Home ಕ್ರೈಂ ನ್ಯೂಸ್ ಕೇವಲ 500 ರೂ. ಸಾಲದ ಹಣಕ್ಕಾಗಿ ಮಹಿಳೆ ಕೂದಲು ಹಿಡಿದು ಎಳೆದಾಡಿ ಹೊಡೆದು ಕೊಲೆ: 6 ಮಂದಿ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕೇವಲ 500 ರೂ. ಸಾಲದ ಹಣಕ್ಕಾಗಿ ಮಹಿಳೆ ಕೂದಲು ಹಿಡಿದು ಎಳೆದಾಡಿ ಹೊಡೆದು ಕೊಲೆ: 6 ಮಂದಿ ಬಂಧನ!

Share
ಸಾಲ
Share

ಪಶ್ಚಿಮ ಸಿಂಗ್ಭೂಮ್ (ಜಾರ್ಖಂಡ್‌): ಜಾರ್ಖಂಡ್‌ ರಾಜ್ಯದ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಕೇವಲ 500 ರೂಪಾಯಿ ಸಾಲದ ಹಣದ ವಿಚಾರವಾಗಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, 41 ವರ್ಷದ ಮಹಿಳೆಯೊಬ್ಬರನ್ನು ಕೂದಲು ಹಿಡಿದು ಎಳೆದಾಡಿ ದೊಣ್ಣೆಗಳಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 6 ಜನ ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಮೃತ ಮಹಿಳೆ ಜಿಂಗಿ ಬಂಕಿರಾ ಎಂಬುವವರು, ಸಾಲ ಪಡೆದಿದ್ದ ವ್ಯಕ್ತಿ ಮೃತಪಟ್ಟಿದ್ದರೂ ತಮಗೆ ಬರಬೇಕಿದ್ದ 500 ರೂ. ಹಣವನ್ನು ಕೇಳಲು ಹೋಗಿದ್ದ ವೇಳೆ ಈ ದುರಂತ ಸಂಭವಿಸಿದೆ. ಸೋನುವಾ ಪೊಲೀಸ್ ಠಾಣಾ ವ್ಯಾಪ್ತಿಯ ಹದಿಮಾರಾ ಗ್ರಾಮದಲ್ಲಿ ನವೆಂಬರ್ 11 ರಂದು ಮಧ್ಯರಾತ್ರಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದ ವಿಧಿ-ವಿಧಾನಗಳ ಬಳಿಕ ಕುಳಿತಿದ್ದ ಗುಂಪಿನ ಬಳಿಗೆ ತೆರಳಿ ಹಣದ ವಿಚಾರವಾಗಿ ಜಗಳವಾಡಿದ ಮಹಿಳೆಯನ್ನು ಆರೋಪಿಗಳು ಬೆನ್ನಟ್ಟಿ ಬರ್ಬರವಾಗಿ ಹಲ್ಲೆ ನಡೆಸಿದ್ದಾರೆ.

500 ರೂ. ಸಾಲದ ಗಲಾಟೆ: ಮೃತ ಪಾಂಡು ಗೋಪೆ ಎಂಬಾತ ತನಗೆ ನೀಡಬೇಕಿದ್ದ 500 ರೂ. ಹಣ ವಾಪಸ್ ನೀಡದೆ ಸಾವನ್ನಪ್ಪಿದ್ದರಿಂದ ಆಕ್ರೋಶಗೊಂಡ ಜಿಂಗಿ ಬಂಕಿರಾ ಹಣ ಕೇಳಲು ತೆರಳಿದ್ದೇ ಈ ವಾಗ್ವಾದಕ್ಕೆ ಕಾರಣ.

ಕೂದಲು ಹಿಡಿದು ಎಳೆದಾಡಿ ಹಲ್ಲೆ: ಮನೆ ಹಿಂದೆ ಅಡಗಿಕೊಂಡಿದ್ದ ಮಹಿಳೆಯನ್ನು ಬೆನ್ನಟ್ಟಿಕೊಂಡು ಹೋದ ಆರೋಪಿಗಳು, ಕೂದಲು ಹಿಡಿದು ರಸ್ತೆಗೆ ಎಳೆದಾಡಿ ದೊಣ್ಣೆಗಳು ಹಾಗೂ ಮುಷ್ಟಿಯಿಂದ ಮನಬಂದಂತೆ ಥಳಿಸಿದ್ದಾರೆ.

ತಲೆಗೆ ಬಲವಾದ ಪೆಟ್ಟು: ಪ್ರಮುಖ ಆರೋಪಿ ಕೃಷ್ಣ ಗೋಪೆ ಎಂಬಾತ ಕೆಳಗೆ ಬಿದ್ದಿದ್ದ ಮಹಿಳೆಯ ತಲೆಗೆ ದೊಣ್ಣೆಯಿಂದ 6 ರಿಂದ 7 ಬಾರಿ ಬಲವಾಗಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

6 ಮಂದಿ ಆರೋಪಿಗಳ ಬಂಧನ: ಮೃತರ ಮಗ ಪ್ರೇಮ್ ಸಿಂಗ್ ಬಂಕಿರಾ ನೀಡಿದ ದೂರಿನ ಮೇರೆಗೆ ಪೊಲೀಸರು ವಿಶೇಷ ತಂಡ ರಚಿಸಿ ಸೂರಜ್ ಗೋಪೆ, ರಘು ಗೋಪೆ, ಗೋಕುಲ್ ಗೋಪೆ, ರೀನಾ ಗೋಪೆ, ಮಧು ಗೋಪೆ ಹಾಗೂ ಕೃಷ್ಣ ಗೋಪೆ ಎಂಬುವವರನ್ನು ಬಂಧಿಸಿದ್ದಾರೆ. ಅಲ್ಲದೆ ರಕ್ತಸಿಕ್ತ ದೊಣ್ಣೆಗಳು ಹಾಗೂ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles