BOB Recruitment 2026:
ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಭರ್ಜರಿ ಅವಕಾಶವೊಂದು ಒದಗಿಬಂದಿದೆ.
ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (BOB) 2026ನೇ ಸಾಲಿನ ಅಪ್ರೆಂಟಿಸ್ ಕಾಯ್ದೆ 1961 ರ ಅಡಿಯಲ್ಲಿ ಒಟ್ಟು 5,000 ಅಪ್ರೆಂಟಿಸ್ ಹುದ್ದೆಗಳ ಭರ್ಜಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ವಿಶೇಷವೆಂದರೆ, ದೇಶದಾದ್ಯಂತ ಪ್ರಕಟವಾಗಿರುವ ಈ 5,000 ಹುದ್ದೆಗಳಲ್ಲಿ ಕರ್ನಾಟಕಕ್ಕೆ ಒಟ್ಟು 483 ಹುದ್ದೆಗಳನ್ನು ಮೀಸಲಿಡಲಾಗಿದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: ಮೇ 19, 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 08, 2026
ಅರ್ಹತೆಯ ಕಟ್-ಆಫ್ ದಿನಾಂಕ: ಮೇ 01, 2026
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Graduation) ಪಡೆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಅಭ್ಯರ್ಥಿಗಳ ವಯಸ್ಸು 01-05-2026 ಕ್ಕೆ ಕನಿಷ್ಠ 20 ವರ್ಷ ತುಂಬಿರಬೇಕು ಮತ್ತು ಗರಿಷ್ಠ 28 ವರ್ಷ ಮೀರಿರಬಾರದು. ನಿಯಮಾನುಸಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ (NCL) ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ.
ಸ್ಟೈಫಂಡ್ (ಮಾಸಿಕ ಭತ್ಯೆ):
ಆಯ್ಕೆಯಾಗುವ ಅಭ್ಯರ್ಥಿಗಳಿಗೆ 12 ತಿಂಗಳ (ಒಂದು ವರ್ಷ) ತರಬೇತಿ ಅವಧಿಯಿರುತ್ತದೆ. ಈ ಅವಧಿಯಲ್ಲಿ ಪ್ರತಿ ತಿಂಗಳು ₹15,000 ನಿಗದಿತ ಸ್ಟೈಫಂಡ್ ನೀಡಲಾಗುತ್ತದೆ. ಇದನ್ನು ಹೊರತುಪಡಿಸಿ ಯಾವುದೇ ಇತರೆ ಭತ್ಯೆಗಳು ಸಿಗುವುದಿಲ್ಲ.
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಆನ್‌ಲೈನ್ ಲಿಖಿತ ಪರೀಕ್ಷೆ (Proctored Online Exam), ದಾಖಲಾತಿ ಪರಿಶೀಲನೆ ಹಾಗೂ ಸ್ಥಳೀಯ ಭಾಷಾ ಪರೀಕ್ಷೆಯ (ಕನ್ನಡ) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆನ್‌ಲೈನ್ ಪರೀಕ್ಷೆಯು ಜಿಎ, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಕಂಪ್ಯೂಟರ್ ಜ್ಞಾನ ಮತ್ತು ಇಂಗ್ಲಿಷ್ ವಿಷಯಗಳನ್ನು ಒಳಗೊಂಡಿದ್ದು, ಯಾವುದೇ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಮೊದಲು ಸರ್ಕಾರದ ಅಧಿಕೃತ ಅಪ್ರೆಂಟಿಸ್‌ಶಿಪ್ ಪೋರ್ಟಲ್‌ಗಳಾದ NATS (nats.education.gov.in) ಅಥವಾ NAPS (apprenticeshipindia.gov.in) ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ಆ ಬಳಿಕ ಇಮೇಲ್ ಮೂಲಕ ಬರುವ ಲಿಂಕ್ ಬಳಸಿ BFSI SSC ಪೋರ್ಟಲ್‌ನಲ್ಲಿ ಅಂತಿಮ ಅರ್ಜಿ ಸಲ್ಲಿಸಿ,
ಶುಲ್ಕ ಪಾವತಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ bankofbaroda.bank.in ಗೆ ಭೇಟಿ ನೀಡಬಹುದು.
- Bank Jobs 2026
- Bank of Baroda 5000 Posts
- Bank of Baroda Apprentice Recruitment 2026
- Bank Recruitment India
- BOB Apprentice Notification
- BOB ಅಪ್ರೆಂಟಿಸ್ ಅಧಿಸೂಚನೆ
- Graduate Jobs in Bank
- How to apply for BOB Apprentice
- Karnataka Bank Job Alerts
- ಉಚಿತ ಉದ್ಯೋಗ ಮಾಹಿತಿ ಕನ್ನಡ
- ಕರ್ನಾಟಕ ಬ್ಯಾಂಕ್ ಉದ್ಯೋಗ ಬಿಡುಗಡೆ
- ಪದವಿ ಮುಗಿಸಿದವರಿಗೆ ಬ್ಯಾಂಕ್ ಕೆಲಸ
- ಬ್ಯಾಂಕ್ ಆಫ್ ಬರೋಡಾ ಅಪ್ರೆಂಟಿಸ್ ಹುದ್ದೆಗಳು
- ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026
- ಬ್ಯಾಂಕ್ ಉದ್ಯೋಗ ಮಾಹಿತಿ
- ಬ್ಯಾಂಕ್ ಉದ್ಯೋಗಗಳು 2026





Leave a comment