SUDDIKSHANA KANNADA NEWS/ DAVANAGERE/ DATE: 31-01-2024
ದಾವಣಗೆರೆ: ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯಲ್ಲಿ ಈ ಬಾರಿ ಸರಳವಾಗಿ ತರಳಬಾಳು ಹುಣ್ಣಿಮೆ ಮಹೋತ್ಸವ -2024 ನಡೆಯಲಿದೆ. ಈ ವರ್ಷ ಭೀಕರ ಬರಗಾಲ ತಲೆದೋರಿರುವ ಕಾರಣ ಸಿರಿಗೆರೆ ಶ್ರೀ ಶಿವಕುಮಾರ ಶಿವಾಚಾರ್ಯ
ಸ್ವಾಮೀಜಿ ನಿರ್ಧರಿಸಿದ್ದಾರೆ.
ಕಳೆದ ವರ್ಷ ಅಂದರೆ 2023ರ ಫೆಬ್ರವರಿ ತಿಂಗಳಿನಲ್ಲಿ ವಿಜಯನಗರ ಜಿಲ್ಲೆ ಕೊಟ್ಟೂರಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತ್ತು. ಆಗ ಭರಮಸಾಗರದಲ್ಲಿ 2024ರಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ
ಆಯೋಜನೆ ಮಾಡುವುದಾಗಿ ಘೋಷಿಸಲಾಗಿತ್ತು. 2024ರಲ್ಲಿ ಮಹೋತ್ಸವ ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತಾದರೂ ಬರ ಬಂದ ಕಾರಣಕ್ಕೆ ಈ ವರ್ಷ ಮುಂದೂಡಲಾಗಿದೆ. ಆದ್ರೆ, ಮಠದಲ್ಲಿ ಸರಳ,
ಸಾಂಪ್ರಾದಾಯಿಕವಾಗಿ ಮಾತ್ರ ಆಚರಣೆ ನಡೆಯಲಿದೆ.
ಸರಳ ಸಾಂಪ್ರದಾಯಿಕ ಹುಣ್ಣಿಮೆ ಮಹೋತ್ಸವದಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ಫೆಬ್ರವರಿ 22 ರಿಂದ 24 ರವರೆಗೆ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯಲಿದ್ದು, ವಿಶ್ವಬಂಧು ಮರುಳಸಿದ್ದ ನಾಟಕ ಪ್ರದರ್ಶನ, ವಿಜ್ಞಾನ ಮೇಳ, ಕ್ರೀಡಾಮೇಳ, ಯುವ ಗೋಷ್ಠಿ, ಮಹಿಳಾ ಗೋಷ್ಠಿ, ಮರುಳಸಿದ್ದ ಕಾವ್ಯ ಮತ್ತು ಮರುಳಸಿದ್ದಾಂಕ ವಿಮರ್ಶೆ ಕೃತಿ ಲೋಕಾರ್ಪಣೆ ಜರುಗಲಿವೆ.
ಫೆ. 24 ರಂದು ಶ್ರೀ ತರಳಬಾಳು ಜಗದ್ಗುರುಗಳವರಿಂದ ಸದ್ಧರ್ಮ ಸಿಂಹಾನಾರೋಹಣ ನೆರವೇರಲಿದೆ. ವೈಭವದಿ ಭರಮಸಾಗರದಲ್ಲಿ ನಡೆಯಬೇಕಾಗಿದ್ದ ವಿದ್ವತ್ಪೂರ್ಣ ತರಳಬಾಳು ಹುಣ್ಣಿಮೆ ಈ ವರ್ಷ ಮಳೆ ಕುಂಠಿತ ಕಾರಣ ಸರಳವಾಗಿ ಸಿರಿಗೆರೆಯಲ್ಲಿ ಆಚರಣೆ ನಡೆಸಲಾಗುತ್ತಿದೆ.
ಹುಣ್ಣಿಮೆ ಮಹೋತ್ಸವದ ಅಂಗವಾಗಿ ಈ ಬಾರಿ ಗ್ರಾಮೀಣ ಯುವ ಕ್ರೀಡಾ ಮೇಳ, ಯುವ ಗೋಷ್ಠಿ, ಮಹಿಳಾ ಗೋಷ್ಠಿ, ತರಳಬಾಳು ವಿಜ್ಞಾನ ಮೇಳ ಮತ್ತು ಹಲವು ಸಾಹಿತ್ಯಕ ಕೃತಿಗಳ ಲೋಕಾರ್ಪಣೆ ನಡೆಯಲಿವೆ.