Home ಕ್ರೈಂ ನ್ಯೂಸ್ ಪ್ರತಾಪ್ ಸಿಂಹ ವಿರುದ್ಧ ಚಪ್ಪಲಿ ಮತ್ತು ಮೊಟ್ಟೆ ಎಸೆಯುವ ಬೆದರಿಕೆ: ಸಚಿವ ಜಮೀರ್ ಅಹ್ಮದ್ ಆಪ್ತ ಇಮ್ರಾನ್ ಪಾಷಾ ಬಂಧನಕ್ಕೆ ಆಗ್ರಹ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪ್ರತಾಪ್ ಸಿಂಹ ವಿರುದ್ಧ ಚಪ್ಪಲಿ ಮತ್ತು ಮೊಟ್ಟೆ ಎಸೆಯುವ ಬೆದರಿಕೆ: ಸಚಿವ ಜಮೀರ್ ಅಹ್ಮದ್ ಆಪ್ತ ಇಮ್ರಾನ್ ಪಾಷಾ ಬಂಧನಕ್ಕೆ ಆಗ್ರಹ!

Share
ಪ್ರತಾಪ್ ಸಿಂಹ
Share

ಮೈಸೂರು / ಬೆಂಗಳೂರು: ಟಿ.ನರಸೀಪುರದಲ್ಲಿ ಗಣೇಶೋತ್ಸವ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಮಸೀದಿ ಮುಂದೆ ಮೆರವಣಿಗೆ ಮತ್ತು ಪಟಾಕಿ ಸಿಡಿಸುವುದಕ್ಕೆ ಸಂಬಂಧಿಸಿದಂತೆ ಟಿ.ನರಸೀಪುರ ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ್ ಅವರು ನೀಡಿದ್ದರೆನ್ನಲಾದ ಹೇಳಿಕೆ ಹಾಗೂ ಬೆದರಿಕೆ ಕನ್ನಡಿಗರ ಮತ್ತು ಧಾರ್ಮಿಕ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ಸ್‌ಪೆಕ್ಟರ್ ಹೇಳಿಕೆಯನ್ನು ಖಂಡಿಸಿ ಹಾಗೂ ಹಿಂದೂ ಕಾರ್ಯಕರ್ತರ ಬೆಂಬಲಕ್ಕೆ ನಿಂತ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, “ಪೊಲೀಸ್ ಅಧಿಕಾರಿಯ ವರ್ತನೆ ಸರಿಯಲ್ಲ, ಹೀಗೆಯೇ ಮುಂದುವರಿದರೆ ಠಾಣೆಗೆ ಮುತ್ತಿಗೆ ಹಾಕಲಾಗುವುದು” ಎಂದು ಎಚ್ಚರಿಕೆ ನೀಡಿದ್ದರು.

ಈ ಬೆನ್ನಲ್ಲೇ ಬೆಂಗಳೂರಿನಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಹಾಗೂ ಮಾಜಿ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರು ಸಾರ್ವಜನಿಕ ವೇದಿಕೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ಚಪ್ಪಲಿ ಮತ್ತು ಮೊಟ್ಟೆ ಎಸೆಯುವ ಬೆದರಿಕೆ ಹಾಕಿದ್ದಾರೆ. ಈ ಘಟನೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ವಿಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಇನ್ಸ್‌ಪೆಕ್ಟರ್ ಧನಂಜಯ್ ಅಮಾನತಿಗೆ ಹಾಗೂ ಇಮ್ರಾನ್ ಪಾಷಾ ವಿರುದ್ಧ ಕಠಿಣ ಕಾನೂನು ಕ್ರಮ ಮತ್ತು ಎಫ್‌ಐಆರ್ (FIR) ದಾಖಲಿಸಲು ಆಗ್ರಹಿಸಿವೆ. ಮಾತ್ರವಲ್ಲ, ಪ್ರತಾಪ್ ಸಿಂಹ ಬೆಂಬಲಕ್ಕೆ ಅವರ ಅಭಿಮಾನಿಗಳು ನಿಂತಿದ್ದಾರೆ.

ಟಿ.ನರಸೀಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಧನಂಜಯ್ “ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗುವಂತಿಲ್ಲ, ಮಸೀದಿ ಮುಂದೆ ಪಟಾಕಿ ಸಿಡಿಸಿದರೆ ಗ್ರಹಚಾರ ಬಿಡಿಸುತ್ತೇನೆ” ಎಂದು ಹಿಂದೂಗಳಿಗೇ ಬೆದರಿಕೆ ಹಾಕಿದ್ದರು.ಇದು ಭಾರತವೋ? ಪಾಕಿಸ್ತಾನವೋ? ಮಸೀದಿ ಮುಂದೆ ಗಣೇಶ ಹೋಗಬಾರದು ಎಂದು ಹೇಳಲು ಇನ್ಸ್‌ಪೆಕ್ಟರ್ ಯಾರು? ರಸ್ತೆ ಅವರ ಅಪ್ಪನ ಆಸ್ತಿಯೇ? ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದು ನಮ್ಮ ಮೈಸೂರಿನ ಪ್ರತಾಪ್ ಸಿಂಹ. “ಇನ್ಸ್‌ಪೆಕ್ಟರ್ ರೋಡ್ ಸೈಡ್ ತರ್ಲೆ ರೀತಿ ಮಾತನಾಡಿದ್ದಾರೆ, ಇದು ಸರಿಯಲ್ಲ, ಮತ್ತೆ ಹಾಗೆ ಮಾತನಾಡಿದರೆ ಠಾಣೆಗೆ ನುಗ್ಗುತ್ತೇನೆ” ಎಂದು ಹಿಂದೂಗಳ ಪರ ನಿಂತಿದ್ದರು.

ಇಮ್ರಾನ್ ಪಾಷಾ ಬಹಿರಂಗ ವೇದಿಕೆಯಲ್ಲಿ ಮೊಟ್ಟೆ, ಚಪ್ಪಲಿ, ಸ್ಮಶಾನ ಎಂದು ಮಾತನಾಡುತ್ತಿದ್ದರೆ ನೀವು ಸುಮ್ಮನೆ ಇರುತ್ತೀರಾ? ಇದು ನಿಮ್ಮ ಸಂಸ್ಕೃತಿಯೇ? ಇದೇ ನಿಮ್ಮ ಕಾಂಗ್ರೆಸ್‌ನ ಗ್ಯಾರಂಟಿಯೇ? ಪ್ರತಾಪ್ ಸಿಂಹ ಒಬ್ಬಂಟಿ ಅಲ್ಲ! ಮೈಸೂರಿನ ಪ್ರತಿಯೊಬ್ಬ ಹಿಂದೂ ಅವರ ಜೊತೆ ಇದ್ದಾನೆ! ಕೂದಲು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುವ ನಿಮಗೆ, ಗಣೇಶನ ಭಕ್ತರ ಶಕ್ತಿ ಏನೆಂದು ಗೊತ್ತಿಲ್ಲ! ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು – ಇನ್ಸ್‌ಪೆಕ್ಟರ್ ಧನಂಜಯ್ ಅವರನ್ನು ತಕ್ಷಣ ಅಮಾನತು ಮಾಡಬೇಕು, ಬಹಿರಂಗ ಬೆದರಿಕೆ ಹಾಕಿದ ಇಮ್ರಾನ್ ಪಾಷಾ ಮೇಲೆ FIR ಹಾಕಿ ಬಂಧಿಸಬೇಕು! ಹಿಂದೂಗಳು ಪಟಾಕಿ ಹೊಡೆಯುವುದು ಅಪರಾಧವಲ್ಲ, ಗಣೇಶನನ್ನು ಮೆರವಣಿಗೆ ಮಾಡುವುದು ತಪ್ಪಲ್ಲ! ಇದು ನಮ್ಮ ದೇಶ, ನಮ್ಮ ಧರ್ಮ!
ಪ್ರತಾಪ್ ಸಿಂಹ ಅವರಿಗೆ ನಾವು ಇದ್ದೇವೆ! ಎಂಬ ಪೋಸ್ಟರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Share

Leave a comment

Leave a Reply

Your email address will not be published. Required fields are marked *