SUDDIKSHANA KANNADA NEWS/ DAVANAGERE/ DATE:25-06-2024
ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಅಂಗಾರಕ ಸಂಕಷ್ಟ ಚತುರ್ಥಿ ಸಂಭ್ರಮ ಮನೆ ಮಾಡಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಅಂಗಾರಕ ಸಂಕಷ್ಟ ಚತುರ್ಥಿಯ ಹಿನ್ನಲೆ ಭಕ್ತಿ ಸಮರ್ಪಣೆ ಮಾಡಿದರು.
ನಗರದ ರಾಮ್ ಅಂಡ್ ಕೋ ವೃತ್ತದಲ್ಲಿನ ಶ್ರೀ ವರಸಿದ್ದಿ ವಿನಾಯಕ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡಿ ಅಂಗಾರಕ ಸಂಕಷ್ಟದ ಪೂಜಾ ಫಲದ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಭಕ್ತರು ಹಾಜರಿದ್ದರು. ವಿಘ್ನನಿವಾರಕನ ದೇವಸ್ಥಾನಗಳಲ್ಲಿ ಜನರು ವಿಶೇಷ ಪೂಜೆ ಸಲ್ಲಿಸಿದರು. ವಿಘ್ನ ನಿವಾರಕನಲ್ಲಿ ಪ್ರಾರ್ಥಿಸಿದರು. ಒಳ್ಳೆಯ ಮಳೆ, ಬೆಳೆ ಆಗಲಿ, ಎಲ್ಲರಿಗೂ ಒಳಿತಾಗಲಿ
ಎಂದು ಗಣೇಶ ದೇವರಲ್ಲಿ ಪ್ರಾರ್ಥಿಸಿದರು.