SUDDIKSHANA KANNADA NEWS/ DAVANAGERE/ DATE:09-02-2024
ದಾವಣಗೆರೆ: ಕಾರ್ಮಿಕರ ಭವಿಷ್ಯನಿಧಿಗೆ ವಂತಿಗೆಯನ್ನು ಪಾವತಿಸದ ಸಂಸ್ಥೆ, ಉದ್ದಿಮೆಗಳಿಂದ ವಿಶೇಷ ವಸೂಲಾತಿ ಆಂದೋಲನ ಕೈಗೊಳ್ಳಲಾಗಿದೆ.
ಐದು ಲಕ್ಷಕ್ಕಿಂತ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸಂಸ್ಥೆ, ಉದ್ದಿಮೆಗಳಿಂದ ವಸೂಲಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಶಿವಮೊಗ್ಗ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಬರುವ ದಾವಣಗೆರೆ ಜಿಲ್ಲೆಯಲ್ಲಿನ ಬಿಕೆಆರ್ ಸ್ವಾಮಿ ಸೆಕ್ಯೂರಿಟಿ ಸರ್ವೀಸ್, ಎಂ.ಸಿ.ಸಿ.ಬಿ.ಬ್ಲಾಕ್, 6 ನೇ ಮುಖ್ಯ ರಸ್ತೆಯ 2 ನೇ ಕ್ರಾಸ್, ದಾವಣಗೆರೆ ಈ ಸಂಸ್ಥೆಯು ರೂ.1,14,48,493 ರೂ.ಗಳ ಬಾಕಿ ಉಳಿಸಿಕೊಂಡಿದೆ. ಹರಿಹರದ ಸೋನ್ಲಕರ್ ಟೂಲ್ ವಕ್ರ್ಸ್ ಪ್ರೈ.ಲಿ, ಹರಿಹರ ಇವರು ರೂ.54,84,159 ಬಾಕಿ ಪಾವತಿಸಬೇಕು. ದಾವಣಗೆರೆ ಕೆ.ಆರ್.ರಸ್ತೆಯಲ್ಲಿನ ಅಲ್ತಾಫ್ ಕ್ರೆಡಿಟ್ ಕೋ-ಆಫರೇಟಿವ್ ಸೊಸೈಟಿ ಇವರು ರೂ.9,56,859 ಗಳನ್ನು ಮತ್ತು ಹರಪನಹಳ್ಳಿಯ ಕಾಟ್ರಾ ಪೊಟೋಶಿಯಂ ಪ್ರೈ.ಲಿ ಇವರು ರೂ.50 ಲಕ್ಷ ಕಾರ್ಮಿಕರ ಭವಿಷ್ಯನಿಧಿ ವಂತಿಗೆಯನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿರುತ್ತಾರೆ.
ಈ ಸಂಸ್ಥೆ, ಉದ್ಯೋಗದಾತರು, ನಿರ್ದೇಶಕರು ಆಸ್ತಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಇದ್ದಲ್ಲಿ ಅದನ್ನು ro.shivamogga@epfindia.gov.in ನಲ್ಲಿ ಹಂಚಿಕೊಳ್ಳಬಹುದಾಗಿದೆ. ಬಾಕಿಯ ವಸೂಲಾತಿಗೆ ಬಲವಂತದ ಕ್ರಮಗಳನ್ನು ಕೈಗೊಳ್ಳುವ ಮೊದಲು ಉದ್ಯೋಗದಾತರು ತಮ್ಮ ಭವಿಷ್ಯನಿಧಿ ಕೊಡುಗೆಗಳನ್ನು ಸಕಾಲದಲ್ಲಿ ಪಾವತಿಸಲು ಶಿವಮೊಗ್ಗ ಪ್ರಾದೇಶಿಕ ಕಚೇರಿ ವಸೂಲಾತಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.