ಅಂಡರ್-19 ಏಷ್ಯಾಕಪ್ ಫೈನಲ್ ರೋಚಕ ಕ್ಷಣಗಳು: ಕೊನೆ ಓವರ್‌ನಲ್ಲಿ ಸಂಪ್ರಾದಾಯಿಕ ಎದುರಾಳಿ ಪಾಕ್ ಬಗ್ಗುಬಡಿದ ಯಂಗ್ ಟೀಂ ಇಂಡಿಯಾ!
ಕ್ರೀಡೆದಾವಣಗೆರೆನವದೆಹಲಿಬೆಂಗಳೂರು

ಕ್ಷಣ ಕ್ಷಣಕ್ಕೂ ರೋಮಾಂಚನ.. ಎದೆಬಡಿತ ಢವಢವ… ಅಂಡರ್-19 ಏಷ್ಯಾಕಪ್ ಫೈನಲ್ ರೋಚಕ ಕ್ಷಣಗಳು: ಕೊನೆ ಓವರ್‌ನಲ್ಲಿ ಸಂಪ್ರಾದಾಯಿಕ ಎದುರಾಳಿ ಪಾಕ್ ಬಗ್ಗುಬಡಿದ ಯಂಗ್ ಟೀಂ ಇಂಡಿಯಾ!

Share
ಏಷ್ಯಾಕಪ್
Share

ಅಲ್ ಅಮೆರತ್: ಅಂಡರ್-19 ಏಷ್ಯಾಕಪ್ ಟೂರ್ನಿಯ ರೋಚಕ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು ಕೊನೆಯ ಓವರ್‌ಗಳಲ್ಲಿ ಅದ್ಭುತ ಹೋರಾಟ ಪ್ರದರ್ಶಿಸಿತು.

ಕೇವಲ 8 ಎಸೆತಗಳಲ್ಲಿ ಗೆಲುವಿಗೆ ಬೇಕಿದ್ದ ರನ್‌ಗಳನ್ನು ಕಲೆಹಾಕುವಲ್ಲಿ ಮಧ್ಯಮ ಕ್ರಮದ ಬ್ಯಾಟರ್‌ಗಳ ಹೋರಾಟ ಸ್ಮರಣೀಯವಾಯಿತು. ಮನಾಲ್ ಚೌಹಾಣ್ (47 ರನ್) ಹಾಗೂ ಮೊಹಿತ್ ಉಲ್ವಾ ಅವರ ನಿರ್ಭೀತ ಬ್ಯಾಟಿಂಗ್ ಭಾರತವನ್ನು ಗೆಲುವಿನಂಚಿಗೆ ಕೊಂಡೊಯ್ದಿತು.

ಪಂದ್ಯದ ನಿರ್ಣಾಯಕ ಹಂತದಲ್ಲಿ ಮನಾಲ್ ಚೌಹಾಣ್ ಅವರ ಅಮೂಲ್ಯ ವಿಕೆಟ್ ಪತನಗೊಂಡರೂ, ಮೊಹಿತ್ ಉಲ್ವಾ ಒತ್ತಡವನ್ನು ಮೆಟ್ಟಿನಿಂತು ನಡೆಸಿದ ಕೌಂಟರ್-ಅಟ್ಯಾಕ್ ಪಂದ್ಯದ ದಿಕ್ಕನ್ನೇ ಬದಲಿಸಿತು. ಅಂತಿಮ ಓವರ್‌ನಲ್ಲಿ ಕೇವಲ 8 ರನ್‌ಗಳ ಅವಶ್ಯಕತೆಯಿದ್ದಾಗ ರೋಚಕತೆಮ್ ಮಡುಗಟ್ಟಿತ್ತು.

ಮೊಹಿತ್ ಉಲ್ವಾ ಸಂಚಲನ: ಕೇವಲ 22 ಎಸೆತಗಳಲ್ಲಿ 43 ರನ್‌ಗಳ ಬಿರುಸಿನ ಆಟವಾಡಿದ ಮೊಹಿತ್ ಉಲ್ವಾ, ಪಾಕ್ ಬೌಲರ್‌ಗಳ ಬೆವರಿಳಿಸಿ ತಂಡಕ್ಕೆ ಹೊಸ ಚೈತನ್ಯ ತುಂಬಿದರು.

ಮನಾಲ್ ಚೌಹಾಣ್ ಹೋರಾಟ: ಕಷ್ಟದ ಪರಿಸ್ಥಿತಿಯಲ್ಲಿ ಕ್ರೀಸ್ ಕಚ್ಚಿ ನಿಂತು 32 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿಗಳೊಡನೆ 47 ರನ್ ಸಿಡಿಸಿ ಅಮೂಲ್ಯ ಕೊಡುಗೆ ನೀಡಿದರು.

ಅಂತಿಮ ಓವರ್ ರೋಚಕತೆ: ಕೊನೆಯ 6 ಎಸೆತಗಳಲ್ಲಿ ಕೇವಲ 8 ರನ್‌ಗಳ ಗುರಿಯನ್ನು ತಲುಪಲು ಭಾರತ ತಂಡವು ನಡೆಸಿದ ಕೊನೆಯ ಕ್ಷಣದ ಹೋರಾಟ ಕ್ರಿಕೆಟ್ ಪ್ರೇಮಿಗಳ ರೋಮಾಂಚನಕ್ಕೆ ಕಾರಣವಾಯಿತು.

ಪಾಕ್ ಬೌಲಿಂಗ್‌ಗೆ ತಿರುಗೇಟು: ನಿಯಾಬ್ ಶಫೀಕ್ ಹಾಗೂ ಮೊಹಮ್ಮದ್ ಸಯ್ಯಾಮ್ ಅವರ ಓವರ್‌ಗಳಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಭಾರತ ಯುವ ಪಡೆ ಗೆಲುವಿನ ಕನಸಿಗೆ ಜೀವ ತುಂಬಿತು.

Share

Leave a comment

Leave a Reply

Your email address will not be published. Required fields are marked *

Related Articles