Home ಕ್ರೈಂ ನ್ಯೂಸ್ ಸಂಸದೀಯ ಸಮಿತಿ ಸಭೆಯಲ್ಲಿ ಹೈಡ್ರಾಮಾ: ಪ್ರಿಯಾಂಕಾ ಗಾಂಧಿ, ಬಿಜೆಪಿ ಸಂಸದರ ನಡುವೆ ವಾಗ್ಯುದ್ಧ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಸಂಸದೀಯ ಸಮಿತಿ ಸಭೆಯಲ್ಲಿ ಹೈಡ್ರಾಮಾ: ಪ್ರಿಯಾಂಕಾ ಗಾಂಧಿ, ಬಿಜೆಪಿ ಸಂಸದರ ನಡುವೆ ವಾಗ್ಯುದ್ಧ!

Share
ಪ್ರಿಯಾಂಕಾ ಗಾಂಧಿ
Share

ನವದೆಹಲಿ: ಜುಲೈ 20 ರಂದು ನವದೆಹಲಿಯಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ಮೇಲಿನ ಪೊಲೀಸ್ ಲಠಿಚಾರ್ಜ್ ವಿಚಾರ ಸಂಸತ್ತಿನ ಗೃಹ ವ್ಯವಹಾರಗಳ ಸ್ಥಾಯಿ ಸಮಿತಿ ಸಭೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ‘ಮಕ್ಕಳ ಮೇಲಿನ ಅಪರಾಧ’ ಕುರಿತ ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಅಜಯ್ ಮಾಕೆನ್ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಸಂಸದರ ನಡುವೆ ತೀವ್ರ ವಾಗ್ವಾದ ನಡೆಯಿತು.

ಘಟನೆಯ ವಿವರ: ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, “ಸಂಸತ್ ಚಲೋ ಪ್ರತಿಭಟನೆಯಲ್ಲಿ ಅಪ್ರಾಪ್ತ ವಯಸ್ಕರು ಹಾಗೂ ವಿದ್ಯಾರ್ಥಿಗಳ ಮೇಲೂ ಪೊಲೀಸ್ ಲಾಠಿಚಾರ್ಜ್ ನಡೆದಿದೆ. ಹೀಗಾಗಿ ಇದು ‘ಮಕ್ಕಳ ಮೇಲಿನ ಅಪರಾಧ’ ಎಂಬ ಸಭೆಯ ಕಾರ್ಯಸೂಚಿಗೆ ನೇರವಾಗಿ ಸಂಬಂಧಿಸಿದೆ” ಎಂದು ವಾದಿಸಿ, ಚರ್ಚೆಗೆ ಪಟ್ಟು ಹಿಡಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಮಿತಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ರಾಧಾ ಮೋಹನ್ ದಾಸ್ ಅಗರ್ವಾಲ್, “ಈ ವಿಷಯವು ಈಗಾಗಲೇ ಸುಪ್ರೀಂ ಕೋರ್ಟ್‌ನ ಪರಿಶೀಲನೆಯಲ್ಲಿದೆ . ಜೊತೆಗೆ ಸಭೆಯು ನಿಗದಿತ ಕಾರ್ಯಸೂಚಿಗೆ ಮಾತ್ರ ಸೀಮಿತವಾಗಿರಬೇಕು” ಎಂದು ಚರ್ಚೆಗೆ ನಿರಾಕರಿಸಿದರು.

ಇದರಿಂದಾಗಿ ಕಾಂಗ್ರೆಸ್ ಸಂಸದ ಜೈ ಪ್ರಕಾಶ್ ಹಾಗೂ ಬಿಜೆಪಿ ನಾಯಕರ ನಡುವೆ ಸಭೆಯಲ್ಲಿ ಬಿಸಿಯೇರಿದ ಚರ್ಚೆ ನಡೆಯಿತು. ಈಗಾಗಲೇ ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ನೇತೃತ್ವದಲ್ಲಿ 5 ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ಈ ಪೊಲೀಸ್ ಕ್ರಮದ ತನಿಖೆಗೆ ನೇಮಿಸಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles