Home ಕ್ರೈಂ ನ್ಯೂಸ್ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ದೇಹ 9 ತುಂಡು ಪತ್ತೆ ಕೇಸ್ ಗೆ ಟ್ವಿಸ್ಟ್: ಪತ್ನಿ, ಮಗ ನಾಪತ್ತೆ, ಭಾರತಕ್ಕೆ ಬಂದಿದ್ದರಾ ಹಂತಕರು?
ಕ್ರೈಂ ನ್ಯೂಸ್ಬೆಂಗಳೂರು

ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ದೇಹ 9 ತುಂಡು ಪತ್ತೆ ಕೇಸ್ ಗೆ ಟ್ವಿಸ್ಟ್: ಪತ್ನಿ, ಮಗ ನಾಪತ್ತೆ, ಭಾರತಕ್ಕೆ ಬಂದಿದ್ದರಾ ಹಂತಕರು?

Share
ಉಡುಪಿ
Share

ಶಾರ್ಜಾ / ಉಡುಪಿ: ಯುಎಇಯ ಶಾರ್ಜಾದಲ್ಲಿ ಕೆಲಸ ಮಾಡುತ್ತಿದ್ದ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಎಂಬವರನ್ನು ಭೀಕರವಾಗಿ ಕೊಲೆ ಮಾಡಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಮೃತರ ದೇಹವನ್ನು 9 ತುಂಡುಗಳಾಗಿ ಕತ್ತರಿಸಿ, ಎರಡು ಬ್ಯಾಗ್‌ನಲ್ಲಿ ತುಂಬಿ ಓಮನ್ ಮಾರ್ಗದ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಕಾರಿನ ಡಿಕ್ಕಿಯಲ್ಲಿ ಇಡಲಾಗಿತ್ತು. ಪ್ರಕಾಶ್ ಕಳೆದ ಸುಮಾರು 20 ವರ್ಷಗಳಿಂದ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು.

ಸಂದೇಹ ಹುಟ್ಟಿಸಿದ ವಾಯ್ಸ್ ನೋಟ್ ಬದಲು ಬಂದ ಟೆಕ್ಸ್ಟ್ ಮೆಸೇಜ್:

ಜುಲೈ 20ರ ಸುಮಾರಿಗೆ ಪ್ರಕಾಶ್ ಅವರ ಸಹೋದರ ಅನಿಲ್ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ. ಬದಲಾಗಿ, “ನಾನು ಚೆನ್ನಾಗಿದ್ದೇನೆ, ವಿಶ್ರಾಂತಿ ಪಡೆಯುತ್ತಿದ್ದೇನೆ” ಎಂಬ ಪಠ್ಯ ಸಂದೇಶ ಬಂದಿತ್ತು. ಪ್ರಕಾಶ್ ಸಾಮಾನ್ಯ ದಿನಗಳಲ್ಲಿ ಯಾವಾಗಲೂ ವಾಯ್ಸ್ ಮೆಸೇಜ್ ಕಳುಹಿಸುತ್ತಿದ್ದ ಕಾರಣ ಕುಟುಂಬದವರಿಗೆ ಅನುಮಾನ ಮೂಡಿತು. ಮರುಕಳಿಸಿ ಕರೆ ಮಾಡಿದರೂ ಸ್ಪಂದಿಸದಿದ್ದಾಗ, ಶಾರ್ಜಾದಲ್ಲಿದ್ದ ಪ್ರಕಾಶ್ ಗೆಳೆಯ ಮನೋಹರ್ ಅವರಲ್ಲಿ ವಿಚಾರಿಸಲು ಕೋರಲಾಯಿತು.

ನಾಪತ್ತೆ ದೂರು ಮತ್ತು ಕಾರಿನಲ್ಲಿ ಶವ ಪತ್ತೆ:

ಸ್ನೇಹಿತ ಮನೋಹರ್ ಪ್ರಕಾಶ್ ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ತೆರಳಿದಾಗ, ವಾಚ್‌ಮನ್ ಮತ್ತು ಕಂಪನಿಯ ಹೆಚ್‌ಆರ್  ವಿಭಾಗದವರು ಪ್ರಕಾಶ್ ಭಾರತಕ್ಕೆ ತೆರಳಿದ್ದಾರೆ ಎಂದು ತಿಳಿಸಿದ್ದರು. ಆದರೆ ಪ್ರಕಾಶ್ ತಾಯ್ನಾಡಿಗೆ ಬಾರದಿದ್ದ ಕಾರಣ ಪಾಸ್‌ಪೋರ್ಟ್ ವಿವರ ಪರಿಶೀಲಿಸಿದಾಗ ಅವರು ಶಾರ್ಜಾದಲ್ಲೇ ಇರುವುದು ಖಚಿತವಾಯಿತು. ತಕ್ಷಣ ನಾಪತ್ತೆ ದೂರು ನೀಡಿದಾಗ, ಓಮನ್ ರಸ್ತೆಯಲ್ಲಿದ್ದ ಕಾರಿನಲ್ಲಿ ಆಗಸ್ಟ್ 12 ರಂದು ಬ್ಯಾಗ್‌ನಲ್ಲಿ ತುಂಬಿದ್ದ ಪ್ರಕಾಶ್ ಅವರ ಮೃತದೇಹ ಪತ್ತೆಯಾಗಿದೆ.

ಪತ್ನಿ ಮತ್ತು ಮಗ ನಾಪತ್ತೆ:

ಪ್ರಕಾಶ್ ಅವರ ಪತ್ನಿ ಟೀನಾ ಕುಂದರ್ (ಶಾಲಾ ಶಿಕ್ಷಕಿ) ಮತ್ತು 10ನೇ ತರಗತಿಯಲ್ಲಿ ಓದುತ್ತಿರುವ ಅವರ ಮಗ ಪ್ರಸ್ತುತ ನಾಪತ್ತೆಯಾಗಿದ್ದಾರೆ. ಅವರು ಶಾರ್ಜಾದಿಂದ ಭಾರತಕ್ಕೆ ಪ್ರಯಾಣಿಸಿರಬಹುದು ಎಂದು ಶಂಕಿಸಲಾಗಿದೆ. ಅಪಾರ್ಟ್‌ಮೆಂಟ್‌ ಸಿಸಿಟಿವಿಯಲ್ಲಿ ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ ಲಗೇಜ್ ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ.

ಮೃತರ ಸಹೋದರ ಅನಿಲ್ ಅವರು ಉಡುಪಿ ಎಸ್‌ಪಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ಯುಎಇಯಿಂದ ಮೃತದೇಹ ತರಲು ಹಾಗೂ ಘಟನೆಯ ಕತ್ಯವನ್ನು ತನಿಖೆ ಮಾಡಲು ಭಾರತೀಯ ಅಧಿಕೃತ ನೆರವು ಕೋರಿದ್ದಾರೆ.

Share

Leave a comment

Leave a Reply

Your email address will not be published. Required fields are marked *