Home ಕ್ರೈಂ ನ್ಯೂಸ್ SHOCKING NEWS: ಇಟ್ಟಿಗೆಯಿಂದ ಜಜ್ಜಿ ಪತ್ನಿ, ಮೂವರು ಹೆಣ್ಣುಮಕ್ಕಳ ಹತ್ಯೆ ಮಾಡಿ ಆರೋಪಿ ಪರಾರಿ: ಬೆಳಕಿಗೆ ಬಂದಿದ್ದೇಗೆ?
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

SHOCKING NEWS: ಇಟ್ಟಿಗೆಯಿಂದ ಜಜ್ಜಿ ಪತ್ನಿ, ಮೂವರು ಹೆಣ್ಣುಮಕ್ಕಳ ಹತ್ಯೆ ಮಾಡಿ ಆರೋಪಿ ಪರಾರಿ: ಬೆಳಕಿಗೆ ಬಂದಿದ್ದೇಗೆ?

Share
ಪತ್ನಿ
Share

ಜೈಪುರ: ರಾಜಸ್ಥಾನದ ಜೈಪುರದಲ್ಲಿ ಕರುಳು ಚುರುಕ್ ಎನ್ನುವಂತಹ ಅತ್ಯಂತ ಭೀಕರ ಹಾಗೂ ದುರಂತ ಘಟನೆಯೊಂದು ನಡೆದಿದೆ. ಕುಟುಂಬ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ನಿದ್ದೆಯಲ್ಲಿದ್ದ ತನ್ನ ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳ ತಲೆಗೆ ಇಟ್ಟಿಗೆಯಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಘಟನೆಯಲ್ಲಿ 40 ವರ್ಷದ ಗೀತಾ ಝಾ ಹಾಗೂ ಅವರ ಪುತ್ರಿಯರಾದ ನಂದಿನಿ, ಗಿರಿಶಾ ಮತ್ತು ರಾಧಿಕಾ (17 ರಿಂದ 23 ವರ್ಷ ವಯಸ್ಸಿನವರು) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಭೀಕರ ಕೃತ್ಯ ಎಸಗಿದ ಆರೋಪಿ ರಾಹುಲ್ ಝಾ ಪ್ರಸ್ತುತ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ.

ಘಟನೆ ಬೆಳಕಿಗೆ ಬಂದಿದ್ದು ಹೇಗೆ?

ಜೈಪುರದ ಗೋವಿಂದಪುರದಲ್ಲಿರುವ ನಿವಾಸದಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆಯಾದರೂ ಮನೆಯಲ್ಲಿ ಯಾವುದೇ ಚಟುವಟಿಕೆ ಇಲ್ಲದಿರುವುದನ್ನು ಕಂಡು ನೆರೆಹೊರೆಯವರು ಹಾಗೂ ಸಂಬಂಧಿಕರಿಗೆ ಅನುಮಾನ ಬಂದಿದೆ. ಬಳಿಕ ಪರಿಶೀಲಿಸಿದಾಗ ನಾಲ್ವರೂ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ.

ಘಟನೆ ನಡೆದ ಸಮಯದಲ್ಲಿ ಆರೋಪಿಯ 85 ವರ್ಷದ ವೃದ್ಧ ತಂದೆ ಮನೆಯಲ್ಲಿದ್ದರು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪಶ್ಚಿಮ ವಿಭಾಗದ ಡಿಸಿಪಿ ಪ್ರಶಾಂತ್ ಕಿರಣ್ ನೇತೃತ್ವದ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯ (FSL) ತಂಡ ಮತ್ತು ಶ್ವಾನ ದಳದೊಂದಿಗೆ ಪರಿಶೀಲನೆ ನಡೆಸಿದ್ದಾರೆ. ಕೃತ್ಯಕ್ಕೆ ಬಳಸಲಾದ ರಕ್ತಸಿಕ್ತ ಇಟ್ಟಿಗೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸ್ ತನಿಖೆ ತೀವ್ರ:

ಪ್ರಾಥಮಿಕ ತನಿಖೆಯ ಪ್ರಕಾರ ಕುಟುಂಬ ಕಲಹವೇ ಈ ಭೀಕರ ಹತ್ಯೆಗೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ರಾಹುಲ್ ಝಾ ಬಂಧನಕ್ಕಾಗಿ ವಿಶೇಷ ಪಡೆಗಳನ್ನು ರಚಿಸಿದ್ದು, ನಗರದ ಗಡಿಭಾಗಗಳಲ್ಲಿ ತಪಾಸಣೆ ತೀವ್ರಗೊಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles