Home ಉದ್ಯೋಗ ವಾರ್ತೆ ಭಾರೀ ಉದ್ಯೋಗಾವಕಾಶ, ರೈಲ್ವೆ ಇಲಾಖೆಯಲ್ಲಿ ಬಂಪರ್ ನೇಮಕಾತಿ: 11,127 ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆಗಳಿಗೆ ಅರ್ಜಿ ಆಹ್ವಾನ – ಐಟಿಐ, ಡಿಪ್ಲೊಮಾ ಪಾಸಾದವರಿಗೆ ಸುವರ್ಣಾವಕಾಶ!
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ಭಾರೀ ಉದ್ಯೋಗಾವಕಾಶ, ರೈಲ್ವೆ ಇಲಾಖೆಯಲ್ಲಿ ಬಂಪರ್ ನೇಮಕಾತಿ: 11,127 ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆಗಳಿಗೆ ಅರ್ಜಿ ಆಹ್ವಾನ – ಐಟಿಐ, ಡಿಪ್ಲೊಮಾ ಪಾಸಾದವರಿಗೆ ಸುವರ್ಣಾವಕಾಶ!

Share
ರೈಲ್ವೆ
Share

ನವದೆಹಲಿ: ಕೇಂದ್ರ ರೈಲ್ವೆ ಇಲಾಖೆಯಿಂದ ನಿರುದ್ಯೋಗಿ ಯುವಕರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ರೈಲ್ವೆ ನೇಮಕಾತಿ ಮಂಡಳಿ (RRB) ದೇಶಾದ್ಯಂತ ಖಾಲಿ ಇರುವ ಒಟ್ಟು 11,127 ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ (CEN No. 01/2026) ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ:

ಹುದ್ದೆಯ ಹೆಸರು: ಅಸಿಸ್ಟೆಂಟ್ ಲೋಕೋ ಪೈಲಟ್ (ALP)

ಒಟ್ಟು ಹುದ್ದೆಗಳು: 11,127

ವೇತನ ಶ್ರೇಣಿ: ತಿಂಗಳಿಗೆ ರೂ. 19,900/- (7th CPC Level-2 ಆರಂಭಿಕ ವೇತನ)

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಟ್ರಿಕ್ಯುಲೇಶನ್ (SSLC) ಜೊತೆಗೆ ಫಿಟ್ಟರ್, ಎಲೆಕ್ಟ್ರಿಷಿಯನ್, ಡೀಸೆಲ್ ಮೆಕ್ಯಾನಿಕ್ ಸೇರಿದಂತೆ ನಿಗದಿತ ಟ್ರೇಡ್‌ಗಳಲ್ಲಿ ITI ಪೂರ್ಣಗೊಳಿಸಿರಬೇಕು. ಅಥವಾ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ/ಬಿ.ಇ/ಬಿಯರ್ ಟೆಕ್ (Degree) ಪದವಿ ಪಡೆದವರೂ ಸಹ ಅರ್ಜಿ ಸಲ್ಲಿಸಲು ಅರ್ಹರು.

ವಯೋಮಿತಿ (01-07-2026 ಕ್ಕೆ ಅನ್ವಯಿಸುವಂತೆ):

ಸಾಮಾನ್ಯ ಮತ್ತು EWS ಅಭ್ಯರ್ಥಿಗಳಿಗೆ: 18 ರಿಂದ 30 ವರ್ಷ.

ಒಬಿಸಿ (OBC-NCL) ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ (ಗರಿಷ್ಠ 33 ವರ್ಷ).

ಎಸ್ಸಿ/ಎಸ್ಟಿ (SC/ST) ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ (ಗರಿಷ್ಠ 35 ವರ್ಷ).

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: ಮೇ 15, 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 14, 2026 (ರಾತ್ರಿ 11:59 ರವರೆಗೆ)

  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಜೂನ್ 16, 2026

  • ಅರ್ಜಿ ತಿದ್ದುಪಡಿ ವಿಂಡೋ (Correction Window): ಜೂನ್ 17 ರಿಂದ ಜೂನ್ 26, 2026

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-1 ಮತ್ತು CBT-2), ಆಪ್ಟಿಟ್ಯೂಡ್ ಟೆಸ್ಟ್ (CBAT), ದಾಖಲಾತಿ ಪರಿಶೀಲನೆ ಹಾಗೂ ಕಟ್ಟುನಿಟ್ಟಾದ ವೈದ್ಯಕೀಯ ತಪಾಸಣೆ (A-1 ಮೆಡಿಕಲ್ ಸ್ಟ್ಯಾಂಡರ್ಡ್) ಮೂಲಕ ಆಯ್ಕೆ ಮಾಡಲಾಗುತ್ತದೆ. ಗಮನಿಸಿ, ಲೇಸಿಕ್ (Lasik) ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ಈ ಹುದ್ದೆಗಳಿಗೆ ಅರ್ಹರಾಗಿರುವುದಿಲ್ಲ.

ಅರ್ಜಿ ಶುಲ್ಕ:

ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕರು, ಮಹಿಳೆಯರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (EBC): ರೂ. 250/- (CBT-1 ಪರೀಕ್ಷೆಗೆ ಹಾಜರಾದ ನಂತರ ಸಂಪೂರ್ಣ ರಿಫಂಡ್ ಆಗಲಿದೆ).

ಉಳಿದ ಎಲ್ಲಾ ಅಭ್ಯರ್ಥಿಗಳಿಗೆ: ರೂ. 500/- (CBT-1 ಪರೀಕ್ಷೆಗೆ ಹಾಜರಾದ ನಂತರ ರೂ. 400/- ಬ್ಯಾಂಕ್ ಚಾರ್ಜ್ ಕಳೆದು ರಿಫಂಡ್ ಮಾಡಲಾಗುತ್ತದೆ).

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಅಭ್ಯರ್ಥಿಗಳು ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್ rrbapply.gov.in ಗೆ ಭೇಟಿ ನೀಡಿ ಜೂನ್ 14ರ ಒಳಗಾಗಿ ತಮ್ಮ ಸಂಪೂರ್ಣ ವಿವರಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Share

Leave a comment

Leave a Reply

Your email address will not be published. Required fields are marked *