SUDDIKSHANA KANNADA NEWS/ DAVANAGERE/ DATE:10-02-2024
ದಾವಣಗೆರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶುಕ್ರವಾರ ಹೆಣ್ಣು ಮಕ್ಕಳನ್ನು ರಕ್ಷಿಸಿ, ಹೆಣ್ಣು ಮಕ್ಕಳನ್ನು ಓದಿಸಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ, ಹೆಣ್ಣು ಮಕ್ಕಳ ಮೇಲಿನ ಲಿಂಗ ಮತ್ತು ಶೋಷಣೆ ವಿರುದ್ಧ ಹೋರಾಡಿ ಅಭಿಯಾನದಡಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ ಗಮನ ಸೆಳೆಯಿತು.
ಈ ವೇಳೆ ಭಾರತದ ಭೂಪಟ ಜೊತೆಗೆ ಸಂವಿಧಾನ ಪೀಠಿಕೆ ಅರಳಿತು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಿ ಉಪ್ಪಾರ್ ಸೇರಿದಂತೆ ಮತ್ತಿತರರು ಇದ್ದರು.
ಸಂವಿಧಾನ ಜಾಗೃತಿ ಜಾಥಾ:
ದಾವಣಗೆರೆ: ಸಂವಿಧಾನದ ಆಶಯವನ್ನು ಜನಸಾಮಾನ್ಯರಿಗೆ ತಿಳಿಸಿಕೊಡಲು ಸಂವಿಧಾನ ಜಾಗೃತಿ ಜಾಥಾ ಜಿಲ್ಲೆಯಾದ್ಯಂತ ನಡೆಯತ್ತಿದ್ದು, ಫೆ. 11 ಮತ್ತು 12 ರಂದು ಚನ್ನಗಿರಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳಗಳಲ್ಲಿ ಸಂಚರಿಸಲಿದೆ ಎಂದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ನಾಗರಾಜ ತಿಳಿಸಿದ್ದಾರೆ.
ಜಾಥಾವು ಫೆಬ್ರವರಿ 11 ರಂದು ಚನ್ನಗಿರಿ ತಾಲ್ಲೂಕಿನ ಲಿಂಗಾದಹಳ್ಳಿ-ನಲ್ಲೂರು, ನಲ್ಲೂರು-ಇಟ್ಟಿಗೆ, ಇಟ್ಟಿಗೆ-ಬುಳಸಾಗರ, ಬುಳಸಾಗರ-ಕಗತ್ತೂರು, ಕಗತ್ತೂರು-ಅಗರಬನ್ನಿಹಟ್ಟಿ, ಅಗರಬನ್ನಿಹಟ್ಟಿ-ಗರಗ, ಗರಗ-ಮುದಿಗೆರೆ ಮುದಿಗೆರೆ ಗ್ರಾಮದಿಂದ ಮುಂದಿನ ಗ್ರಾಮಗಳಿಗೆ ಸಂಚರಿಸಲಿದೆ.
12ರಂದು ಚನ್ನಗಿರಿ ತಾಲ್ಲೂಕಿನ ಮುದಿಗೆರೆ-ಹಿರೆಮಳಲಿ, ಹಿರೆಮಳಲಿ-ಚೆನ್ನಾಶಪುರ, ಚೆನ್ನಾಶಪುರ-ಜೋಳದಾಳ್, ಜೋಳದಾಳ್-ಹರೋನಹಳ್ಳಿ, ಹಾರೋನಹಳ್ಳಿ-ಅಜ್ಜಿಹಳ್ಳಿ, ಅಜ್ಜಿಹಳ್ಳಿ-ಚನ್ನಗಿರಿ ಟೌನ್, ಚನ್ನಗಿರಿ ಟೌನ್-ತಿಪ್ಪಗೊಂಡನಹಳ್ಳಿ ಜಾಥಾವು ತಿಪ್ಪಗೊಂಡನಹಳ್ಳಿ ಗ್ರಾಮದಿಂದ ಮುಂದಿನ ಗ್ರಾಮಗಳಿಗೆ ಸಂಚರಿಸಲಿದೆ. ಗ್ರಾಮಸ್ಥರು ಸಾರ್ವಜನಿಕರು ಜಾಥಾ ಯಶ್ವಸಿಗೊಳಿಸಲು ಕೋರಿದ್ದಾರೆ.