SUDDIKSHANA KANNADA NEWS/ DAVANAGERE/ DATE:07-02-2024
ದಾವಣಗೆರೆ: ಕೆಲ ತಿಂಗಳ ಹಿಂದೆ ಪತ್ರಿಕೆಯೊಂದರಲ್ಲಿ ಗುರುಸಿದ್ಧನಗೌಡ ಮತ್ತು ಪುತ್ರರು ಬಿಜೆಪಿಯಿಂದ ಉಚ್ಛಾಟನೆ ಎಂಬ ಸುದ್ದಿ ಜಿಲ್ಲಾ ಮಟ್ಟದಲ್ಲಿ ಒಂದಷ್ಟು ಗೊಂದಲ, ಅಸಮಾಧಾನ, ಬೇಗುದಿ ಹೊರಹಾಕಿತ್ತು. ಈ ಸುದ್ದಿಯು ವೈಯುಕ್ತವಾಗಿ ನಮಗೂ ಬೇಸರ ಉಂಟು ಮಾಡಿತ್ತು. ಆದ್ರೆ, ಈಗ ಮತ್ತೆ ಬಿಜೆಪಿಗೆ ಸ್ವಾಭಿಮಾನದ ಪುನರಾಗಮನ ಆಗಿದೆ ಎಂದು ಆರೈಕೆ ಆಸ್ಪತ್ರೆ ಮುಖ್ಯಸ್ಥರೂ ಆದ ದಾವಣಗೆರೆ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಟಿ. ಜಿ. ರವಿಕುಮಾರ್ ಹೇಳಿದ್ದಾರೆ.
ಉಚ್ಚಾಟನೆ ಸೇರಿದಂತೆ ಎಲ್ಲಾ ಗೊಂದಲಗಳ ಪ್ರಹಸನಗಳಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಇಂದು ತೆರೆ ಎಳೆದು ನಮ್ಮ ಕಾರ್ಯಕರ್ತರು, ಬೆಂಬಲಿಗರು, ಹಿತೈಷಿಗಳಿಗೆ ತೃಪ್ತಿ ಮತ್ತು ಸಂತಸವನ್ನು
ಇಮ್ಮಡಿಗೊಳಿಸಿದರು ಎಂದು ತಿಳಿಸಿದರು.
ಬೆಂಗಳೂರಿನಲ್ಲಿರುವ ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷಕ್ಕೆ ಪೂಜ್ಯ ತಂದೆಯವರು ಮತ್ತು ಮಾಜಿ ಶಾಸಕ ಟಿ. ಗುರುಸಿದ್ಧಗೌಡ ಮತ್ತು ನನ್ನನ್ನು ಪಕ್ಷಕ್ಕೆ ಅಧಿಕೃತವಾಗಿ
ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಅತ್ಯಂತ ಗೌರವಯುತವಾಗಿ ನಮ್ಮೆಲ್ಲರನ್ನೂ ನಡೆಸಿಕೊಂಡ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರನ್ನು ಸೇರಿದಂತೆ ಪಕ್ಷದ ಎಲ್ಲ ನಾಯಕರಿಗೂ ಕೃತಜ್ಞತೆ ಸಲ್ಲಿಸುತ್ತೇವೆ. ವೈಯುಕ್ತಿವಾಗಿ
ನಮಗಾದ ನೋವು, ಅವಮಾನಗಳನ್ನು ಮರೆತು, ಬಿಜೆಪಿಯನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸಲು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಹಾಗೆಯೇ, ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಮಾಡಾಳ್ ಮಲ್ಲಿಕಾರ್ಜುನ ಅವರಿಗೂ ಈ ಸಂದರ್ಭದಲ್ಲಿ ಶುಭ ಕೋರುತ್ತೇನೆ ಎಂದು ಡಾ. ರವಿಕುಮಾರ್ ಟಿ. ಜಿ. ಹೇಳಿದರು.