SUDDIKSHANA KANNADA NEWS/ DAVANAGERE/ DATE:25-10-2023
ಬೆಂಗಳೂರು: ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿರುವ ಸಿಎಂ ಸಿದ್ದರಾಮಯ್ಯ (Siddaramaiah) ಅವರು ನನಗೆ ರಾಜಕೀಯ ವಿಲನ್ ಅಂದರೆ ಮಿಸ್ಟರ್ ಕುಮಾರಸ್ವಾಮಿ ಎಂದು ಲೇವಡಿ ಮಾಡಿದರು.
Read Also This Story:
ಹುಲಿ ಉಗುರು ಸೆಲೆಬ್ರಿಟಿಗಳಿಗೆ ತಂದ ಸಂಕಷ್ಟ: ಪ್ರಭಾವಿಗಳ ಬಿಡುವ ಪ್ರಶ್ನೆಯೇ ಇಲ್ಲ ಎಂದ ಈಶ್ವರ್ ಖಂಡ್ರೆ, ವರ್ತೂರಿನಲ್ಲಿ ಸಂತೋಷ್ ಪರ ಪ್ರೊಟೆಸ್ಟ್
ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಾಯಿಗೆ ಬಂದ ರೀತಿಯಲ್ಲಿ ಕುಮಾರಸ್ವಾಮಿ ಮಾತನಾಡುತ್ತಾರೆ. ರಾಜಕೀಯವಾಗಿ ಹತಾಶರಾಗಿದ್ದಾರೆ. ಅಧಿಕಾರ ಕಳೆದುಕೊಂಡ ಮೇಲೆ ಇದು ಹೆಚ್ಚಾಗಿದೆ. ನಾನು ಬಿಜೆಪಿಗೆ ಸೇರಲು ಹೋಗಿದ್ದೆ ಎನ್ನುವ ಕುಮಾರಸ್ವಾಮಿ ತಲೆಯಲ್ಲಿ ಏನಿದೆ? ರಾಜ್ಯ ಸರ್ಕಾರ ಬಿದ್ದೋಗುತ್ತೆ ಅನ್ನುವ ಅವರನ್ನು ಏನಂತ ಕರೆಯಬೇಕು. ಇಡೀ ಒಂದು ವರ್ಷ ಎರಡು ತಿಂಗಳು ತಾಜ್ ವೆಸ್ಟೆಂಡ್ ಹೊಟೇಲ್ ನಲ್ಲಿ ಕಾಲ ಕಳೆದಿದ್ದು. ಇದು ನಮಗೆ ಹೇಳಿಕೊಡಬೇಕು ಇದನ್ನಾ. ಸರ್ಕಾರದ ಬಿದ್ದು ಹೋದ ಮೇಲೆ ಉತ್ತರ ಯಾವ ರೀತಿ ಕೊಟ್ಟರು. ಕಾಂಗ್ರೆಸ್ ಮತ ಪಡೆಯಲು ಭಾಷಣ ಮಾಡಿದ್ರು. ಸರ್ಕಾರ ಬೀಳಿಸಿದವರು ಬಿಜೆಪಿಯವರು. ಕಾಂಗ್ರೆಸ್ ನವರಲ್ಲ. ಇದು ರೆಕಾರ್ಡ್ ಆಗಿದೆ. ವಿಧಾನಸಭೆ ದಾಖಲಾತಿಗಳಲ್ಲಿ ಇರುವುದು. ಬೇಕಾದರೆ ಬಿಡುಗಡೆ ಮಾಡ್ತೇನೆ ಎಂದು ಸವಾಲು ಹಾಕಿದರು.
ತನ್ನ ಸರ್ಕಾರ ಬಿದ್ದು ಹೋಗುತ್ತೆ ಎಂದಾಗ ಕುಮಾರಸ್ವಾಮಿ ಅಮೆರಿಕಾದಲ್ಲಿದ್ದರು. ಹೊಟೇಲ್ ನಲ್ಲಿ ಶಾಸಕರ ಜೊತೆ ಕುಳಿತಿದ್ದರು. ಸಚಿವರ ಜೊತೆ ಸರಿಯಾದ ರೀತಿ ವರ್ತನೆ ಮಾಡಲಿಲ್ಲ. ನೀನು ಕೇಳಿದ್ದೀಯಾ, ಕುಮಾರಸ್ವಾಮಿಗೆ ಕೇಳಪ್ಪಾ.
ಸತ್ಯ ಏನು ಎಂಬುದನ್ನು ಕುಮಾರಸ್ವಾಮಿ ಅವರನ್ನೇ ಕೇಳಿ. ಅಸೆಂಬ್ಲಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಸರ್ಕಾರ ಬಿದ್ದೋಗುವ ಸಮಯದಲ್ಲಿ ಸರ್ಕಾರ ಬೀಳಿಸಲು ಕಾರಣಕರ್ತರು ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಬೇರೆ ರೀತಿಯಲ್ಲಿ
ಹೇಳಿದರೆ ಹೆಂಗಪ್ಪಾ. ಅಸೆಂಬ್ಲಿಯನ್ನು ತಪ್ಪು ದಾರಿಗೆ ಎಳೆದಿದ್ದಾರೆ ಎಂಬುದು ಆಗುತ್ತದೆ ಅಲ್ವಾ. ಇದನ್ನೆಲ್ಲಾ ಮಾಧ್ಯಮದವರು ಕೇಳಬೇಕು ಎಂದು ಹೇಳಿದರು.
ಬಿಜೆಪಿಯವರಿಗಿಂತ ಕುಮಾರಸ್ವಾಮಿಯವರೇ ಹೆಚ್ಚು ಮಾತನಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ರಾಜಕೀಯವಾಗಿ ಹತಾಶರಾಗಿದ್ದಾರೆ. ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಬಿಜೆಪಿಯವರಿಗಿಂತ ಹೆಚ್ಚು ಹತಾಶರಾಗಿರುವುದು ಕುಮಾರಸ್ವಾಮಿ ಅವರು. ಕೆಲವರು ಕುರುಡರು, ಎಳವರ ರೀತಿ ಆಗಿದೆ. ಇವರ ಮೇಲೆ ಅವರು ಅವಲಂಬಿತ, ಅವರ ಮೇಲೆ ಇವರೂ ಅವಲಂಬಿತರಾಗಿದ್ದಾರೆ ಎಂದರು.