ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ರೂ. 25 ಕೋಟಿ ವೆಚ್ಚದ ಸಿಆರ್‌ಸಿ ಕಟ್ಟಡ ಉದ್ಘಾಟನೆ: ಇದರ ಸ್ಪೆಷಾಲಿಟಿ ಏನು ಗೊತ್ತಾ…?

On: February 19, 2024 8:34 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:19-02-2024

ದಾವಣಗೆರೆ: ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ವತಿಯಿಂದ ದಿವ್ಯಾಂಗರ ಚಿಕಿತ್ಸೆ ಹಾಗೂ ಪುನರ್ವಸತಿಗಾಗಿ ದಾವಣಗೆರೆ ನಗರದ ವೊಡ್ಡಿನಹಳ್ಳಿ ಬಳಿ ಸಂಯುಕ್ತ ಪ್ರಾದೇಶಿಕ ಚಿಕಿತ್ಸಾ ಕೇಂದ್ರಕ್ಕಾಗಿ 9 ಎಕರೆ ಸರ್ಕಾರಿ ಜಾಗ ನೀಡಲಾಗಿದೆ. ಈ ಸ್ಥಳದಲ್ಲಿ ರೂ.25 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾದೇಶಿಕ ಚಿಕಿತ್ಸಾ ಕೇಂದ್ರ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.

ಒಟ್ಟಾರೆಯಾಗಿ ಈ ಸಂಸ್ಥೆಗೆ ವೊಡ್ಡಿನಹಳ್ಳಿ ಬಳಿ 9 ಎಕರೆ ಹಾಗೂ ಕೊಗ್ಗನೂರು ಬಳಿ 7.23 ಎಕರೆ ಹೀಗೆ ಒಟ್ಟು 16.23 ಎಕರೆ ಜಮೀನನ್ನು ನೀಡಲಾಗಿದೆ. ಕರ್ನಾಟಕ ಮತ್ತು ಗೋವಾ ಈ ಎರಡೂ ರಾಜ್ಯಗಳಿಗೆ ಸೇರಿದಂತೆ ವಿಶೇಷ ಚೇತನ ವ್ಯಕ್ತಿಗಳಿಗೆ ಸೇವೆಯನ್ನು ಒದಗಿಸಲು ದಾವಣಗೆರೆಯಲ್ಲಿ 2017 ರ ಫೆಬ್ರವರಿ 17 ರಂದು ಕಾರ್ಯ ಆರಂಭ ಮಾಡಿದೆ. ಇಲ್ಲಿಯವರೆಗೆ ಸುಮಾರು 38557 ಜನರು ಜನರಿಗೆ ಶಾರ್ಟ್ ಟರ್ಮ್ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇಲ್ಲಿಯವರೆಗೆ ಸುಮಾರು 7 ಸಾವಿರಕ್ಕೂ ಹೆಚ್ಚು ದಿವ್ಯಾಂಗರು ವಿಶೇಷ ತರಬೇತಿಗೆ ನೊಂದಾಯಿಸಿಕೊಂಡಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಸುಮಾರು 3212 ಜನರಿಗೆ ವೀಲ್ ಚೇರ್, ಶ್ರವಣ ಯಂತ್ರಗಳನ್ನು ವಿತರಣೆ ಮಾಡಲಾಗಿದೆ.

2019 ರಿಂದ ದಾವಣಗೆರೆ ಸಿಆರ್‌ಸಿ ಕೇಂದ್ರ 2 ಡಿಪ್ಲಮೋ ಕೋರ್ಸುಗಳನ್ನು ನಡೆಸುತ್ತಿದೆ. ಇಂತಹ ಬಹುಮುಖಿ ಕೇಂದ್ರದ ಉದ್ಘಾಟನೆಯು ಫೆ. 21ರ ಮಧ್ಯಾಹ್ನ 1 ಗಂಟೆಗೆ ನೆರವೇರಲಿದೆ. ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಶ್ರೀ ವೀರೇಂದ್ರಕುಮಾರ್‌ರವರು ವರ್ಚುಯಲ್ ಮೂಲಕ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ಆ ದಿನ ಸಿಆರ್‌ಸಿ ಕಟ್ಟಡದ ಬಳಿ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಉದ್ಘಾಟನಾ ಸಮಾರಂಭವನ್ನು ನಾವೆಲ್ಲರೂ ಸಾಕ್ಷೀಕರಿಸಲಿದ್ದೇವೆ ಎಂದು ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment