ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಇನ್ನು ಮೂರು ದಿನಗಳಲ್ಲಿ ಸೈಫ್ ಅಲಿ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್: ಆಸ್ಪತ್ರೆ ವೈದ್ಯರ ಮಾಹಿತಿ

On: January 18, 2025 11:38 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:18-01-2025

ಮುಂಬೈ: ಮುಂಬೈನ ಬಾಂದ್ರಾದಲ್ಲಿನ ತನ್ನ ಮನೆಯಲ್ಲಿ ಹಲ್ಲೆಗೊಳಗಾದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಚೇತರಿಸಿಕೊಳ್ಳುತ್ತಿದ್ದು, ಎರಡು ಮೂರು ದಿನಗಳಲ್ಲಿ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ ಎಂದು ವೈದ್ಯರು ಶನಿವಾರ ತಿಳಿಸಿದ್ದಾರೆ.

54 ವರ್ಷದ ನಟ ಗುರುವಾರ ಮುಂಜಾನೆ ಬಾಂದ್ರಾದಲ್ಲಿನ ಅವರ ಮನೆಯಲ್ಲಿ ನಡೆದ ಕ್ರೂರ ದಾಳಿಯಲ್ಲಿ ಕುತ್ತಿಗೆ ಮತ್ತು ಬೆನ್ನುಮೂಳೆಯ ಬಳಿ ಸೇರಿದಂತೆ ಅನೇಕ ಇರಿತ ಗಾಯಕ್ಕೆ ತುತ್ತಾಗಿದ್ದರು.

ಕೂಡಲೇ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಐಸಿಯುನಿಂದ ಹೊರಕ್ಕೆ ಸ್ಥಳಾಂತರಗೊಂಡಿರುವ ನಟ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸೈಫ್ ಅಲಿ ಖಾನ್ ಅವರು ನಡೆಯುತ್ತಿದ್ದಾರೆ ಮತ್ತು ಸಾಮಾನ್ಯ ಆಹಾರ ಕ್ರಮದಲ್ಲಿದ್ದಾರೆ. ಎರಡರಿಂದ ಮೂರು ದಿನಗಳಲ್ಲಿ ಖಾನ್ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ನಾವು ಅವರ ಪ್ರಗತಿಯನ್ನು ಗಮನಿಸುತ್ತಿದ್ದೇವೆ. ನಮ್ಮ ನಿರೀಕ್ಷೆಯ ಪ್ರಕಾರ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆರೋಗ್ಯದ ಪ್ರಗತಿಗೆ ಅನುಗುಣವಾಗಿ ನಾವು ಅವರಿಗೆ ಬೆಡ್ ರೆಸ್ಟ್ ಅನ್ನು ಸೂಚಿಸಿದ್ದೇವೆ ಮತ್ತು ಅವರು ಆರಾಮದಾಯಕವಾಗಿದ್ದರೆ. ಎರಡು ಮೂರು ದಿನಗಳಲ್ಲಿ ನಾವು ಅವರನ್ನು ಡಿಸ್ಚಾರ್ಜ್ ಮಾಡುತ್ತೇವೆ” ಎಂದು ಡಾ. ನಿತಿನ್ ಹೇಳಿದರು.

ಖಾನ್ ಅವರ ಕೈಗೆ ಎರಡು ಮತ್ತು ಕುತ್ತಿಗೆಯ ಬಲಭಾಗದಲ್ಲಿ ಮೂರು ಗಾಯಗಳಾಗಿದ್ದವು. ಮುಖ್ಯ ಭಾಗವು ಹಿಂಭಾಗದಲ್ಲಿತ್ತು, ಅದು ಬೆನ್ನುಮೂಳೆಯಲ್ಲಿತ್ತು. ವೈದ್ಯರು ಬೆನ್ನಿನ ಚೂಪಾದ ವಸ್ತುವನ್ನು ಹೊರತೆಗೆದಿದ್ದಾರೆ
ಮತ್ತು ಬೆನ್ನುಮೂಳೆಯ ಗಾಯವನ್ನು ಸರಿಪಡಿಸಿದ್ದಾರೆ ಎಂದು ಅವರು ಹೇಳಿದರು. ದರೋಡೆ ಯತ್ನದ ಸಂದರ್ಭದಲ್ಲಿ ಸದ್ಗುರು ಶರಣ್ ಕಟ್ಟಡದ 12 ನೇ ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ಇರಿದ ದಾಳಿಕೋರನನ್ನು ಪತ್ತೆಹಚ್ಚಲು ಮತ್ತು ಹಿಡಿಯಲು ಪೊಲೀಸರು 30 ಕ್ಕೂ ಹೆಚ್ಚು ತಂಡಗಳನ್ನು ರಚಿಸಲಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment