SUDDIKSHANA KANNADA NEWS/ DAVANAGERE/ DATE:25-02-2025
ದಾವಣಗೆರೆ: ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿ ಪೋಸ್ಟ್ ಹಾಕಿದ್ದ ವ್ಯಕ್ತಿ ವಿರುದ್ಧ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಯುವ ಕಾಂಗ್ರೆಸ್ ಸಮಿತಿ ಸದಸ್ಯರು ಹೊನ್ನಾಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಸಂತೋಷ್ ಲಾಡ್ ಅವರ ವಿರುದ್ಧ ಹೊನ್ನಾಳಿಯ ಕೋಟೆಮಲ್ಲೂರಿನ ದೇವರಾಜ್ ಎಂಬ ವ್ಯಕ್ತಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಸಚಿವರನ್ನು “ಹುಚ್ಚ ವೆಂಕಟ್” ಎಂಬ ಪೋಸ್ಟ್ ಹಾಕಿ ತನ್ನ ವಿಕೃತಿ ತೋರಿಸಿದ್ದಾನೆ. ಈ ವ್ಯಕ್ತಿ ಈ ಹಿಂದೆಯೂ ಕೂಡ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ .ಶಿವಕುಮಾರ್ ಅವರಿಗೆ ನೇಣು ಹಾಕಬೇಕು ಎಂದು ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಹರಿಬಿಟ್ಟಿದ್ದ.
ಆಗ ಸಹ ಯುವ ಕಾಂಗ್ರೆಸ್ ಪ್ರತಿಭಟಿಸಿ ಠಾಣೆಗೆ ಕರೆಸಿ ಈ ರೀತಿ ಮಾಡಬಾರದೆಂದು ಎಚ್ಚರಿಕೆ ನೀಡಲಾಗಿತ್ತು. ಆದರೆ ಈಗ ಈತನು ಸಂತೋಷ್ ಲಾಡ್ ಅವರ ವಿರುದ್ಧ ಈ ರೀತಿ ಪೋಸ್ಟ್ ಹರಿಬಿಟ್ಟಿದ್ದಾನೆ. ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೇವರಾಜ್ ವಿರುದ್ಧ ಯುವ ಕಾಂಗ್ರೆಸ್ ಸಮಿತಿಯ ಸದಸ್ಯರು ದೂರು ನೀಡಿದ್ದಾರೆ.
ಈ ವೇಳೆ ಯುವ ಕಾಂಗ್ರೆಸ್ ಅಧ್ಯಕ್ಷ ಮನು ವಾಲಜ್ಜಿ, ರಾಜ್ಯ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಬಣ್ಣಜ್ಜಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಬಂತಿ ಸಾಸ್ವಳ್ಳಿ ಬ್ಲಾಕ್ ಅಧ್ಯಕ್ಷರಾದ ಸಚಿನ್ ಕಮ್ಮಾರಗಟ್ಟೆ, ಪ್ರಕಾಶ್ ಮಿಯರ್, ಹೊಟ್ಯಾಪುರ ಮಲ್ಲೇಶ್, ಕೂಲಂಬಿ ಸಿದ್ದೇಶ್, ವೀರೇಶ್ ಗಂಟ್ಯಾಪುರ, ಅಣ್ಣಪ್ಪ ಹೊಳೆ ಹರಳಹಳ್ಳಿ, ಅಮೋಘ ಗೊಲ್ಲರಹಳ್ಳಿ, ಶಿವು ಬಿದರಗಡ್ಡೆ, ಪ್ರೇಮ್ ಕುಮಾರ್, ಬಸವರಾಜ್, ಆನಂದ್, ಶಿವರಾಜ್, ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.