Home ಕ್ರೈಂ ನ್ಯೂಸ್ ಭಯೋತ್ಪಾದನೆ ಇರುವವರೆಗೆ ಪಾಕ್ ಜತೆ ಮಾತುಕತೆ ಅಸಾಧ್ಯ: ಪಾಕಿಸ್ತಾನದ ವಿದ್ಯಾರ್ಥಿಯ ಪ್ರಶ್ನೆಗೆ ರಾಹುಲ್ ಗಾಂಧಿ ದಿಟ್ಟ ಉತ್ತರ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಭಯೋತ್ಪಾದನೆ ಇರುವವರೆಗೆ ಪಾಕ್ ಜತೆ ಮಾತುಕತೆ ಅಸಾಧ್ಯ: ಪಾಕಿಸ್ತಾನದ ವಿದ್ಯಾರ್ಥಿಯ ಪ್ರಶ್ನೆಗೆ ರಾಹುಲ್ ಗಾಂಧಿ ದಿಟ್ಟ ಉತ್ತರ!

Share
ರಾಹುಲ್ ಗಾಂಧಿ
Share

ಚಿಕಾಗೊ: ಅಮೆರಿಕದ ಪ್ರತಿಷ್ಠಿತ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದದ ವೇಳೆ ಪಾಕಿಸ್ತಾನಿ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಭಾರತ ಮತ್ತು ಪಾಕಿಸ್ತಾನ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಕೆಲಸ ಮಾಡಲು ಅವಕಾಶವಿದೆ. ಆದರೆ, ಇಸ್ಲಾಮಾಬಾದ್‌ನಿಂದ ಮುಂದುವರಿದಿರುವ ಭಯೋತ್ಪಾದನಾ ಬೆಂಬಲವೇ ಉಭಯ ದೇಶಗಳ ನಡುವಿನ ಮಾತುಕತೆಗೆ ದೊಡ್ಡ ತಡೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಮಾಯಕ ಜನರ ಹತ್ಯೆಗಳು ನಿಲ್ಲದ ಹೊರತು ಪಾಕಿಸ್ತಾನದ ಜತೆ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ಅವರು ಖಡಕ್ ಆಗಿ ನುಡಿದಿದ್ದಾರೆ.

ಸಂವಾದದ ವೇಳೆ ಪಾಕಿಸ್ತಾನಿ ವಿದ್ಯಾರ್ಥಿ ‘ಖುಷ್’ ಎಂಬಾತ ಭಾರತ ಮತ್ತು ಪಾಕ್ ಸಂಬಂಧಗಳ ಕುರಿತು ಪ್ರಶ್ನೆ ಕೇಳಿದ್ದನು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ನಮ್ಮ ಅಮಾಯಕ ಜನರು ಸಾವನ್ನಪ್ಪುತ್ತಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವು ಮಾತುಕತೆಗೆ ಅಡ್ಡಿಯಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಭಾರತೀಯ ವಿದೇಶಾಂಗ ನೀತಿಯು ಗಾಜಾ ಸಂಘರ್ಷ ಸೇರಿದಂತೆ ಇತರೆ ವಿಚಾರಗಳಲ್ಲಿ ಇತರರ ಹಿತಾಸಕ್ತಿಗಳ ಬದಲಿಗೆ ಕೇವಲ ಭಾರತದ ಸ್ವಂತ ರಾಷ್ಟ್ರೀಯ ಹಿತಾಸಕ್ತಿಗಳ ಆಧಾರದ ಮೇಲೆಯೇ ರೂಪುಗೊಳ್ಳಬೇಕು ಎಂದು ಪ್ರತಿಪಾದಿಸಿದ್ದಾರೆ.

ಭಯೋತ್ಪಾದನೆಯೇ ದೊಡ್ಡ ತಡೆ: ಪಾಕಿಸ್ತಾನದ ಜತೆ ಬಾಂಧವ್ಯ ಸುಧಾರಣೆಗೆ ಅವಕಾಶವಿದ್ದರೂ, ಉಗ್ರವಾದಕ್ಕೆ ಅಲ್ಲಿಂದ ಸಿಗುತ್ತಿರುವ ಬೆಂಬಲ ದ್ವಿಪಕ್ಷೀಯ ಮಾತುಕತೆಗೆ ಪ್ರಮುಖ ಅಡ್ಡಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಚುನಾವಣೆ ಬಹಷ್ಕರಿಸುವುದಿಲ್ಲ: ಭಾರತೀಯ ಪ್ರಜಾಪ್ರಭುತ್ವ ಅತ್ಯಂತ ಪವಿತ್ರವಾಗಿದ್ದು, ಚುನಾವಣೆಗಳನ್ನು ಬಹಷ್ಕರಿಸಿದರೆ ಅದು ದೇಶದ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಿದಂತೆ ಎಂದಿರುವ ಅವರು, ಎದುರಾಗುವ ಹೊಡೆತಗಳನ್ನು ಎದುರಿಸಿ ವ್ಯವಸ್ಥೆಯ ಲೋಪಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದ್ದಾರೆ.

2014ರ ಚುನಾವಣೆ ಅನುಮಾನ: 2014ರ ಲೋಕಸಭಾ ಚುನಾವಣೆಯ ಗೆಲುವಿನ ಅಂತರವು ವಿವರಿಸಲಾಗದ ರೀತಿಯಲ್ಲಿದ್ದು, ಆ ಸಂದರ್ಭದಲ್ಲಿ ಅನುಮಾನಗಳಿದ್ದರೂ ಸೂಕ್ತ ಪುರಾವೆಗಳಿಲ್ಲದೆ ದೂರು ನೀಡಲು ಸಾಧ್ಯವಾಗಿರಲಿಲ್ಲ ಎಂದು ಅವರು ವಿವರಿಸಿದ್ದಾರೆ.

ವಿದೇಶಾಂಗ ನೀತಿ ಮತ್ತು ಗಾಜಾ ಸಂಘರ್ಷ: 150 ಕೋಟಿ ಜನಸಂಖ್ಯೆ ಹೊಂದಿರುವ ಭಾರತದ ವಿದೇಶಾಂಗ ನೀತಿಯು ಬೇರೆಯವರ ಹಿತಾಸಕ್ತಿಗಳಿಗಿಂತ ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮೊದಲ ಆದ್ಯತೆ ನೀಡಬೇಕು. ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಖಂಡಿಸುವುದರ ಜತೆಗೆ ಗಾಜಾದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನೂ ವಿರೋಧಿಸುವುದಾಗಿ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

Share

Recent Comments

No comments to show.
Related Articles