Home ನವದೆಹಲಿ ಶಾಲೆಯಲ್ಲೇ ಶಿಕ್ಷಕನ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ: ಮನನೊಂದು 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ, ಪಾಪಿ ಶಿಕ್ಷಕ ಬಂಧನ!
ನವದೆಹಲಿಕ್ರೈಂ ನ್ಯೂಸ್ಬೆಂಗಳೂರು

ಶಾಲೆಯಲ್ಲೇ ಶಿಕ್ಷಕನ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ: ಮನನೊಂದು 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ, ಪಾಪಿ ಶಿಕ್ಷಕ ಬಂಧನ!

Share
ಶಾಲೆ
Share

ಚೆನ್ನೈ: ತಮಿಳುನಾಡಿನ ಕಳ್ಳಕುರಿಚಿ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರವೇ ತಲೆತಗ್ಗಿಸುವಂತಹ ಭೀಕರ ಹಾಗೂ ಅಮಾನವೀಯ ಘಟನೆಯೊಂದು ನಡೆದಿದೆ. ವಿದ್ಯೆ ಕ ಕಲಿಸಬೇಕಾದ ಶಾಲಾ ಶಿಕ್ಷಕನೋರ್ವ ನೀಚ ಬುದ್ಧಿ ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಮನನೊಂದು, 10ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈ ಶೋಚನೀಯ ಘಟನೆಗೆ ಸಂಬಂಧಿಸಿದಂತೆ ಕೃತ್ಯ ಎಸಗಿದ ಆರೋಪಿ ಶಿಕ್ಷಕ ಜಗದೀಶನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO) ಅಡಿಯಲ್ಲಿ ಕಠಿಣ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆ ಹಾಗೂ ಪೊಲೀಸ್ ತನಿಖೆ:

ಕಳ್ಳಕುರಿಚಿ ಜಿಲ್ಲೆಯ ಶಾಲೆಯೊಂದರಲ್ಲಿ ಈ ದುರಂತ ಸಂಭವಿಸಿದೆ. ಆರೋಪಿ ಶಿಕ್ಷಕ ಜಗದೀಶನ್ ಶಾಲಾ ಅವರಣದಲ್ಲೇ ಬಾಲಕಿಗೆ ಪದೇ ಪದೇ ಅಸಭ್ಯವಾಗಿ ಸ್ಪರ್ಶಿಸುತ್ತಾ (Bad Touch) ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಶಿಕ್ಷಕನ ಈ ಕಿರುಕುಳದಿಂದೀವ ತೀವ್ರ ಮಾನಸಿಕ ವ್ಯಥೆಗೊಳಗಾಗಿದ್ದ ಬಾಲಕಿ, ಕೊನೆಗೆ ಬೇರೆ ದಾರಿ ಕಾಣದೆ ತನ್ನ ಮನೆಯಲ್ಲೇ ಜೀವ ಕಳೆದುಕೊಂಡಿದ್ದಾಳೆ.

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಆರೋಪಿ ಶಿಕ್ಷಕ ಜಗದೀಶನ್ ಬಾಲಕಿಗೆ ಅನುಚಿತವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಸಂಪೂರ್ಣವಾಗಿ ದೃಢಪಟ್ಟಿದೆ. ಹೀಗಾಗಿ ಆತನನ್ನು ತಕ್ಷಣವೇ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ” ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ತೀವ್ರ ರಾಜಕೀಯ ಆಕ್ರೋಶ:

ಈ ದುರಂತ ಘಟನೆಯು ತಮಿಳುನಾಡು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಕೊಲೆ ಹಾಗೂ ಲೈಂಗಿಕ ಅಪರಾಧಗಳು ಹೆಚ್ಚಾಗುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಸರ್ಕಾರವನ್ನು ತೀವ್ರವಾಗಿ ತೊಳೆಯುತ್ತಿದ್ದಾರೆ.

ಇದಕ್ಕೆ ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ವಿಜಯ್ ಅವರು, “ನಡೆಯುವ ಪ್ರತಿಯೊಂದು ಅಪರಾಧವನ್ನೂ ಕಾನೂನು-ಸುವ್ಯವಸ್ಥೆಯ ವೈಫಲ್ಯ ಎಂದು ಕರೆಯಲು ಸಾಧ್ಯವಿಲ್ಲ. ನಮ್ಮ ಸರ್ಕಾರದ ಮುಖ್ಯ ಆದ್ಯತೆ ಅಪರಾಧಗಳನ್ನು ತಡೆಯುವುದು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.

ಪ್ರಸ್ತುತ ಕಳ್ಳಕುರಿಚಿ ಪೊಲೀಸರು ವಿದ್ಯಾರ್ಥಿನಿಯ ಸಾವಿನ ಹಿಂದಿರುವ ಪೂರ್ಣ ಸಂದರ್ಭಗಳು, ಶಾಲಾ ಮಂಡಳಿಯ ಪಾತ್ರ ಹಾಗೂ ಶಿಕ್ಷಕನ ಮೇಲಿರುವ ದೂರುಗಳ ಕುರಿತು ಸಮಗ್ರ ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles